*ಮಳೆಗಾಲದ ಮಜ*
(ಭಾವಗೀತೆ)
ಬಾನಲಿ ಕಪ್ಪನೆ ಮೇಘವು ತುಂಬಲು
ವರುಣನು ಬಂದನು ಧರೆಯೆಡೆಗೆ
ನೀರಿನ ಹನಿಯನು ಬುವಿಯೆಡೆ ಹರಿಸುತ
ಮುದವನು ತುಂಬಿದ ಮೈ ಮನಕೆ
ಮಳೆಯಲಿ ನಾ ನಿನ್ನ ಜತೆಯಲಿ
ಕುಣಿಯುತ ಸಾಗುವೆ ಬಲು ದೂರ
ಹರಿಯುವ ನದಿಯಲಿ ಕಾಲನು ಆಡಿಸಿ
ನಲಿಯುವ ಸೊಗದಲಿ ಬಾರ
ಕೈಗಳ ಹಿಡಿಯುತ ಜೊತೆಯಲಿ ಸಾಗಲು
ಒಲವಿನ ಜೋಡಿಗೆ ಹರುಷ
ಸೊಗದಲಿ ನಲಿಯುವ ಬಯಕೆಯ ತಂದಿದೆ
ತುಂಬಿಸಿ ಮನದಲಿ ತೋಷ
ಚುಮು ಚುಮು ಚಳಿಯಲಿ ಹನಿಯುವ ಮಳೆಯಲಿ
ನಿನ್ನೊಡನಾಟದ ಮೋದ
ನೆನಪಿನ ಮಾಲೆಗೆ ಗರಿಗಳು ಮೂಡಿದೆ
ಮನದಲಿ ಮಂಜುಳ ನಾದ
,*ಪಂಕಜಾ.ಕೆ. ರಾಮಭಟ್ ಮುಡಿಪು*
Comments
Post a Comment