Skip to main content

ಬಾ ತಾಯಿ ಪರಮೇಶ್ವರಿ

ಬಾ ತಾಯಿ   ಪರಮೇಶ್ವರಿ
(ವಾರ್ಧಕ ಷಟ್ಪದಿ)

ಮಾಸವಿದು ನವರಾತ್ರಿ ಹಬ್ಬದಾ ದಿನವಹುದು
ತೋಷವನು  ಕೊಡುತಿಹಳು ದುರ್ಗಾಂಬೆ  ಭಜಕರಿಗೆ
ಹಾಸವನು ಬೀರುತಲಿ ಬರುತಿಹಳು ಬಿಳಿಯ ವಸನವನುಟ್ಟು ಶೈಲಪುತ್ರಿ 
ಮೋಸವಂಚನೆಗಳನು ಮಾಡುತ್ತಲಿರುವವರ
ರೋಷದಲಿ  ತುಂಡರಿಸಿ ಶಿರವನ್ನು ಬಿಸುಡುತ್ತ
ನಾಶವನು ಮಾಡುತಿಹ ದುಷ್ಟರನು ಶಿಕ್ಷಿಸಲು  ಚಂಡಿ ಚಾಮುಂಡಿಯಾಗಿ 

ಹರನನ್ನೊಲಿಸಲಿಕ್ಕೆ  ತಪವನ್ನು ಮಾಡುತಲಿ
ಕರಗಳಲಿ ಜಪಮಾಲೆ ಹಿಡಿಯುತ್ತ   ಕುಳಿತಿಹಳು 
ಹರನನ್ನೆ ಪತಿಯಾಗಿ ಪಡೆಯಲಿಕೆ ಮನದಲ್ಲಿ
ಶಿವನಾಮ ಪಠಿಸುತ್ತಲಿ
ಹರನೊಲಿದು  ಬಂದಾಗ ದುಷ್ಟರನು  ನಿಗ್ರಹಿಸಿ
ಹರಸತಿಯು ನವದಿನವು ತವಕದಲಿ  ಬರುತಿಹಳು
ಧರೆಯೆಡೆಗೆ   ಮನುಜರಾ ಕಷ್ಟಗಳ ಕಳೆಯಲಿಕೆ  ದುರುಳರನು ಬಡಿಯುತ್ತಲಿ 

ನವದಿನವು   ಬಕುತಿಯಲಿ ಪೂಜೆಯನು ಮಾಡುತಿರೆ 
ಭವಿತದಲಿ ಬರುತಿರುವ ಕಷ್ಟಗಳ ಪರಿಹರಿಸಿ
ನವರಂಗು ತುಂಬುವಳು   ಭರದಲ್ಲಿ ಕರಪಿಡಿದು  ಹರಿಸುತಲಿ ಕರುಣೆಯನ್ನು
ತವನಿಧಿಯೆ ಗಿರಿಜಾಂಬೆ  ಬೇಡುವೆನು ಕರಮುಗಿದು 
ನವರಾತ್ರಿ ದಿನದಲ್ಲಿ ಬಾ ತಾಯೆ ಮನೆ ಮನೆಗೆ
ನವವಿಧದ ಪುಷ್ಪಗಳನರ್ಪಿಸುತ ಬೇಡುವೆನು ಹರಸೆನ್ನ ಹೇ ಜನನಿಯೇ 

ಕರುನಾಡ ಸಂಸ್ಕೃತಿಯ ಸಾರುತಿಹ ಹಬ್ಬವಿದು
ಹರನರಸಿ ಪಾರ್ವತಿಯ ವಿಧವಿಧದ ರೂಪಗಳು
ಮೆರವಣಿಗೆ ಮಾಡುತಲಿ   ಹಲವಿಧದಲರ್ಚಿಸುತ ಪಾಡುವರು ಮಹಿಮೆಯನ್ನು
ತರತರದ ವೇಷಗಳು  ಬ್ಯಾಂಡುವಾದ್ಯದ ಸಹಿತ  
ಬರುತಿಹವು  ನಿನ್ನನ್ನು  ಕರೆತರಲು ಧರೆಯೆಡೆಗೆ
ಹರಸುತಲಿ ಬಾತಾಯಿ  ಬೇಗದಲಿ  ಬಕುತರಾ  ಬೇಡಿಕೆಯನೀಡೇರಿಸಿ
ಪಂಕಜಾ.ಕೆ.ರಾಮಭಟ್

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಒಲವ ಪಯಣ

ಒಲವ ಪಯಣ ನೂರು ನಿರೀಕ್ಷೆಗಳ ಭಾವ ಹೊತ್ತು ಸಪ್ತಪದಿ ತುಳಿದು ಬಂದ ಆ ಹೊತ್ತು ಬಾಳ ಪಯಣದಲಿ ನೀ ಜತೆಯಾದದಿನ ಮರೆಯಲಾರನೆಂದಿಗೂ ಆ ಸುದಿನ ನಿಮ್ಮ  ಜತೆಯಲಿ  ಹೆಜ್ಜೆ  ಹಾಕುತ ವರುಷ  ಕಳೆದುದೇ  ತಿಳಿಯದು ನಡ...