ಸುಂದರ ಪ್ರಕೃತಿ
ಹಸಿರಿನ ಮರಗಳು ಚಂದದಿ ನಲಿಯುತ
ರಸಿಕರ ಕಂಗಳ ಸೆಳೆಯುತಿವೆ
ಅರಳಿದ ಹೂಗಳು ಗಂಧವ ಸೂಸುತ
ದುಂಬಿಗಳನು ತಾ ಕರೆಯುತಿವೆ
ಹರಿಯುವ ನದಿಗಳ ಮಂಜುಳ ಗಾನವು
ಮೈಮನವನ್ನು ಮರೆಸುತಿವೆ
ಗುಡ್ಡ ಬೆಟ್ಟಗಳು ತುಂಬಿದ ಕಾನನ
ಪ್ರಕೃತಿಯ ಸೊಬಗನು ತೋರುತಿವೆ
ಬೀಸುವ ಗಾಳಿಯು ತಂಪನು ತರುತಲಿ
ಮನಸಿನ ಬೇಸರ ಕಳೆಯುತಿದೆ
ಬಾನಲಿ ಸರಿಯುವ ಬೆಳ್ಳಿಯ ಮೋಡವು
ಮನದಲಿ ಕನಸನು ಬಿತ್ತುತಿದೆ
ಮೋಡದ ಎಡೆಯಲಿ ಮಿನುಗುವ ಚಂದಿರ
ಪ್ರೇಮಿಗಳ ಮನವನು ತಣಿಸುವನು
ಮೂಡಣದಲ್ಲಿ ಮೂಡುವ ರವಿಯು
ಬೆಳಕನು ಜಗದೆಡೆ ಹರಿಸುವನು
ಹಸಿರಿನ ಮಡಿಲಲಿ ಉಸಿರದು ತುಂಬಿದೆ
ಕಸಿದಿದೆ ರಸಿಕರ ಮನವನು
ಬಿಸಿಲಿನ ತಾಪವ ತಣಿಸುತಲಿರುವುದು
ಬೀಸುತ ತಂಪಿನ ಗಾಳಿಯನು
ಶ್ರೀಮತಿ .ಪಂಕಜಾ.ಕೆ. ರಾಮಭಟ್
Comments
Post a Comment