Skip to main content

Posts

Showing posts from July, 2025

ಮುಂಗಾರು ಮಳೆ

ಮುಂಗಾರು ಮಳೆ.... ಮುಂಗಾರು ಮಳೆಯಲ್ಲಿ ತೊನೆದಾಡಿ ಇಳೆ ಹಸಿರು ಹುಲ್ಲನು ಹಾಸಿ ತುಂಬಿತು ಕಳೆ  ಎಡೆಬಿಡದೆ ಸುರಿಯುತ್ತಿರುವ ಮುಸಲಧಾರೆ ಮೈದುಂಬಿ ಹರಿಯುತ್ತಿದೆ ಕೆರೆಕಟ್ಟೆ ಹೊಳೆ ಭೂರಮೆಯು ಹಸಿರುಟ್ಟು ನಲಿದಾಡಿತು ಮೇರೆಮೀರಿದ ಹರುಷದಲಿ ಕುಣಿದಾಡಿತು ಭುವನ ಸುಂದರಿ ಭೂತಾಯಿ ಸೆರಗು ವರುಣನೊಲವಿನ  ಸಿಂಚನದಿ ಬೆರಗು ಪ್ರೇಮಿಗಳ ಮನದಲ್ಲಿ ನವಿರು ನರ್ತನ ತಲೆದೂಗುವ ಮರ ಬಳ್ಳಿಗಳಲಿ ಹೊಸತನ ಪ್ರಕೃತಿ  ಮಾತೆಯು  ಹಬ್ಬಿಸಿದಳು ಒಲವ ಬಳ್ಳಿ ಹಬ್ಬುತಿದೆ ಎಲ್ಲೆಲ್ಲೂ ಹಸಿರು ಹೂ ಬಳ್ಳಿ ವರುಣ ತಬ್ಬಿದ ಆ ಸುಂದರ  ಘಳಿಗೆ ಪ್ರಕೃತಿ ಮಾತೆ  ಉಬ್ಬಿ ಉತ್ಸ್ಸಾಹದ ಗಡಿಗೆ ಎಲ್ಲೆಲ್ಲೂ ತುಂಬಿತು ಕಣ್ಣು ಮನ ತುಂಬುವ ಹಸಿರು ಸವಿಯುವ ಮನಕೆ ತುಂಬುತಿದೆ ಉಸಿರು ಪಂಕಜಾ.ಕೆ . ರಾಮಭಟ್ ಮುಡಿಪು

ನಾಗರ ಪಂಚಮಿ

*ನಾಗರ ಪಂಚಮಿ* ಹಬ್ಬದ ಸಾಲನು ತರುತಲಿ ಬಂದಿತು ಶ್ರಾವಣ ಮಾಸದ  ಮೊದಲ ಹಬ್ಬ ಸಡಗರದಿಂದಲಿ  ಹಾಲನು ಎರೆಯುತ ನಾಗನ ಪೂಜಿಸುವಾ ಹಬ್ಬ ನಾಗನ ಕಲ್ಲಿಗೆ ಹಾಲನು ಎರೆಯುತ  ಬಕುತಿಯಲೆಲ್ಲರು  ಪೊಡಮಡಲು  ಶಕುತಿಯ ನೀಡುತ ಹರಸುವನೆಲ್ಲರ  ಭರದಲಿ. ಬರುತಲಿ ಷಣ್ಮುಖನು   ನಾಡಿಗೆ ದೊಡ್ಡ ಹಬ್ಬವಿದೆನ್ನುವ  ಖ್ಯಾತಿಯ ಪಡೆದಿದೆ ಪಂಚಮಿಯು ಸಕಲ ಇಷ್ಟಾರ್ಥವ ಕರುಣಿಸು ಎನ್ನುತ ನಾರಿಯರೆಲ್ಲರು ಬೇಡುವರು   ಹಾವು ಕಚ್ಚಿದ ಅಣ್ಣನ  ಬದುಕಿಸಿದ ಹಬ್ಬವಿದೆನ್ನುವ ಪ್ರತೀತಿಯಿದೆ ಭ್ರಾತೃತ್ವದ ಸಂಕೇತವಾಗಿಯೂ ಆಚರಿಸುವರಿದನು ಕೆಲವು ಕಡೆ ಅಣ್ಣ ತಂಗಿಯರ ಬಂಧವ ಬೆಸೆಯುತ ಮುನ್ನುಡಿಯಿಟ್ಟಿದೆ  ಹಬ್ಬಗಳಿಗೆ ಅಣ್ಣ ತಂಗಿಯರೆಲ್ಲಾ ಸಿಹಿಯನು ತಿಂದು ಜೋಕಾಲಿಯಾಟವನಾಡುವರು  *ಪಂಕಜಾ.ಕೆ.ರಾಮಭಟ್* ಮುಡಿಪು

ಶ್ರಾವಣಾಂಗಲಗೌರಿ

*ಶ್ರಾವಣ ಮಂಗಳಗೌರಿ* ಪಂಕಜಾ. ಕೆ.ರಾಮಭಟ್ ಮಂಗಳ ಗೌರಿಯ ಪೂಜೆಯ ಮಾಡಲು ಅಮ್ಮನು ಹೊರಟಳು ಗುಡಿಯೆಡೆಗೆ ತಲೆಯಲಿ ಮಲ್ಲಿಗೆ ಮಾಲೆಯ ಮುಡಿಸುತ ಕರೆದಳು ನನ್ನನು ತನ್ನೆಡೆಗೆ ಶ್ರಾವಣ ಮಂಗಳವಾರವು  ಬಂದಿದೆ ಮಂಗಳ ಗೌರಿಯ ಪೂಜಿಸಲು ಬಕುತಿಯ  ತೋರುತ   ಹಣ್ಣಿನ ಬುಟ್ಟಿಯ ಹಿಡಿಯುತ  ಹೊರೆಟೆವು  ಅರ್ಪಿಸಲು ದುರಿತವ ನೀಗುವ  ಮಂಗಳ  ಗೌರಿಯ ಪೂಜಿಸಿ ವರಗಳ ಬೇಡೋಣ ಮುತ್ತೈದೆ ಭಾಗ್ಯವ ಕೊಡುವಂತ ತಾಯಿಯ ಬಕುತಿಯಲಿ ನುತಿಸುತ ಹಾಡೋಣ  ಹೆಂಗಳೆಯರೆಲ್ಲರೂ ಒಟ್ಟಿಗೆ ಸೇರುತ ಪೂಜೆಯ ಮಾಡಲು ಹರಸುವಳು ಮಂಗಳ ಮೂರುತಿ ಮಂಗಳದೇವಿಗೆ ಜಯ ಜಯವೆನ್ನಲು  ಒಲಿಯುವಳು *ಪಂಕಜಾ. ಕೆ.ರಾಮಭಟ್*

ಮಳೆಗಾಲದ ಮಜ

*ಮಳೆಗಾಲದ ಮಜ* (ಭಾವಗೀತೆ)  ಬಾನಲಿ  ಕಪ್ಪನೆ ಮೇಘವು ತುಂಬಲು ವರುಣನು ಬಂದನು ಧರೆಯೆಡೆಗೆ ನೀರಿನ ಹನಿಯನು ಬುವಿಯೆಡೆ ಹರಿಸುತ  ಮುದವನು ತುಂಬಿದ ಮೈ ಮನಕೆ  ಮಳೆಯಲಿ ನಾ ನಿನ್ನ ಜತೆಯಲಿ ಕುಣಿಯುತ ಸಾಗುವೆ   ಬಲು ದೂರ  ಹರಿಯುವ ನದಿಯಲಿ  ಕಾಲನು ಆಡಿಸಿ ನಲಿಯುವ ಸೊಗದಲಿ ಬಾರ ಕೈಗಳ ಹಿಡಿಯುತ ಜೊತೆಯಲಿ ಸಾಗಲು ಒಲವಿನ ಜೋಡಿಗೆ ಹರುಷ ಸೊಗದಲಿ ನಲಿಯುವ ಬಯಕೆಯ ತಂದಿದೆ ತುಂಬಿಸಿ ಮನದಲಿ ತೋಷ  ಚುಮು ಚುಮು ಚಳಿಯಲಿ ಹನಿಯುವ  ಮಳೆಯಲಿ  ನಿನ್ನೊಡನಾಟದ  ಮೋದ  ನೆನಪಿನ ಮಾಲೆಗೆ ಗರಿಗಳು ಮೂಡಿದೆ ಮನದಲಿ ಮಂಜುಳ ನಾದ ,*ಪಂಕಜಾ.ಕೆ.  ರಾಮಭಟ್ ಮುಡಿಪು*

ರಾಮನಾಮ ಭಾಮಿನಿ ಷಟ್ಪದಿ

*ಶ್ರೀ ರಾಮ ನಾಮ* ಭಾಮಿನಿ ಷಟ್ಪದಿ ಪರಮ ಪಾವನ ರಾಮ ದೇವರ  ಚರಣಕೆರಗುತ  ಭಕುತಿಯಿಂದಲಿ ವರವ ಬೇಡುವೆ ರಾಮಚಂದ್ರನ ಜಪವ  ಮಾಡುತಲಿ ಕರವ ಮುಗಿಯುತ ಬೇಡಿಕೊಳ್ಳುವೆ ವರದ ಹಸ್ತವ ಶಿರದಲಿರಿಸುತ ಭರದಿ  ಬರುತಲಿ ಕಾಯು ನಮ್ಮನು ಕೊಟ್ಟು ಸಕಲವನು ಮುನ್ನ ಮಾಡಿದ ಪುಣ್ಯ ಫಲವಿದು ಬನ್ನ ಪಡದೆಯೆ  ಬದುಕುತಿರುವೆವು  ನಿನ್ನ ನಾಮದ ಬಲವು ಜತೆಗಿರೆ ಬಾಳು  ಸೊಗಸಿಹುದು ತಣ್ಣಗಾಗಿದೆ  ಮನದ ಕಾಮನೆ ಬಣ್ಣಿಸಲರಿಯೆ ನಿನ್ನ ಮಹಿಮೆಯ ಮನ್ನಿಸೆನ್ನನು ಕಳೆದು ಪಾಪವ ಮುಕುತ ಕರುಣಿಸುತ ದುಷ್ಟ ರಕ್ಕಸರನ್ನು ತರಿಯುತ ಕಷ್ಟ ನಷ್ಟಗಳನ್ನು ಸಹಿಸುತ ಶಿಷ್ಟ ರಕ್ಷಕನೆಂಬ ಬಿರುದನು ಪಡೆದ ದೇವನನು ,_ನೆಷ್ಟು ಬಗೆಯಲಿ ಹಾಡಿ ಹೊಗಳಲಿ_ _ಕಿಷ್ಟು  ಶಕ್ತಿಯ ನಮಗೆ ಕರುಣಿಸು ನಷ್ಟವಿಲ್ಲದೆ ಬಾಳಿ ಬದುಕಲು ನಮ್ಮ ಹರಸುತಿರು *ಪಂಕಜಾ.ಕೆ ರಾಮಭಟ್.*

ಹಸಿರನ್ನು ಉಳಿಸಿ

*ಹಸಿರನ್ನು ಉಳಿಸಿ* ಎತ್ತ ನೋಡಿದರತ್ತ ಕಪ್ಪು ಮೋಡವು ತುಂಬಿ ಚಿತ್ತವನು ಕಾಡುತ್ತ ಮತ್ತೆ ಸುರಿಯುತಿದೆ ಮಳೆ ಬತ್ತ ಬೆಳೆಯುವ ಕನಸು ನನಸಾಗದಂತೆಯೇ ಸುತ್ತೆಲ್ಲ ತುಂಬಿಹುದು   ಕೆಂಪು ಬಣ್ಣದಹೊಳೆ ಮಾನವನ ದುರಾಶೆಗೆ ಬಲಿಯಾಯಿತು ಧರೆ  ಕಾನನವ ಕಡಿದುದರ ಫಲವಿಂದು ಕಾಣುತಿದೆ ಜೀವರಾಶಿಗಳನೆಲ್ಲ ಕೊಚ್ಚುತ್ತ  ಮಳೆನೀರು ಸಾವು ನೋವುಗಳಿಗೆ ಕಾರಣವಾಗುತ್ತಿದೆ ಮಾಡಿದ ಪಾಪಗಳು ಮನುಜನನ ಕಾಡುತಿದೆ ತೋಡಿದ ಗುಂಡಿಯಲಿ  ತಾನಾಗಿ ಬೀಳುವನು ಕಾಡಿಸದೆ  ಪ್ರಕೃತಿಯನು ಉಳಿಸುತ್ತಲಿರುತಿರೆ ಬಾಡಲಾರದು  ನಮ್ಮ ಬದುಕು ತಿಳಿi ನೀನು ಉಳಿಸಿ ಬೆಳೆಸುತ್ತ ಹಸಿರು ಸಿರಿಯನು ಸುರಿವ ನೀರನು ಧರೆಯಲ್ಲಿ ಇಂಗಿಸುತ ಹಸಿರಿದ್ದರೆ  ಉಸಿರೆಂದು ತಿಳಿಯುತಲಿ  ಮತ್ತೆ ನಡೆಯೋಣ ನಾವು ಹಸಿರೆಡೆಗೆ *ಪಂಕಜಾ. ಕೆ.ರಾಮಭಟ್*

ಅರ್ಜುನನ ವಿಷಾದ ಪರಿವರ್ಧಿನಿ

*ಅರ್ಜುನನ  ವಿಷಾದ* ಪರಿವರ್ಧಿನಿ ಷಟ್ಪದಿ ತಾತನು ಭೀಷ್ಮನು ಗುರುಗಳು ಸುಜನರು ಮಾತಿಗೆ ಸಿಲುಕದ ಬಂಧವ ಬೆಸೆದಿಹ ಖ್ಯಾತಿಯ ಪಡೆದಿರುವವರನು ಕಾಣುತ ಪಾರ್ಥನು ನೊಂದಿಹನು ನಾಥನೆ ಮಾಧವ ಬೇಡವಿದೆನಗಿದು ಮಾತೆಯರೆಲ್ಲರ ದುಃಖದಿ ಮುಳುಗಿಸಿ ಸೋತರೆ ಚಿಂತಿಸಲಾರೆನೆನುತಲೀ  ಶಸ್ತ್ರವ ಕೆಳಗಿಟ್ಟ  ಹೇಳಿದ ಮಾತನು ಕೇಳುತ ಕೇಶವ ಬಾಳಿನ ತಿರುಳಿನ ಗೀತೆಯ  ಬೋಧಿಸಿ ಸೋಲಿನ ಭಯವನು  ಕಳೆಯುತ ನೀತಿಯ ಪಾಠವ ತಿಳಿಸಿದನು. ಕಾಲನ ಕರದೊಳಗಿರುತಿಹ ಜೀವವು ಬೀಳಲು  ಬೇಕಿದೆ ನೆಪವೆಂದೆನುತಲಿ ಹೇಳಿದ ಕೇಶವ ಪಾರ್ಥ ನೀನಿದರಲ್ಲಿ ನಿಮಿತ್ತ ಮಾತ್ರವನೈ  ಗೀತೆಯ ಸಾರವ ಬೋಧಿಸುತಿರುತಲಿ ಮಾತಲಿ ಸಿಲುಕಿಸುತರ್ಜುನನೆದೆಯಾ ಭೀತಿಯ ತೊಲಗಿಸಿ  ರಣದಲಿ  ಸೆಣೆಸಲು ಸಜ್ಜನು ಮಾಡಿದನು ನೀತಿಯ  ಮಾತನು ಕೇಳಿದ ಪಾರ್ಥನು ಮಾತಿಲ್ಲದೆಯೇ ಬಿಗಿದನು ಹೆದೆಯನು ಹೇತುವು  ತಾನಿದರಲಿಯೆನ್ನುತ್ತವಿಷಾದವ ಕಳೆದೊಗೆದ *ಪಂಕಜಾ . ಕೆ.ರಾಮಭಟ್*

rama ಪ್ರತಿಷ್ಠಾಪನೆ

ಶ್ರೀ ರಾಮ ಪ್ರತಿಷ್ಠಾಪನೆ  ಭಾಮಿನಿ ಷಟ್ಪದಿ ನಾಡಿನೆಲ್ಲೆಡೆ ಹಬ್ಬಸಡಗರ ಮೂಡಿ ಬಿಟ್ಟಿದೆ ಜನರ ಮನದಲಿ ಮೋಡಿಗೊಳಗಾಗಿಹರು ಲೋಗರು ಕಂಡು ರಾಮನನು ಹಾಡಿ ರಾಮನ ಕೀರ್ತನೆಗಳನು ಮಾಡಿ ಭಜನೆಯ ಸೇರುತೆಲ್ಲರು ದೂಡಿ ಮನಸಿನ ಕಾಮನೆಗಳನು ಜಯಿಸಿ ಭಕುತಿಯಲಿ ಹಲವು ವರುಷವು ಕಾಯ್ದ ಪಲವಿದು ಬಲವು ಕೊಟ್ಟಿದೆ  ಬಂಧು ಜನರಿಗೆ ಛಲವು ಮೂಡಿದೆ  ರಾಮಮಂದಿರವನ್ನು  ಕಟ್ಟಲಿಕೆ ಮಲಿನ ಗೊಂಡಿಹ ಗರ್ಭಗುಡಿಯಲಿ ಸಲಿಲ ಜಲವನ್ನೆರಚಿ ಬಿಡುತಲಿ ನಳಿನನಾಭನ  ಮೂರ್ತಿ ನಿಲ್ಲಿಸಿ ಪೂಜೆ ಮಾಡುವರು ಸೊಗವ ತೋರುವ  ರಾಮ  ಮಂದಿರ ಜಗದ ಕಣ್ಣನು ಸೆಳೆದು ಬಿಟ್ಟಿದೆ ಮಗುವ ಮೊಗದಾ ಮೂರ್ತಿ  ಬಕುತಿಯ ಭಾವ ಮೂಡಿಸಿದೆ ಬಗೆಯ ಸೆಳೆಯುತ ಬಕುತರೆಲ್ಲರ  ಮೊಗದಿ ಹಾಸವ ಮೂಡಿಸುತ್ತಲಿ ಗಗನದಂಚನು ದಾಟಿ ಬಿಟ್ಟಿದೆ  ವೇದ ಘೋಷಗಳು *ಪಂಕಜಾ.ಕೆ. ರಾಮಭಟ್*

ದಿನಮಣಿ

*ದಿನಮಣಿ* ಬಾನಿನಾ ಬಯಲಿನಲಿ ಬಳಿಯುತ್ತ ರಂಗನ್ನು ಮೂಡಿದನು  ಮೂಡಣದಲಿ ಕಾಡಿನಾ ತರುಲತೆಯ  ಖುಷಿಯಲ್ಲಿ ತಬ್ಬುತ್ತ ಇಣುಕುವನು ಬಾಂದಳದಲಿ ಮಂಜಿನಾ ತೆರೆಯನ್ನು ಸರಿಸುತ್ತ ಬರುತಿಹನು ದಿನಮಣಿಯು ಸಂಭ್ರಮದಲಿ ಹಬ್ಬಿದಾ ಹಿಮಮಣಿಯ  ಮುದ್ದಿಸುತಲವನು ಧರೆಯೆಡೆಗೆ ತವಕದಲಿ ಮುಂಜಾನೆಯ  ಸೊಬಗನ್ನು ಕಣ್ಮನಕೆ ತುಂಬುತ್ತ ತರುಲತೆಯ ಮುದ್ದಿಸುತಲಿ ಪರಿಮಳವ ಬೀರುತ್ತ ಅರಳುತಿವೆ ಹೂವುಗಳು ದುಂಬಿಗಳ ಕರೆಯುತ್ತಲಿ ಮೂಡಣದ ಬಾನಿನಲಿ ಮೂಡಿರುವ ಚಿತ್ತಾರ ರಸಿಕರನು ಸೆಳೆಯುತ್ತಿದೆ ಜಡತೆಯನು ಕಳೆಯುತ್ತ ಹೊಸತನವ ತುಂಬುತ್ತ ಮೈಮನವ ಮರೆಸುತ್ತಿದೆ *ಶ್ರೀಮತಿ. ಪಂಕಜಾ.ಕೆ. ರಾಮಭಟ್*

ಮುಳುಗುವ ಸೂರ್ಯ

*ಮುಳುಗುವ ಸೂರ್ಯ*  ಪಡುವಣ ಕಡಲಲಿ ಬಿಂಬವ ಕಲಸುತ ನಡೆದನು ರವಿಯು ಮನೆಯೆಡೆಗೆ  ಕಡಲಿನ ತಡಿಯಲಿ ಕುಳಿತಿಹ  ಮೊಲಗಳು ನಡೆಯುವ ವಿಸ್ಮಯ ನೋಡುತಿವೆ ಕುಂಚದಿ ಬರೆದಿಹ ಚಿತ್ರದ ತೆರದಲಿ ಕೊಂಚವೆ ಮನವನು ಸೆಳೆಯುತಿದೆ  ಮಂಚಕೆ ಕರೆದಿಹ ನಿಶೆ   ಒಡನಾಡಲು  ಹೊಂಚಿದ  ಸಮಯವು ಸರಿಯುತಿದೆ ಬಾನಿನ ಬಣ್ಣವು ನೀರಲಿ ಮೂಡಿದೆ ಕಾನನವೆಲ್ಲವೂ ಕೆಂಪಾಗಿ ಜೇನಿನ ಸವಿಯನು ಜಗದಲಿ ತುಂಬಿಸಿ  ಬಾನಲಿ ಸರಿದನು ತಂಪಾಗಿ ಚಿನ್ನದ ಬಣ್ಣದಿ ಹೊಳೆಯುವ ಶರಧಿ ಕಣ್ಣನು ಬೇಗನೆ ಸೆಳೆಯುತಿದೆ  ಸಣ್ಣನೆ  ರಾಗದಿ ಹಾಡುವ ಬಯಕೆಯು ನನ್ನಯ ಮನದಲಿ ಮೂಡುತಿದೆ *ಪಂಕಜಾ. ಕೆ.ರಾಮಭಟ್*

ರಾಮನಾಮ

ರಾಮನಾಮ ಅಯೋಧ್ಯೆ ಅರಸ ಶ್ರೀ ರಾಮ ದಶರಥನಂದನ ದಾಶರಥಿ ರಾಮ  ಪಾಡುವೆ ನಿನ್ನಯ ನಾಮ ಮುಕ್ತಿಯ ಕೊಡು ನೀ ರಾಮ ಕೌಸಲ್ಯಾ ಸುತ ರಾಜಾರಾಮ ಜಾನಕಿ ರಮಣ  ಸೀತಾರಾಮ ಬೇಡುವೆ ನಿನ್ನನು  ರಾಮ ಅನುದಿನ ಭಜಿಸುತ  ನಾಮ ಸುಂದರ ಮೊಗದವ  ಶ್ರೀ ರಾಮ  ಲಕ್ಷ್ಮಣನನುಜ  ರಘುರಾಮ ದುಷ್ಟರ  ದಮನಿಸು ರಾಮ ಶಿಷ್ಟರ ಕಾಯೋ ರಾಮ ಪಿತೃವಾಕ್ಯ ಪರಿಪಾಲಕ ರಾಮ ದಶಮುಖ ಮರ್ಧನ ರಾಮ ಕರಗಳ ಮುಗಿಯುವೆ ರಾಮ ವರಗಳ ಕೊಡು ನೀ ರಾಮ ಪಂಕಜಾ. ಕೆ.ರಾಮಭಟ್

ಶ್ರೀ ರಾಮ ನಾಮ

*ಶ್ರೀ ರಾಮ ನಾಮ* (ಭಾಮಿನಿ ಷಟ್ಪದಿ) ಪರಮ ಪಾವನ ರಾಮ ದೇವರ  ಚರಣಕೆರಗುತ  ಭಕುತಿಯಿಂದಲಿ ವರವ ಬೇಡುವೆ ರಾಮಚಂದ್ರನ ಜಪವ  ಮಾಡುತಲಿ ಕರವ ಮುಗಿಯುತ ಬೇಡಿಕೊಳ್ಳುವೆ ವರದ ಹಸ್ತವ ಶಿರದಲಿರಿಸುತ ಭರದಿ  ಬರುತಲಿ ಕಾಯು ನಮ್ಮನು ಕೊಟ್ಟು ಸಕಲವನು ಮುನ್ನ ಮಾಡಿದ ಪುಣ್ಯ ಫಲವಿದು ಬನ್ನ ಪಡದೆಯೆ  ಬದುಕುತಿರುವೆವು  ನಿನ್ನ ನಾಮದ ಬಲವು ಜತೆಗಿರೆ ಬಾಳು  ಸೊಗಸಿಹುದು ತಣ್ಣಗಾಗಿದೆ  ಮನದ ಕಾಮನೆ ಬಣ್ಣಿಸಲರಿಯೆ ನಿನ್ನ ಮಹಿಮೆಯ ಮನ್ನಿಸೆನ್ನನು ಕಳೆದು ಪಾಪವ ಮುಕುತ ಕರುಣಿಸುತ ದುಷ್ಟ ರಕ್ಕಸರನ್ನು ತರಿಯುತ ಕಷ್ಟ ನಷ್ಟಗಳನ್ನು ಸಹಿಸುತ ಶಿಷ್ಟ ರಕ್ಷಕನೆಂಬ ಬಿರುದನು ಪಡೆದ ದೇವನನು ,_ನೆಷ್ಟು ಬಗೆಯಲಿ ಹಾಡಿ ಹೊಗಳಲಿ_ _ಕಿಷ್ಟು  ಶಕ್ತಿಯ ನಮಗೆ ಕರುಣಿಸು ನಷ್ಟವಿಲ್ಲದೆ ಬಾಳಿ ಬದುಕಲು ನಮ್ಮ ಹರಸುತಿರು *ಪಂಕಜಾ.ಕೆ ರಾಮಭಟ್*.

ಗುರುಭ್ಯೋ ನಮಃ

 ಗುರುಭ್ಯೋ ನಮಃ (ಭಾಮಿನಿ ಷಟ್ಪದಿ ) ಗುರುವೆ ನಿನ್ನಯ ಚರಣ ಕಮಲಕೆ  ಶಿರವ ಬಾಗಿಸಿ ನಮಿಸುತಿರುವೆನು ಹರಸುಯೆನ್ನನು ಮತಿಯ ಕರುಣಿಸಿ ಅಭಯ ತೋರುತಲಿ  ಬರಿದೆ ನಾಮವ ಪಠಿಸುತಿರುತಲಿ ಹರನ  ರೂಪದ ಗುರುವ ನೆನೆಯಲು ಕರಗಿ ಹೋಯಿತು ಸಕಲ ಕಷ್ಟಗಳೆಲ್ಲ ಬೇಗದಲಿ ತಂದೆ ರಾಮನ ಕಥೆಯ ಹೇಳುತ ಚಂದದಿಂದಲಿ ಹಾಡಿ ಹೊಗಳುತ ನಿಂದೆ ನೀ ಜಗದಲ್ಲಿ  ಬಾನಿನ ತಾರೆಯಂತಿರುತ ತಂದೆಯಂತೆಯೆ  ಶಿಷ್ಯ  ಗಡಣವ  ಹಿಂದೆ  ನೀನಿರುತಿದ್ದು ನಡೆಸುತ ಮುಂದೆ  ಸಾಗಲು  ಮುಕುತಿ ಮಾರ್ಗವ ತೋರಿ  ಹರಸುತ್ತ ಮಾತು ಬಾರದ ಗೋವು ಸಂತತಿ ಭೀತಿಗೊಳಗಾಗಿರುವ ಸಮಯದಿ ಜಾತಿ ಬೇಧವ ಮರೆತು  ಗೋವಿನ ರಕ್ಷಣೆಗೆ ನಿಂತೆ ಖ್ಯಾತಿ ಬಯಸದೆ ಮಗುವ ತೆರದಲಿ ನೀತಿ ನಿಯಮವ ಪಾಲಿಸುತ್ತಲಿ ಜ್ಯೋತಿಯಂತೆಯೆ ಜಗವ ಬೆಳಗಲು ಫಣವ ತೊಟ್ಟಿರುವೆ    ಹಾದಿ ತಪ್ಪಿದ  ಜನರ ಸೇರಿಸಿ ಸಾಧಿಸುವ ಛಲವನ್ನು ಬಿತ್ತುತ  ಮೇದಿನಿಯಲೆಲ್ಲೆಡೆಗೆ ನಿನ್ನಯ ಛಾಪನೊತ್ತಿ ರುವೆ ಬಾಧಿಸುವ ಚಿಂತೆಗಳ  ತೊಳೆಯುತ ಬಾಧೆ ಕಳೆಯುತಲವರ ಮನಸಿಗೆ ಹಾದಿ ತೋರುವ ದಾರಿ ದೀಪದ  ತೆರದಲಿರುತಿರುವೆ ರಾಘವೇಶ್ವರನೆಂಬ  ನಾಮದಿ  ಸಾಗಿ ಬರುತಿರಲಾಗ ಸಭೆಯೆಡೆ  ಬಾಗಿ ನಮಿಸುವರೆಲ್ಲ ಗುರುವಿನ ಚರಣ ಧೇನಿಸುತ ಬೇಗ ಬೇಗನೆ ನಡೆದು ಬರುತಲಿ  ನೀಗಿಸುವೆ ನೀಯವರ ಕಷ್ಟವ ಸೋಗು ಹಾಕದೆ ಕರುಣೆಯಿಂದಲಿ ಹರಸಿ ಹಾರೈಸಿ ಬಂಧಿಸ...