*ಹಸಿರನ್ನು ಉಳಿಸಿ*
ಎತ್ತ ನೋಡಿದರತ್ತ ಕಪ್ಪು ಮೋಡವು ತುಂಬಿ
ಚಿತ್ತವನು ಕಾಡುತ್ತ ಮತ್ತೆ ಸುರಿಯುತಿದೆ ಮಳೆ
ಬತ್ತ ಬೆಳೆಯುವ ಕನಸು ನನಸಾಗದಂತೆಯೇ
ಸುತ್ತೆಲ್ಲ ತುಂಬಿಹುದು ಕೆಂಪು ಬಣ್ಣದಹೊಳೆ
ಮಾನವನ ದುರಾಶೆಗೆ ಬಲಿಯಾಯಿತು ಧರೆ
ಕಾನನವ ಕಡಿದುದರ ಫಲವಿಂದು ಕಾಣುತಿದೆ
ಜೀವರಾಶಿಗಳನೆಲ್ಲ ಕೊಚ್ಚುತ್ತ ಮಳೆನೀರು
ಸಾವು ನೋವುಗಳಿಗೆ ಕಾರಣವಾಗುತ್ತಿದೆ
ಮಾಡಿದ ಪಾಪಗಳು ಮನುಜನನ ಕಾಡುತಿದೆ
ತೋಡಿದ ಗುಂಡಿಯಲಿ ತಾನಾಗಿ ಬೀಳುವನು
ಕಾಡಿಸದೆ ಪ್ರಕೃತಿಯನು ಉಳಿಸುತ್ತಲಿರುತಿರೆ
ಬಾಡಲಾರದು ನಮ್ಮ ಬದುಕು ತಿಳಿi ನೀನು
ಉಳಿಸಿ ಬೆಳೆಸುತ್ತ ಹಸಿರು ಸಿರಿಯನು
ಸುರಿವ ನೀರನು ಧರೆಯಲ್ಲಿ ಇಂಗಿಸುತ
ಹಸಿರಿದ್ದರೆ ಉಸಿರೆಂದು ತಿಳಿಯುತಲಿ
ಮತ್ತೆ ನಡೆಯೋಣ ನಾವು ಹಸಿರೆಡೆಗೆ
*ಪಂಕಜಾ. ಕೆ.ರಾಮಭಟ್*
Comments
Post a Comment