ಅಣ್ಣ ತಂಗಿಯ ಬಂಧ
ಅಣ್ಣನ ಕೈಗಳಿಗೆ. ರಾಖಿಯ ಕಟ್ಟಲು
ಕಾಯುತಲಿರುವಳು ತಂಗಿ
ಸುಂದರ ಬಣ್ಣದ ರಾಖಿಯ ಕಟ್ಟುತ
ನಲಿಯುತಲಿರುವಳು ಹಿಗ್ಗಿ
ನಾಡಿನ ಸಂಸ್ಕೃತಿ ಸೌರಭ ಸಾರುವ
ರಕ್ಷಾಬಂಧನದ ಹಬ್ಬವಿದು
ಶ್ರಾವಣ ಮಾಸದ ಹುಣ್ಣಿಮೆ ದಿನದಲಿ
ಆಚರಿಸುವ ಹಬ್ಬವಿದು
ರಾಖಿ ಎನ್ನುವ ಪವಿತ್ರ ದಾರವು
ಬೆಸೆದಿದೆ ಸಹೋದರತೆಯ ಬಂಧವನು
ಅಣ್ಣ ತಂಗಿಯರ ಪ್ರೀತಿಯ ಬಂಧವು
ಜನುಮ ಜನುಮದ ಅನುಬಂಧವನು
ಅಣ್ಣನು ಕೊಡುವನು ರಕ್ಷಣೆ ತಂಗಿಗೆ
ಸಹೋದರಿಯ ಪ್ರೀತಿಗೆ ಸೋಲುತಲಿ
ರಕ್ಷಣೆ ಮತ್ತು ಸಂಬಂಧಗಳ ಬೆಸೆಯುತ
ಭ್ರಾತೃತ್ವದ ಸವಿ ಸವಿಯುತಲಿ
ಜಾತಿ ಧರ್ಮದ ಎಲ್ಲೆಯ ಮೀರುತ
ಬೆಸೆಯಲಿ ಸಹೋದರ ಪ್ರೇಮ
ಪರಸ್ತ್ರೀಯರಲಿ ತಂಗಿಯ ಕಾಣುತಾ
ಅಳಿಯಲಿ ಮನಸಿನ ಕಾಮ
ಪಂಕಜಾ.ಕೆ. ಮುಡಿಪು
Comments
Post a Comment