ಮುಂಗಾರು ಮಳೆ....
ಮುಂಗಾರು ಮಳೆಯಲ್ಲಿ ತೊನೆದಾಡಿ ಇಳೆ
ಹಸಿರು ಹುಲ್ಲನು ಹಾಸಿ ತುಂಬಿತು ಕಳೆ
ಎಡೆಬಿಡದೆ ಸುರಿಯುತ್ತಿರುವ ಮುಸಲಧಾರೆ
ಮೈದುಂಬಿ ಹರಿಯುತ್ತಿದೆ ಕೆರೆಕಟ್ಟೆ ಹೊಳೆ
ಭೂರಮೆಯು ಹಸಿರುಟ್ಟು ನಲಿದಾಡಿತು
ಮೇರೆಮೀರಿದ ಹರುಷದಲಿ ಕುಣಿದಾಡಿತು
ಭುವನ ಸುಂದರಿ ಭೂತಾಯಿ ಸೆರಗು
ವರುಣನೊಲವಿನ ಸಿಂಚನದಿ ಬೆರಗು
ಪ್ರೇಮಿಗಳ ಮನದಲ್ಲಿ ನವಿರು ನರ್ತನ
ತಲೆದೂಗುವ ಮರ ಬಳ್ಳಿಗಳಲಿ ಹೊಸತನ
ಪ್ರಕೃತಿ ಮಾತೆಯು ಹಬ್ಬಿಸಿದಳು ಒಲವ ಬಳ್ಳಿ
ಹಬ್ಬುತಿದೆ ಎಲ್ಲೆಲ್ಲೂ ಹಸಿರು ಹೂ ಬಳ್ಳಿ
ವರುಣ ತಬ್ಬಿದ ಆ ಸುಂದರ ಘಳಿಗೆ
ಪ್ರಕೃತಿ ಮಾತೆ ಉಬ್ಬಿ ಉತ್ಸ್ಸಾಹದ ಗಡಿಗೆ
ಎಲ್ಲೆಲ್ಲೂ ತುಂಬಿತು ಕಣ್ಣು ಮನ ತುಂಬುವ ಹಸಿರು
ಸವಿಯುವ ಮನಕೆ ತುಂಬುತಿದೆ ಉಸಿರು
ಪಂಕಜಾ.ಕೆ . ರಾಮಭಟ್ ಮುಡಿಪು
Comments
Post a Comment