Skip to main content

Posts

Showing posts from March, 2025

ರಾಮಕಥೆ ಭಾಗ 4

ರಾಮಕಥೆ  4  ರಾಮನ ಜನನ  ಭಾಮಿನಿ ಷಟ್ಪದಿಯಲ್ಲಿ  ಪಂಕಜಾ ಕೆ ರಾಮಭಟ್ ಯಾಗ ಮಾಡಿದ ಪುಣ್ಯ ಫಲದಲಿ ಬೇಗ ಮೂಡಿತು ಕುಡಿಯು ಗರ್ಭದಿ ಬೀಗಿ ಬಿಟ್ಟನು ರಾಜ ದಶರಥ  ತುಂಬು ಸಂತಸದಿ ಸಾಗಿ ದಿನಗಳು ಕಳೆದು ಬೇಗನೆ ಮಾಗಿ ಶುಭದಿನದಂದು  ರಘುವರ ನೀಗಿ ತಾಯಿಯ ಕಷ್ಟವೆಲ್ಲವ ಧರೆಗೆ ಬಂದಿಹನು ಬಾಲರಾಮನು ಲೀಲೆ ತೋರುತ ಹಾಲು ಕುಡಿಯುತ ಬೆಳೆದು ಬಿಟ್ಟನು ಕಾಲಸರಿಯುತಲಿರಲು ಕಲಿತನು ಸಕಲ  ವಿದ್ಯೆಗಳ ಗೋಳು ಹೇಳುತ ಬಂದ ಮುನಿಗಳು ನಾಳೆ ರಾಮನ ಕಳಿಸಿರೆನ್ನುತ ವೇಳೆ  ಬಂದಿದೆ ರಾಜಪುತ್ರರ ಶಕ್ತಿ ಮೆರೆಯಲಿಕೆ ಅನುಜ  ಲಕ್ಷ್ಮಣನೊಡನೆ  ವನದಲಿ ಮುನಿಗಳೆಲ್ಲರ ಸೇವೆ ಮಾಡುತ ಮನನ ಮಾಡಿದನವರು ಕಲಿಸಿದ ವಿದ್ಯೆ ಬುದ್ದಿಗಳಾ ಹನಿಸಿ ತನ್ನಯ ಬೆವರ ಹನಿಗಳ ಮನೆಯ ತೊರೆದರು ಕ್ಲೇಶ ಪಡದೆಯೆ ಮುನಿವರರಿಗೇ ಕಷ್ಟ ಕೊಡುತಿಹ ರಕ್ಕಸರ ತರಿದು ತಾನು ಮಾಡಿದ ಯಜ್ಞ ಮುಗಿಯಲು ಮೇನೆಯಿಲ್ಲದೆ ನಡೆದು ಬರುತಿರೆ ಕಾನನವು ಕಳೆದಾಗ ಸಿಕ್ಕಿತು ಮಿಥಿಲೆ ಪಟ್ಟಣವು ಮಾನಿನಿಯು ತಾ ಪಡೆದ ಶಾಪದಿ ಧೇನಿಸುತ್ತಲಿ ರಾಮನಾಮವ ಕಾನನದ ಬದಿಯಲ್ಲಿ ಶಿಲೆಯಂತಾಗಿ ಬಿದ್ದಿಹಳು ಪಂಕಜಾ .ಕೆ. ರಾಮಭಟ್

ರಾಮಕಥೆ ಭಾಗ 3

ರಾಮಕಥೆ 3 ಭಾಮಿನಿ ಷಟ್ಪದಿ ಪಂಕಜಾ.ಕೆ. ರಾಮಭಟ್  ತನ್ನ ಮಕ್ಕಳ ತೆರದಿ ಸಾಕಿದ ಚೆನ್ನ ರಾಮನ ಮುದ್ದು ಮಕ್ಕಳು  ಚಿನ್ನ ಪುತ್ತಲಿಯಂತೆ ಹೊಳೆಯುತ ಕಥೆಯನೊರೆಯುವರು ಮುನ್ನ ಮಾಡಿದ ಪುಣ್ಯ ಫಲವಿದು ಕಣ್ಣ  ತುಂಬುವ ಚೆಲುವ ಮೂರುತಿ - -ಯನ್ನು  ಬಣ್ಣಿಸಿ  ಹಾಡಿ ಹೊಗಳುವ ಕಥೆಯ ಕೇಳುವುದು   ದೇಶ  ಕೋಸಲದಲ್ಲಿ ದಶರಥ ತೋಷದಿಂದಲಿ ಮಡದಿಯರೊಡನೆ ಕ್ಲೇಶವಿಲ್ಲದೆ  ರಾಜ್ಯಭಾರವ ಮಾಡುತಿರುತಿದ್ದ ವೇಷ ಹಾಕುವ ಜನರ ಮದ್ಯಧಿ ದೇಶದೆಲ್ಲೆಡೆ  ಕವಿದ ಬೇಸರ ಪಾಶದಂತೆಯೆ ಸೆಳೆದು ಬಿಡುತಲಿ ರಾಜ ಬಳಲಿದನು. ತನಯರಿಲ್ಲದ ಚಿಂತೆ ಕಾಡಲು ಮನನ ಮಾಡುತ  ದೇವ ಚರಣವ ಮುನಿವರೇಣ್ಯರ ಕರೆಸಿ ಕೇಳಿದ ರಾಜ ದಶರಥನು ಮುನಿಗಳುಲಿಯುವ  ಮಾತು ಕೇಳುತ ನೆನೆದು ತನ್ನಯ ತಂದೆ ತಾಯಿಯ ಕನಸು ಕಾಣುತ  ಮಾಡಿ ಬಿಟ್ಟನು ಪುತ್ರ  ಕಾಮೇಷ್ಠಿ ಪಂಕಜಾ.ಕೆ. ರಾಮಭಟ್

ರಾಮಕಥೆ ಭಾಗ 2

ರಾಮಕಥೆ 2 ಭಾಮಿನಿ ಷಟ್ಪದಿ  ಪಂಕಜಾ. ಕೆ. ರಾಮಭಟ್ ಬಂದ ನಾರದರನ್ನು ಕಾಣುತ ಮಂದಿಯೊಳಗುತ್ತಮನ ಚರಿತೆಯ ಕುಂದನಿಲ್ಲದೆ ಪೇಳು ನೀನೆನಗೆಂದ ವಾಲ್ಮೀಕಿ ಸಂದ ಕಾಲದಿ ನಡೆದ ಕಥೆಯಿದು ಕಂದ ರಾಮನ ಚರಿತೆಯೊರೆವೆನು  ಮುಂದೆ ನೀನದನೆತ್ತರಿಸಿ ಬರೆ ರಾಮ ಕಥೆಯನ್ನು ಎಂದು ಹೇಳಿದ ಮಾತನಾಲಿಸಿ ಮುಂದೆ ನಿಲ್ಲುತ  ಕೇಳಿ ಚರಿತೆಯ ಚಂದದಿಂದಲಿ  ರಾಮ ಕಥೆಯನು ಬರೆದ ವಾಲ್ಮೀಕಿ  ಅಂದು ನಡೆದಿಹ ವಿಷಯವೆಲ್ಲವ  ಮಂದಿಯೆಲ್ಲರನೊಟ್ಟುಗೂಡಿಸಿ ಕಂದ  ರಾಮನ ಚರಿತೆಯನುತಾ ಮುದದಿ ಹಾಡಿದನು ಪಂಕಜಾ ಕೆ. ರಾಮಭಟ್

ರಾಮಕಥೆ ಭಾಗ 1

ರಾಮಕಥೆ 1  (ಭಾಮಿನಿ ಷಟ್ಪದಿ ) ರಾಮ ಕಥೆಯನು ಮನದಿ ನೆನೆಯುತ ನೇಮ ನಿಷ್ಠೆಯ ಮಾಡಿ ಮುನಿವರ ಧಾಮದೆಡೆ ಬರುತಿರಲು ಕಂಡನು ತರುಣ ಹಕ್ಕಿಗಳ ಪ್ರೇಮ ಜೋಡಿಯು ಸರಸದಾಟದಿ ಕಾಮಿಸುತಲಿರುವಂಥ ಸಮಯದಿ ಕಾಮ ಬಾಣದ ತೆರದಿ  ಬೇಡನು  ಬಾಣ ಹೂಡಿದನು ಬೇಡ  ಬೀಸಿದ ಬಾಣ ತಗಲಲು ಬಾಡಿ  ಬಿದ್ದಿತು ಪಕ್ಷಿ ದೇಹವು ನೋಡಿ ಮುನಿವರ ಕೋಪದಿಂದಲಿ ಶಾಪ ಕೊಟ್ಟಿಹನು ಜೋಡಿ  ಹಕ್ಕಿಯ ಪ್ರಾಣ ಸಂಕಟ ಮಾಡಿ ಬಿಟ್ಟಿತು  ಮನಕೆ ಬೇಸರ ಕಾಡುತಿರುತಲಿ ರಾಮ ಸೀತೆಯ   ಕಥೆಯು ಮನಸಿನಲಿ ಕೊರಗುತಿರುವಾ ಮುನಿಯ ಕಾಣುತ ಭರಧಿ ಬಂದನು   ಬ್ರಹ್ಮ ದೇವನು ಹರಿಸಿದಂತಹ ಮಾತು ಶ್ಲೋಕದ ತೆರದಲಿರುತಿಹುದು ಕರವ ಹಿಡಿಯುತ  ತಿಳಿಸಿದವನಲಿ ವರವ ಕೊಟ್ಟನು   ಮನದಿ ಮೂಡಲು ಮರುಗದಿರು ನೀ  ರಾಮ ಸೀತೆಯ  ಕಾವ್ಯ ಬರೆಯೆಂದ ಪಂಕಜಾ.ಕೆ. ರಾಮಭಟ್