ಪ್ರೇಮಿಗಳ ಸಲ್ಲಾಪ
ಚಂದಿರನು ಬಾನಲ್ಲಿ ಮೋಡಗಳ ಎಡೆಯಲ್ಲಿ
ನಸುನಗುವ ಬೀರುತ್ತ ಬರುತಿರುವನು
ಹುಣ್ಣಿಮೆಯ ದಿನದಲ್ಲಿ ತಾರೆಗಳ ಜತೆಸೇರಿ
ಬೆಳದಿಂಗಳ ಬೆಳಕನ್ನು ಹರಿಸುತಿಹನು
ಶಶಿ ಕಿರಣ ಸೋಕುತಿರೆ ಕೊಳದಲ್ಲಿ ತುಂಬಿರುವ
ನೈದಿಲೆಯು ದಳ ತೆರೆದು ಅರಳುತ್ತಿದೆ
ಶಶಿಯೊಡನೆ ಬೆರೆಯುತ್ತ ಚೆಲ್ಲಾಟವಾಡುತ್ತ
ನೋಡುಗರ ಮೈಯನ್ನು ತಾ ಮರೆಸಿದೆ
ಬೆಳದಿಂಗಳ ಬೆಳಕು ಧರೆಯನ್ನು ತಬ್ಬುತಿ ರೆ
ಪ್ರೇಮಿಗಳು ಮೈಮರೆತು ಕುಳಿತಿರುವರು
ಚೆಂದುಟಿಯ ರಸವನ್ನು ಮೈಮರೆತು ಸವಿಯುತ್ತ
ರಸಗಳಿಗೆಯಲ್ಲಿ ಮೈ ಮರೆತಿರುವರು
ಪ್ರೇಮಿಗಳ ಸರಸವನು ನೋಡುತ್ತ ಚಂದಿರನು
ಮೋಡಗಳ ಮರೆಯಲ್ಲಿ ಮುಖ ಮರೆಸಿದ
ಒಲವನ್ನು ಸುರಿಸುತ್ತ ತಿಂಗಳಿನ ಬೆಳಕಿನಲಿ
ನವ ಜೋಡಿಗಳಿಗೆ ತಾ ಸಹಕರಿಸಿದ
ಪಂಕಜಾ.ಕೆ.ರಾಮಭಟ್
Comments
Post a Comment