[31/01, 12:07 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ ಚಿಕ್ಕಮಗಳೂರು ವಾರಕ್ಕೊಂದು ಸ್ಪರ್ಧೆಗಾಗಿ ವಚನ ದತ್ತಪದ..ರೈತ ಶೀರ್ಷಿಕೆ ..ಕಾಯಕಯೋಗಿ ರೈತ ನಮ್ಮ ಅನ್ನದಾತನಯ್ಯ ಕಾಯಕಯೋಗಿ ಇವನಯ್ಯ ದೇಶದ ಬೆನ್ನೆಲುಬೇ ಇವನಯ್ಯ ರೈತನಿದ್ದರೆ ಬಾಳು ಹಸನಯ್ಯ ಜಗದ ಜನರಿಗೆ ಅನ್ನವನುಣಿ ಸುವ ಮಾಹಾತ್ಮನಿವ ಪಂಕಜಾರಾಮ ಶ್ರೀಮತಿ ಪಂಕಜಾ .ಕೆ. ಮುಡಿಪು [31/01, 3:15 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ ಚಾಮರಾಜನಗರ ಘಟಕ ವಾರಕ್ಕೊಂದು ಸ್ಪರ್ಧೆಗಾಗಿ ಪದ್ಯಬರೆಯುವ ಸ್ಪರ್ಧೆ ವಿಷಯ.. ಹಳ್ಳಿಯ ಸೊಗಡು ಶೀರ್ಷಿಕೆ..ನಮ್ಮ ಹೆಮ್ಮೆ ನಮ್ಮ ಹಳ್ಳಿ ಹಳ್ಳಿಯ ಸೊಗಡಿನ ಸುಂದರ ತಾಣದಿ ನಲಿಯುವ ಮನೆಯಲಿ ನಾನಿರುವೆ ಸುತ್ತಲೂ ಹರಿಯುವ ನೀರಿನ ತೊರೆಯಲಿ ಈಜುವ ಮಜವನು ನಾ ಪಡೆದೆ ಜುಳು ಜುಳು ಹರಿಯುವ ಮಂಜುಳ ನಾದಕೆ ಮೈಮನ ಮರೆಯುತ ನಾ ನಲಿದೆ ಹಕ್ಕಿಗಳಿಂಚರ ತುಂಬಿದ ಪರಿಸರ ಮುದವನು ತಂದಿತು ಬಾಳಿನಲಿ ಹಸಿರಿನ ಕಾಡಲಿ ಅರಳಿದ ಹೂಗಳು ಪರಿಮಳ ಬೀರುತ ನಲಿಯುತಿದೆ ರಸಿಕರ ಮನವನು ಸೆಳೆಯುವ ನೋಟವು ಚೆಲುವಿನ ತಾಣಕೆ ಮನಸೋತೆ ಗುಡ್ಡಬೆಟ್ಟಗಳ ಸುಂದರ ನೋಟ ಮೈಮನ ಮರೆಸುವ ಕುಳಿರ್ಗಾಳಿ ಹಸಿರಿನ ಸೆರಗನು ಹಾಸುತಲಿರುವ ಪ್ರಕೃತಿಯ ಚೆಲುವಿಗೆ ಬೆರಗಾದೆ ಗದ್ದೆಯ ಬಯಲಲಿ ಎತ್ತುಗಳ ಜತೆಯಲಿ ಓ ಬೇಲೆ ಹಾಡುತ ದುಡಿಯುವ ಆ ದೃಶ್ಯ ಎತ್ತಿನ ಕೊರಳಿನ ಗಂಟೆಯ ನಾದವು ಮನದಲಿ ತುಂಬಿತು ಉಲ್ಲಾಸ...