ಶ್ರೀ ರಾಮ ಪ್ರತಿಷ್ಠಾಪನೆ
ಭಾಮಿನಿ ಷಟ್ಪದಿ
ನಾಡಿನೆಲ್ಲೆಡೆ ಹಬ್ಬಸಡಗರ
ಮೂಡಿ ಬಿಟ್ಟಿದೆ ಜನರ ಮನದಲಿ
ಮೋಡಿಗೊಳಗಾಗಿಹರು ಲೋಗರು ಕಂಡು ರಾಮನನು
ಹಾಡಿ ರಾಮನ ಕೀರ್ತನೆಗಳನು
ಮಾಡಿ ಭಜನೆಯ ಸೇರುತೆಲ್ಲರು
ದೂಡಿ ಮನಸಿನ ಕಾಮನೆಗಳನು ಜಯಿಸಿ ಭಕುತಿಯಲಿ
ಹಲವು ವರುಷವು ಕಾಯ್ದ ಪಲವಿದು
ಬಲವು ಕೊಟ್ಟಿದೆ ಬಂಧು ಜನರಿಗೆ
ಛಲವು ಮೂಡಿದೆ ರಾಮಮಂದಿರವನ್ನು ಕಟ್ಟಲಿಕೆ
ಮಲಿನ ಗೊಂಡಿಹ ಗರ್ಭಗುಡಿಯಲಿ
ಸಲಿಲ ಜಲವನ್ನೆರಚಿ ಬಿಡುತಲಿ
ನಳಿನನಾಭನ ಮೂರ್ತಿ ನಿಲ್ಲಿಸಿ ಪೂಜೆ ಮಾಡುವರು
ಸೊಗವ ತೋರುವ ರಾಮ ಮಂದಿರ
ಜಗದ ಕಣ್ಣನು ಸೆಳೆದು ಬಿಟ್ಟಿದೆ
ಮಗುವ ಮೊಗದಾ ಮೂರ್ತಿ ಬಕುತಿಯ ಭಾವ ಮೂಡಿಸಿದೆ
ಬಗೆಯ ಸೆಳೆಯುತ ಬಕುತರೆಲ್ಲರ
ಮೊಗದಿ ಹಾಸವ ಮೂಡಿಸುತ್ತಲಿ
ಗಗನದಂಚನು ದಾಟಿ ಬಿಟ್ಟಿದೆ ವೇದ ಘೋಷಗಳು
*ಪಂಕಜಾ.ಕೆ. ರಾಮಭಟ್*
Comments
Post a Comment