ರಕ್ಷಾ ಬಂಧನ
ಹೊಳೆಯುವ ದಾರವ ಕಟ್ಟುತಲಿರುತಲಿ
ಬಳಿಯಲಿ ನಿಂತಿಹ ತಂಗಿಯನು
ಸೆಳೆಯುತ ತೆಕ್ಕೆಗೆ ಭರವಸೆ ಕೊಡುತಲಿ
ಕಳೆವನು ಅವಳಾ ಭೀತಿಯನು
ರಾಖಿಯ ದಾರವು ಬಂಧವ ಬೆಸೆಯುತ
ಶೋಕವು ಕಳೆಯಿತು ಮನದಲ್ಲಿ
ನಾಕದಲೆಲ್ಲಾ ಹಬ್ಬುತ ಹರಡುತ
ಜೇಕಿತು ಸಹೋದರತೆ ಮನದಲ್ಲಿ
ಕಳಕಳಿ ತುಂಬಿದ ಅಣ್ಣನ ನೋಟವು
ಕಳೆಯಿತು ತಂಗಿಯ ನೋವನ್ನು
ಬೆಳೆಸಿತು ಪ್ರೀತಿಯ ಬಂಧವ ಬೆಸೆಯುತ
ತಿಳಿಸುತ ಸಹೋದರ ಬಾಂಧವ್ಯವನು
ಅಕ್ಷಯವಾಗಲಿ ಅಣ್ಣನ ಪ್ರೀತಿಯು
ರಕ್ಷಣೆ ಕೊಡುತಲಿ ಸಹೋದರಿಗೆ
ತಕ್ಷಣ ಸೆಳೆಯುತ ಮೈಮನ ಮರೆಯದೆ
ಕಕ್ಷೆಯ ಹಾಕುತಿದೆ ಕೈಗಳಿಗೆ
ಪಂಕಜಾ. ಕೆ. ರಾಮಭಟ್ ಮುಡಿಪು
Comments
Post a Comment