.ಗಜಲ್ (ಪ್ರೀತಿ) ತಾರೆ ಮಿನುಗಿದಂತೆ ಮಿನುಗುತಿರಲಿ ಪ್ರೀತಿ ನಾರಿಯು ನಕ್ಕಂತೆ ಮುದತರಲಿ ಪ್ರೀತಿ ಬೋರ್ಗರೆಯುತಿರುವ ಕಡಲಿನಂತಿದೆ ಜೀವನ ನಮ್ಮ ಬಾಳಲಿ ನಿರಂತರ ಹರಿಯುತಿರಲಿ ಪ್ರೀತಿ ಮಕರಂಧವನು ಹೀರಲು ಹಾರಿ ಬರುತ್ತಿವೆ ದುಂಬಿಗಳು ಮಧು ತುಂಬಿದ ಪಾತ್ರೆಯಂತೆ ತುಂಬಿರಲಿ ಪ್ರೀತಿ ಮುಂಜಾನೆ ಯಲಿ ಇಳೆಯ ಇಬ್ಬನಿ ತಬ್ಬಿದೆ ಮುನಿಸುಗಳಿದ್ದರೂ ಒಳಗಿರಲಿ ಪ್ರೀತಿ ಕೆಸರಿನಲಿ ಅಂಟದೆ ಪಂಕಜ ಇರುವುದು ಕಷ್ಟಗಳ ನಡುವೆಯೂ ನಮ್ಮಲ್ಲಿ ಇರಲಿ ಪ್ರೀತಿ ಪಂಕಜಾ. ಕೆ.