*ಶ್ರಾವಣ ಮಂಗಳಗೌರಿ*
ಪಂಕಜಾ. ಕೆ.ರಾಮಭಟ್
ಮಂಗಳ ಗೌರಿಯ ಪೂಜೆಯ ಮಾಡಲು
ಅಮ್ಮನು ಹೊರಟಳು ಗುಡಿಯೆಡೆಗೆ
ತಲೆಯಲಿ ಮಲ್ಲಿಗೆ ಮಾಲೆಯ ಮುಡಿಸುತ
ಕರೆದಳು ನನ್ನನು ತನ್ನೆಡೆಗೆ
ಶ್ರಾವಣ ಮಂಗಳವಾರವು ಬಂದಿದೆ
ಮಂಗಳ ಗೌರಿಯ ಪೂಜಿಸಲು
ಬಕುತಿಯ ತೋರುತ ಹಣ್ಣಿನ ಬುಟ್ಟಿಯ ಹಿಡಿಯುತ ಹೊರೆಟೆವು ಅರ್ಪಿಸಲು
ದುರಿತವ ನೀಗುವ ಮಂಗಳ ಗೌರಿಯ
ಪೂಜಿಸಿ ವರಗಳ ಬೇಡೋಣ
ಮುತ್ತೈದೆ ಭಾಗ್ಯವ ಕೊಡುವಂತ ತಾಯಿಯ
ಬಕುತಿಯಲಿ ನುತಿಸುತ ಹಾಡೋಣ
ಹೆಂಗಳೆಯರೆಲ್ಲರೂ ಒಟ್ಟಿಗೆ ಸೇರುತ
ಪೂಜೆಯ ಮಾಡಲು ಹರಸುವಳು
ಮಂಗಳ ಮೂರುತಿ ಮಂಗಳದೇವಿಗೆ
ಜಯ ಜಯವೆನ್ನಲು ಒಲಿಯುವಳು
*ಪಂಕಜಾ. ಕೆ.ರಾಮಭಟ್*
Comments
Post a Comment