ಮುದ್ದು ಬಾಲಕೃಷ್ಣ ಭಕ್ತಿಗೀತೆ
ಮುದ್ದು ಬಾಲಕೃಷ್ಣನಿವ
ಕದ್ದು ಬೆಣ್ಣೆ ತಿನ್ನುತಿರಲು
ಸದ್ದು ಕೇಳಲೋಡಿ ಬಂದಳಮ್ಮನಲ್ಲಿಗೆ
ಬಿದ್ದ ಗಡಿಗೆಯೊಳಗಿನಿಂದ
ಮೆದ್ದು ಬೆಣ್ಣೆಯೆಲ್ಲವನ್ನು
ಸದ್ದುಮಾಡದಂತೆ ನಿಂತು ತಾಯ ಕಾಡಿದ
ದುಷ್ಠರನ್ನು ತರಿದು ಬಿಸುಡಿ
ಶಿಷ್ಟರನ್ನು ರಕ್ಷಿಸುತ್ತ
ಕಷ್ಟವನ್ನು ಕಳೆದ ನಮ್ಮ ಮುರಳಿ ಮಾಧವ
ಪೂತನಿಯಾ ಹಾಲು ಕುಡಿದು
ಕಾಳ ಸರ್ಪವನ್ನು ಮೆಟ್ಟಿ
ಗೋವುಗಳನು ಕಾಯ್ದ ನಮ್ಮ ಗೋಪ ಬಾಲನು
ದುಷ್ಠ ಕಂಸನನ್ನು ಕೊಂದು
ರಕ್ಕಸರನು ಮಟ್ಟ ಹಾಕಿ
ಗೋಪಿಕೆಯರ ಜತೆಗೆ ನಲಿದ ಗೋಪಿಲೋಲನು
ರಾಧೆಯೊಡನೆ ಸರಸವಾಡಿ
ತಾಯಿಯನ್ನು ಕಾಡಿಸುತ್ತ
ಬಾಯಿಯಲ್ಲಿ ಜಗವ ತೆರೆದ ಮಾಯಗಾರನು
*ಶ್ರೀಮತಿ ಪಂಕಜಾ. ಕೆ.ರಾಮಭಟ್*
Comments
Post a Comment