*ನಾಗರ ಪಂಚಮಿ*
ಹಬ್ಬದ ಸಾಲನು ತರುತಲಿ ಬಂದಿತು
ಶ್ರಾವಣ ಮಾಸದ ಮೊದಲ ಹಬ್ಬ
ಸಡಗರದಿಂದಲಿ ಹಾಲನು ಎರೆಯುತ
ನಾಗನ ಪೂಜಿಸುವಾ ಹಬ್ಬ
ನಾಗನ ಕಲ್ಲಿಗೆ ಹಾಲನು ಎರೆಯುತ
ಬಕುತಿಯಲೆಲ್ಲರು ಪೊಡಮಡಲು
ಶಕುತಿಯ ನೀಡುತ ಹರಸುವನೆಲ್ಲರ
ಭರದಲಿ. ಬರುತಲಿ ಷಣ್ಮುಖನು
ನಾಡಿಗೆ ದೊಡ್ಡ ಹಬ್ಬವಿದೆನ್ನುವ
ಖ್ಯಾತಿಯ ಪಡೆದಿದೆ ಪಂಚಮಿಯು
ಸಕಲ ಇಷ್ಟಾರ್ಥವ ಕರುಣಿಸು ಎನ್ನುತ
ನಾರಿಯರೆಲ್ಲರು ಬೇಡುವರು
ಹಾವು ಕಚ್ಚಿದ ಅಣ್ಣನ ಬದುಕಿಸಿದ
ಹಬ್ಬವಿದೆನ್ನುವ ಪ್ರತೀತಿಯಿದೆ
ಭ್ರಾತೃತ್ವದ ಸಂಕೇತವಾಗಿಯೂ
ಆಚರಿಸುವರಿದನು ಕೆಲವು ಕಡೆ
ಅಣ್ಣ ತಂಗಿಯರ ಬಂಧವ ಬೆಸೆಯುತ
ಮುನ್ನುಡಿಯಿಟ್ಟಿದೆ ಹಬ್ಬಗಳಿಗೆ
ಅಣ್ಣ ತಂಗಿಯರೆಲ್ಲಾ ಸಿಹಿಯನು ತಿಂದು
ಜೋಕಾಲಿಯಾಟವನಾಡುವರು
*ಪಂಕಜಾ.ಕೆ.ರಾಮಭಟ್* ಮುಡಿಪು
Comments
Post a Comment