[14/03, 4:34 pm] Pankaja K: ಗುರುಕುಲಾ ಜಿಲ್ಲಾಘಟಕ ರಾಯಚೂರು ವಾರಕ್ಕೊಂದು ಕವನ. ಸ್ಪರ್ಧೆಗಾಗಿ ವಿಷಯ..ಅಂತರಂಗದ ಮೌನ ಮಾತು ಒಲವಿನ ಸರದಾರ ಭಾವನೆಗಳ ಭಾರದಲಿ ಹೃದಯ ಜಗ್ಗುತಿದೆ ಅಂತರಂಗದ ಮೌನ ಮಾತಾಗಿ ಹರಿದಿದೆ ಒಲವಿನ ಪಯಣಕ್ಕೆ ನೀ ಜತೆಯಾದಾಗ ಮನದಲಿ ಚೆಲುವಾದ ಕನಸುಗಳರಲಿದೆ ಎದೆಯಾಳದಲಿ ಅವಿತಿರುವ ಕನಸುಗಳು ಗರಿಬಿಚ್ಚಿ ನವಿಲಿನಂತೆ ನರ್ತಿಸುತ್ತಿದೆ ಇನಿಯಾ ನಿನ್ನೊಡನಾಟದಲಿ ಮನವು ಸಂತಸದ ಕಡಲಾಗಿದೆ ಬಾಳಿನ ಪಯಣದಲಿ ನೀ ಜತೆಯಿರಲು ದಾರಿಯ ಕಲ್ಲು ಮುಳ್ಳುಗಳೆಲ್ಲಾ ಹೂವಾಗಿದೆ ನನ್ನ ಮನದ ಒಲವಿನ ಸರದಾರ ನೀನು ಹೃದಯವು ರಾಗವಾಗಿ ಮಧುರ ಗೀತೆ ಹಾಡಿದೆ ನಿನ್ನೆದೆಯ ಪಿಸುಮಾತುಗಳಿಗೆ ಕಿವಿಯಾಗುತ ನಾ ನಲಿಯುತಿರುವೆ ಬಾಂದಳದ ಬೆಳ್ಳಿ ಚುಕ್ಕೆಯಂತೆ ನೀನಿರಲು ಬಾಳೆಲ್ಲಾ ನವ ವಸಂತವೇ ಶ್ರೀಮತಿ.ಪಂಕಜಾ.ಕೆ. ಮುಡಿಪು ಕುರ್ನಾಡು.ದ.ಕ.574153 [21/03, 8:13 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ ರಾಯಚೂರು ವಾರಕ್ಕೊಂದು ಸ್ಪರ್ಧೆಗಾಗಿ ಹಾಯ್ಕುಗಳು ಹಾಯ್ಕು. 1 ಜೀವನ ಗುರಿಯಿರಲಿ ಯಶಸ್ಸು ಪಡೆಯಲು ಜೀವನದಲ್ಲಿ ಹಾಯ್ಕು 2 ಶಿಕ್ಷಣ ಸಿಗಬಹುದು ಜಗತ್ತಿನ ಅರಿವು ಶಿಕ್ಷಣದಿಂದ ಹಾಯ್ಕು 3 ರಾಜಕೀಯ ರಾಜಕೀಯವು ಕಾಲೆಳೆಯುವವರ ಡೊಂಬರಾಟವು ಹಾಯ್ಕು 4 ಉದ್ಯೋಗ ಉದ್ಯೋಗದಿಂದ ಭವ...