Skip to main content

Posts

Showing posts from January, 2019

ರೈತ ಅನ್ನದಾತ

ರೈತ ...ಅನ್ನದಾತ ಮುಂಗಾರು ಮಳೆಯಾಗಿ ಕೆರೆಕಟ್ಟೆಗಳು ತುಂಬಿ ತುಳುಕಾಡಿದೆ ಹೊಲದಲ್ಲಿ ದುಡಿಯುತಿರುವನು ರೈತ  ಮಣ್ಣಿನ   ಮಗನೀತ ನೇಗಿಲಲಿ  ಉಳುತ ಬೆಳೆಯನ್ನು ಬೆಳೆದಾತ ಉಣಿಸುವನು ನಮಗೆನಿತ್ಯ ಈತ ನಮ್...

ಕೈತೋಟ

ಕೈತೋಟ ನನ್ನ ಮನೆಯಲೊಂದು ಪುಟ್ಟ ತೋಟವಿರುವುದು ಬಣ್ಣಬಣ್ಣದಹೂಗಳಿಂದ ತುಂಬಿ ಕಣ್ಣ ಸೆಳೆಯುವುದು ಹೂವ ಜೇನ ಸವಿಯಲೆಂದು ನಿತ್ಯ ಪುಟ್ಟ ಪುಟ್ಟ ಹಕ್ಕಿಗಳು ಹಾರಿಬರುವುವು ಬಣ್ಣ ಬಣ್ಣದದುಂಬಿಗಳುಜತೆಗ...

ನೋವು ..ನಲಿವು

ನೋವು ನಲಿವುಗಳಿರಳು ಬಾಳಲಿ ಎದುರಿಸುವ ಛಲ ಮನದಲಿರಲಿ ನೆನಪುಗಳ ಸರಮಾಲೆ ಹರಿದಾಡಿ ಮನದಲಿ ಚಿಂತೆಗಳು ಮನೆಮಾಡಿ ಜೀವನ ಬರಡಾಗಲು ಬಿಡಬೇಡಿ ಚಿಂತೆಗಳ ಮೆಟ್ಟಿ ಕುಣಿದಾಡಿ ಜೀವನ ನೋವು ನಲಿವುಗಳ ಸಂತೆ ಎದ...

ಸ್ವಚ್ಛಂದ ಬದುಕು

ಸ್ವಚ್ಛಂದ ಬದುಕು ಪೇಟೆ ಮನೆಗಳಲ್ಲಿ ತುಂಬಿದೆ ಸಿಡುಕು ಸಿಗಬಹುದೇ ಹಳ್ಳಿಯ ಸ್ವಚ್ಛಂದ ಬದುಕು ಸೂರ್ಯನುದಯಿಸುವಆಗಸದ ಚಂದ ಜನರಿಗಿದೆಯೇ ಬಿಡುವು ಸವಿಯುವ ಅಂದ ಗುಡ್ಡಬೆಟ್ಟಗಳಿಂದ ಬರುವ ತಂಪು ಗಾಳಿ ಸ...

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡ...

ಮಕರ ಸಂಕ್ರಾಂತಿ

ಮಕರ ಸಂಕ್ರಾಂತಿ ನೇಸರನು ಬದಲಿಸಿದ ತನ್ನ ಪಥ ತುಂಬಿತು ಮನೆ ಮನದಲ್ಲಿ ಸಂತಸ ಉತ್ತರಾಯಣದ ಪುಣ್ಯಕಾಲ ಧ್ಯಾನ ಜಪ ತಪಕ್ಕಿದು ಸಕಾಲ ಮಾಗಿಯ ಚಳಿಗಾಳಿಯು ಕಳೆದು ಮೂಡುತಿದೆ ತನುಮನದಲ್ಲಿ ಚುರುಕು ಸುಗ್ಗಿಯ ...

ಗಜಲ್ 19 ಖರ್ಚಿದೆಯೇನು

ಗಜಲ್. 19   ಖರ್ಚಿದೆಯೇನು ನಗು ನಗುತ್ತಾ ಬಾಳಲು ಖರ್ಚಿದೆಯೇನು ಪ್ರೀತಿ ವಿಶ್ವಾಸದಿಂದ ಇರಲು ಖರ್ಚಿದೆಯೇನು ಮನುಜ ಮನುಜರಲ್ಲಿ ದ್ವೇಷವೇಕೆ ಸೌಹಾರ್ದದಿಂದ ಜೀವಿಸಲು ಖರ್ಚಿದೆಯೇನು ಜಗಳ ಕದನಗಳಿಂದ ಸು...

96 ಮಕರ ಸಂಕ್ರಾಂತಿ

ಮಕರ ಸಂಕ್ರಾಂತಿ ನೇಸರನು  ಮಕರ ರಾಶಿಗೆ  ಬಂದ ಮನೆ  ಮನದಲಿ  ಹರ್ಷವ  ತಂದ ಉತ್ತರಾಯಣದ  ಪುಣ್ಯ ಕಾಲವಿದು ಸ್ವರ್ಗದ ಬಾಗಿಲುತೆಗೆಯುವ ದಿನವಿದು ಬೀಸುವ  ಚಳಿ  ಗಾಳಿಯು  ಕರಗಿ ಬಂದಿತು ಮಂದಮಾರುತ  ಭರದಿ ...

ರಾಧೆಯ ಅಳಲು

ರಾಧೆಯ ಅಳಲು ನಿನ್ನಯ ಕೊಳಲಿನ ನಾದಕೆ ಒಲಿದೆ ನಿನ್ನೊಡನಾಟದಿ  ನಿತ್ಯವೂ ನಲಿದೆ ಅಂದಿನ ಒಡನಾಟದ ಸುಂದರ ನೆನಪು ಇಂದಿಗೂ ಇರುವುದು ಮನದಲ್ಲಿ ಹಸಿರು ಯಮುನಾ  ನದಿಯ  ಆ  ತೀರ ಇಂದೀಗ ನೀನಿಲ್ಲದೆಅದು ಬಲು ದ...

ಗಜಲ್7 ಬಾಳು ಬರಡು

ಗಜಲ್   7 ನಿನ್ನೊಡನಾಟದ ದಿನಗಳಿಲ್ಲದೆ ಬಾಳು ಬರಡು ಹೂಮನದಲ್ಲಿ ಒಲವಿಲ್ಲದೆ ಬಾಳು ಬರಡು ಜೀವನದಲ್ಲಿ  ಇರಬೇಕು ಒಲವು ನೀ ಜತೆಯಲಿಲ್ಲದೆ  ಬಾಳು ಬರಡು ಹೂತೋಟದಲಿ ಅರಳಿದೆ ಹೂಗಳು ಒಡತಿಯ  ಆರೈಕೆಯಿಲ್ಲ...

ಶರದಾಸ್ತುತಿ

ಶಾರದಾಸ್ತುತಿ ವಿದ್ಯಾಧಿದೇವತೆ  ಶಾರದೇ ವಂದಿಸುವೆ  ನಿನಗೆ  ಇಂದೇ ಕರಮುಗಿದು   ಬೇಡುವೆ ಭಕುತಿಯಲಿ  ಶಿರಬಾಗುವೆ ವಿದ್ಯೆಬುದ್ಧಿಗಳ ರಾಣಿ  ನೀನು ಶರಣು ಬಂದಿಹ ದೀನ ನಾನು ವಿದ್ಯೆಬುದ್ದಿಗಳ ಕೊಡು ...

ಗಜಲ್6 ಯಾರೇನು ಮಾಡುವರು

ಗಜಲ್ ಕಷ್ಟಗಳು ಬಂದಾಗ ನಗುತಿರಲು ಯಾರೇನು ಮಾಡುವರು ಎದುರಿಸುವಛಲಮನದಲ್ಲಿರಲು ಯಾರೇನು ಮಾಡುವರು ಜೀವನವೊಂದು ಸುಖ  ದುಃಖ ಗಳ ಸಂತೆ ಮನಸುಖುಷಿಯಿಂದತುಂಬಿರಲುಯಾರೇನುಮಾಡುವರು    ಎಲ್ಲೆಮೀರಿದ ನ...

2019

ಇಸವಿ 2019 ಕಳೆಯಿತು ಮತ್ತೊಂದು ಇಸವಿ ಬಂದಿತು ಹೊಸ ಕ್ಯಾಲೆಂಡರ್ ಪ್ರಕೃತಿಯಲ್ಲಿ ಆಗಿದೆಯೇ ಬದಲಾವಣೆ ಆಗಿದ್ದು ಒಂದೇ ಕ್ಯಾಲೆಂಡರ್ ಬದಲಾವಣೆ ಎಲ್ಲಿದೆ ಹೊಸತನ ಏಕಿಷ್ಟು  ಸಂಭ್ರಮ ಯುಗಾದಿಯ ದಿನ ಎಷ್ಟೊಂ...

ಗಜಲ್..5ಖುಷಿಪಡಬಾರದೇನು

ಗಜಲ್ ಅರಳಿರುವ ಹೂವುಗಳ ಕಂಡಾಗ ಖುಷಿ ಪಡಬಾರದೇನು ಬಾನಿನಲಿ ಹಾರಾಡುವ ಹಕ್ಕಿಗಳ ಕಂಡಾಗ ಖುಷಿಪಡಬಾರದೇನು ಕಷ್ಟಗಳ ಸರಮಾಲೆ ಯಲಿ ಮುಳುಗಿ ಬಸವಳಿಯುತಿರಲು ನರ್ತಿಸುವ ನವಿಲುಗಳ ಕಂಡಾಗ ಖುಷಿಪಡಬಾರದೇನ...

ಗಜಲ್...4 ಹೊಸತನ..2

ಗಜಲ್ ..4 ಮೂಡಣದಿ ಉದಯಿಸಿದ ರವಿಕಿರಣಗಳಲಿ ಹೊಸತನ ಮನದಲಿ ಮೂಡಿರುವ ಭಾವನೆಗಳಲಿ ಹೊಸತನ ಹಾರಾಡುವ ಹಕ್ಕಿಗಳ ದಂಡು ತುಂಬಿರಲು ನಭದಲಿ ಅರಳಿದ ಚಿತ್ರಗಳಲಿ ಹೊಸತನ ಒಲವ ಸವಿಯನು ಅನುಭವಿಸುತಿದ್ದರೂ ದಿನ ದಿ...

ಗಜಲ್...3ಹೊಸತನ(1)

ಗಜಲ್ ಬಾಳಿನ  ನಡೆಗೆ ನುಡಿಗಳಲಿರಲು ಹೊಸತನ ದಿನದ ಚಲನೆಗೆ  ಸುಗಮ ಸಂಭ್ರಮಿಸಲು ಹೊಸತನ ಅನುಭವದ ಹೆಜ್ಜೆಗೆ ಸರಿದಾರಿಯಿರಬೇಕು ಹೂವು ಹಣ್ಣುಗಳು ಹಿಂದು  ಮುಂದಿರಲು ಹೊಸತನ ಇನಿಯನೊಡನಾಟದಲಿ ಸುಖಿಸುವ...

ಗಜಲ್...1 ಬೆಳಕು

ಗಜಲ್ ಬಾನಿನಲಿ ಮೂಡುವ ಚುಕ್ಕಿಗಳಲ್ಲಿ ಬೆಳಕು ಮನದಲಿ ಬರುವ ಭಾವನೆಗಳಲ್ಲಿ ಬೆಳಕು ಹೂವೊಂದು ಬಿರಿದರಳಿ ನಗುತಿಹುದು ಚೆಲುವನು ಕಾಣುವ ಕಣ್ಣುಗಳಲ್ಲಿ ಬೆಳಕು ದುಂಬಿಗಳ ಹಾರಾಟದ ಸೆಳೆವ ಸೊಬಗು ಹರುಷ ತು...