[21/02, 2:29 PM] pankajarambhat: ಗುರುಕುಲಾ ಚಾಮರಾಜನಗರ ಘಟಕದ ಸ್ಪರ್ಧೆಗಾಗಿ ಹನಿಕವನ ದತ್ತಪದ..ಮೊದಲ ಮಳೆ ಪುಳಕ ಮೊದಲ ಮಳೆಯು ಇಳೆಗೆ ತಂದಿತು ಪುಳಕ ಬಿಸಿಲಿಗೆ ಬಾಡಿದ ತರುಲತೆಗಳಿಗೆ ಹರುಷದ ಜಳಕ ಮಣ್ಣಿನ ಘಮಲು ಸೆಳೆಯಿತು ರಸಿಕರ ನಾಸಿಕ ಸುರಿದ ವರ್ಷದಾರೆಗೆ ಬುವಿಗೆ ಸಂತಸದ ನಡುಕ ಶ್ರೀಮತಿ.ಪಂಕಜಾ ಕೆ ಮುಡಿಪು [21/02, 3:07 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾಘಟಕ ಕೊಡಗು ವಾರಕ್ಕೊಂದು ಸ್ಪರ್ಧೆಗಾಗಿ ಹಾಸ್ಯಕವನ ವಿಷಯ..ಪತಿಮಹಾಶಯ ನನ್ನ ದೇವರು ಮೊದಲ ರಾತ್ರಿ ಪತಿಮಹಾಶಯರು ಬದಿಗೆ ಸರಿದು ಕುಳಿತುಕೊಂಡು ಎದುರೆ ಕುಳಿತ ನನ್ನ ಕಡೆಗೆ ನೋಡುತಿದ್ದರು ಚದುರೆ ನಿನ್ನ ರೂಪ ಚಂದ ಕುದುರೆಯಂತೆ ಕೆನೆವೆಯೇಕೆ ಮದುವೆ ಆಗಿ ಇಂದು ನಾವು ಖುಷಿಯಪಡೋಣ ಬಯಕೆ ಏನು ನಿನ್ನದೆಂದು ನಯದಿ ಕೇಳಿ ನನ್ನ ಮೊಗವ ಕೈಯಲಿಡಿದು ಕಣ್ಣಿನಲ್ಲೇ ಕೆಣಕುತ್ತಿದ್ದರು ಮಯಣದಂತೆ ಅಂಟಿಕೊಂಡು ಹಯದ ತೆರದಿ ನನ್ನ ಸೆಳೆದು ಜಯವ ಪಡೆದ ಹಿಗ್ಗಿನಲ್ಲಿ ನಗುತ ನಿಂತರು ಹೆಣ್ಣೇ ನೀನೇಕೆ ಮುನಿವೇ ಕಣ್ಣು ತುಂಬಾ ನಿದ್ದೆ ಮಾಡು ಬಣ್ಣವಿರುವ ಸೀರೆಯನ್ನು ತಂದು ಕೊಡುವೆನು ಹಣ್ಣು ಹಣ್ಣು ಮುದುಕರಂತೆ ಬೆನ್ನು ಬಗ್ಗಿಸಿ ನಟನೆ ಮಾಡಿ ನನ್ನ ಮೊಗದಿ ನಗುವ ಕಂಡು ಖುಷಿಯ ಪಟ್ಟರು ಇಂತು ಇರುವ ಪತಿಮಹಾಶಯ ದೇವರೆಂದು ತಿಳಿದು ನಾನ...