ಭಕ್ತಿಗೀತೆ
ಪಾರ್ವತಿ ಮಾತೆ
ಪರ್ವತ ರಾಜನ ಪ್ರೇಮದ ಪುತ್ರಿ
ಪಾರ್ವತಿ ದೇವಿಗೆ ನಮೋ ನಮೋ
ಶಿವನನು ಒಲಿಸಲು ತಪವನು ಮಾಡಿದ
ಶಿವಗೌರಿಯೇ ನಮೋ ನಮೋ
ತದಿಗೆಯ ದಿನದಲಿ ಭೂಮಿಗೆ ಬರುತಿಹ
ನಿನ್ನನು ಪೂಜಿಸಿ ಮೈ ಮರೆವೇ
ಬನ್ನವ ಪಡದೆಯೇ ಬದುಕುವ ಪರಿಯನು
ಕರುಣಿಸು ಮಾತೆಯೇ ಹೇ ಜನನಿ
ಮಂಗಳ ವಾರದಿ ನಿನ್ನನು ಸ್ತುತಿಸಲು
ಮಂಗಳವನು ನೀ ಕೊಡುವೆ
ನವರಾತ್ರಿಯಲಿ. ನವದಿನ ಭಜಿಸಲು
ಬವ ಬಂಧನವ ಕಳೆವೆ
ಮಾತೆಯ ಚರಣಕೆ ಶಿರವನು ಬಾಗಿಸಿ
ಬಕುತಿಯಲಿ ಸ್ತುತಿಸುತ ಬೇಡುವೆನು
ಬೇಡಿದ ವರಗಳ ಕೊಡುತಿಹ ತಾಯಿಗೆ
ಪುಷ್ಪಗಳರ್ಪಿಸಿ ನಮಿಸುವೆನು
ಪಂಕಜಾ. ಕೆ.ರಾಮಭಟ್
Comments
Post a Comment