Skip to main content

Posts

Showing posts from October, 2019

ಗಜಲ್ ಮುಂಜಾನೆ ಬಗ್ಗೆ

ಗಜಲ್   ಮುಂಜಾನೆಯ ಮಂಜಿನಲಿ  ನಡೆಯುತಿರಲು ಮುದ ರವಿ ಉದಯಿಸುವ ಹೊತ್ತಿನಲಿರಲು ಮುದ ಪ್ರಕೃತಿ ಮಾತೆಯ ಮಡಿಲಲ್ಲಿ ನಲಿದಾಡಿದರಾಗದೆ? ಮೈ ಮನವೆಲ್ಲಾ ಉಲ್ಲಾಸ ತುಂಬುತಿರಲು ಮುದ ಎಲ್ಲೆಲ್ಲೂ ಹಸಿರು ತುಂಬಿದ ಸಿರಿಯ ವೈಭವದ ದೃಶ್ಯ ಕಣ್ಣು ತುಂಬುವ ಚೆಲುವ ನೋಡುತ ಕುಳಿತಿರಲು ಮುದ  ಮರಗಿಡಗಳು ಹೂಹಣ್ಣುಗಳಿಂದ ತುಂಬಿ ತೊನೆದಾಡುತ್ತಿದೆಯೇ? ಹಕ್ಕಿಗಳ ಕಲರವವ ಕೇಳುತಿರಲು ಮುದ ಮಲ್ಲಿಗೆಯ ಕಂಪನು ಬೀರುತಿದೆ ಬೀಸುವ ತಂಗಾಳಿ ಚುಮುಚುಮು ಚಳಿಯಲಿ ಕಚಗುಳಿಯಿಡುತಿರಲು ಮುದ ತಾವರೆ ಕೊಳದಲಿ ಅರಳಿವೆ ಬಣ್ಣ ಬಣ್ಣದ ನೈದಿಲೆಗಳು ಬಾನಿನಲಿ ಕಲಸಿದ ಚಿತ್ತಾರಗಳ ಕಾಣುತಿರಲು ಮುದ ಪಂಕಜಾಳಿಗೆ ಸೂರ್ಯೋದಯದ ಬೆಡಗಿನಲಿ ನಲಿಯಲು ಆಶೆ ಬಗೆ ಬಗೆ ಹೂಗಳ ಗಂಧವನು ಸವಿಯುತಿರಲು ಮುದ ಪಂಕಜಾ.ಕೆ

ಅಂತರ

ಅಂತರ ನನ್ನ ನಿನ್ನ ನಡುವೆ ಆಕಾಶ ಭೂಮಿಯಷ್ಟು ಅಂತರ ಎಂದು ಸೃಷ್ಟಿಯಾಯಿತೋ ಈ  ಅಂತರ ಪರಿಹಾರ ಕಾಣದೆ ಬಳಲಿರುವೆ ನಲ್ಲ ದಾರಿಕಾಣದೆ ಪರದಾಡುತಿರುವೆ ಬಿಡಿಸಲಾರದೆ ಈ ಅಂತರದ  ಕಗ್ಗಂಟು ನಾ ಮಾಡಿದ ತಪ್ಪೇನು ಹೇಳು ನಲ್ಲ ತಿಳಿಯದೆ ನೋಯುತಿರುವೆ ನಿರಂತರ ನೀ ದೂರಹೋದರೆ ನಾ ಬಾಳಲಾರೆ ಅಂತರವ ಸರಿಸುತ್ತ ಮನವ ತಣಿಸು ನನ್ನ ನಿನ್ನೊಳಗೆ ಬೇಡ ಈ ಹಮ್ಮು ಬಿಮ್ಮು ಇರಲಿ ಎಂದೆಂದೂ ಪ್ರೀತಿ ಒಲವು ಒಮ್ಮೆ ನೀ ಬಳಿಗೆ ಬಂದು ನಕ್ಕು ಬಿಡು ಈ ಹೃದಯ ನಿನಗಾಗಿ ಮಿಡಿಯುತ್ತಿದೆ ಅಂತರಂಗವ ತೆರೆದಿಟ್ಟು ಕಾದಿರುವೆ ಹೇಗಿದ್ದವಳು  ಹೇಗಾದೆ ಎಲ್ಲವೂ ನಿನಗಾಗಿ ಹೃದಯದ ದನಿ ಕೇಳದೆ ನಿನಗೆ ಯಾಕೆ ದೂರವಾದೆ ಹೇಳು ನೀ ಪ್ರಿಯ ಇನ್ನಾದರೂ ಸರಿಯಲಿ ನನ್ನ ನಿನ್ನ  ಈ ಮುಸುಕಿನೊಳಗಿನ ಗುದ್ದಾಟ ಆಗಿದ್ದೇ ಸಾಕು ಬಿಡು ನಿನ್ನ ಕೋಪ ತಾಪವ ಯಾರಿಗೂ ಸುಖವಿಲ್ಲ ಈ ಮೌನ ಯುದ್ಧ ಸಾಕಿನ್ನು ನಿತ್ಯ ಈ ಮೌನ ಹೋರಾಟ ಸವೆಯಬೇಕಿದೆ ಬಾಳ ದಾರಿ ಇನ್ನು ಬಹುದೂರ ಒಂಟಿ ಪಯಣವಿದು ಮನಕೆ  ಬಲು ಕಷ್ಟ ಇದ್ದಾಗ ಕೋಪತಾಪದಿ ಸುಡಲೇಕೆ ಬಾಳು ನಲುಗೀತು  ನೋಡು ನಮ್ಮ ಪ್ರೀತಿಯ ಹೂವು ಪ್ರೀತಿ ತುಂಬಿದ ಮನವವಿರಲು ನಗುನಗುತಿರಲೇನಿದೆ ಖರ್ಚು ಸರಿಸು  ಬಾ ನನ್ನ ನಿನ್ನ ನಡುವಿನ  ಈ ಅಂತರ ಪಂಕಜಾ ಕೆ

ನಮಿಸುವೆ ದೇವಿ

ನಮಿಸುವೆ ದೇವಿ ಹಣತೆಯ ಬೆಳಗುತ  ರಂಗೋಲಿ ಇಟ್ಟು ಕಾದಿರುವೆ ನಿನ್ನ ಸ್ವಾಗತಕೆ ಮಲ್ಲಿಗೆ ಮಾಲೆಯ ಕಟ್ಟುತ  ಮನವು ನಿನ್ನನೇ ನೆನೆಯುತ್ತಿದೆ ಸಾವಿರ ದೀಪದ ಸಾಲುಗಳೊಂದಿಗೆ ಬಗೆ ಬಗೆ ಹೂಗಳ ಅರ್ಪಿಸುವೆ ಕುಂಕುಮ ಅರ್ಪಿಸಿ ಕರಗಳ ಮುಗಿದು ಮೌನದಿ ನಿನಗೆ ಪೊಡಮಡುವೆ ಅನುದಿನ ನಿನ್ನ  ಚರಣವ ನೆನೆಯುತ ನಮಿಸುವೆ ದೇವಿ ಕೊಡು ವರವ ಮನದ ಕತ್ತಲೆ ಕಳೆದು ಸುಜ್ಞಾನದ ಬೆಳಕನು ತೋರಿ ಕೈ ಹಿಡಿದೆಮ್ಮನು ನೀ ನಡೆಸು ಕರಗಳ  ಮುಗಿದು ಶಿರವನು ಬಾಗಿ ಭಕ್ತಿಯಲಿ ನಿನ್ನನು ಸ್ತುತಿಸುವೆನು ಭಕ್ತಿಗೆ ಒಲಿಯುತ ವರಗಳ ಕೊಡುತ ಪೊರೆ  ನೀ ಎಮ್ಮನು ಅನವರತ ಪಂಕಜಾ.ಕೆ.

ಅಂತರ ಆಕಾಶ ವಿಷಯದ ಬಗ್ಗೆ

ಅಂತರ ನನ್ನ ನಿನ್ನ ನಡುವೆ ಆಕಾಶ ಭೂಮಿಯಷ್ಟು ಅಂತರ ಎಂದು ಸೃಷ್ಟಿಯಾಯಿತೋ ಈ  ಅಂತರ ಪರಿಹಾರ ಕಾಣದೆ ಬಳಲಿರುವೆ ನಲ್ಲ ದಾರಿಕಾಣದೆ ಪರದಾಡುತಿರುವೆ ಬಿಡಿಸಲಾರದೆ ಈ ಅಂತರದ  ಕಗ್ಗಂಟು ನಾ ಮಾಡಿದ ತಪ್ಪೇನು ಹೇಳು ನಲ್ಲ ತಿಳಿಯದೆ ನೋಯುತಿರುವೆ ನಿರಂತರ ನೀ ದೂರಹೋದರೆ ನಾ ಬಾಳಲಾರೆ ಅಂತರವ ಸರಿಸುತ್ತ ಮನವ ತಣಿಸು ನನ್ನ ನಿನ್ನೊಳಗೆ ಬೇಡ ಈ ಹಮ್ಮು ಬಿಮ್ಮು ಇರಲಿ ಎಂದೆಂದೂ ಪ್ರೀತಿ ಒಲವು ಒಮ್ಮೆ ನೀ ಬಳಿಗೆ ಬಂದು ನಕ್ಕು ಬಿಡು ಈ ಹೃದಯ ನಿನಗಾಗಿ ಮಿಡಿಯುತ್ತಿದೆ ಅಂತರಂಗವ ತೆರೆದಿಟ್ಟು ಕಾದಿರುವೆ ಹೇಗಿದ್ದವಳು  ಹೇಗಾದೆ ಎಲ್ಲವೂ ನಿನಗಾಗಿ ಹೃದಯದ ದನಿ ಕೇಳದೆ ನಿನಗೆ ಯಾಕೆ ದೂರವಾದೆ ಹೇಳು ನೀ ಪ್ರಿಯ ಇನ್ನಾದರೂ ಸರಿಯಲಿ ನನ್ನ ನಿನ್ನ  ಈ ಮುಸುಕಿನೊಳಗಿನ ಗುದ್ದಾಟ ಆಗಿದ್ದೇ ಸಾಕು ಬಿಡು ನಿನ್ನ ಕೋಪ ತಾಪವ ಯಾರಿಗೂ ಸುಖವಿಲ್ಲ ಈ ಮೌನ ಯುದ್ಧ ಸಾಕಿನ್ನು ನಿತ್ಯ ಈ ಮೌನ ಹೋರಾಟ ಸವೆಯಬೇಕಿದೆ ಬಾಳ ದಾರಿ ಇನ್ನು ಬಹುದೂರ ಒಂಟಿ ಪಯಣವಿದು ಮನಕೆ  ಬಲು ಕಷ್ಟ ಇದ್ದಾಗ ಕೋಪತಾಪದಿ ಸುಡಲೇಕೆ ಬಾಳು ನಲುಗೀತು  ನೋಡು ನಮ್ಮ ಪ್ರೀತಿಯ ಹೂವು ಪ್ರೀತಿ ತುಂಬಿದ ಮನವವಿರಲು ನಗುನಗುತಿರಲೇನಿದೆ ಖರ್ಚು ಸರಿಸು  ಬಾ ನನ್ನ ನಿನ್ನ ನಡುವಿನ  ಈ ಅಂತರ ಪಂಕಜಾ ಕೆ

ಕೂಡಿ ಬಾಳಬೇಕು

ಕೂಡಿ ಬಾಳಬೇಕು ಮನೆಯೆಂದ ಮೇಲೆ ಜನರಿರಬೇಕು ಜನರಿದ್ದಲ್ಲಿ ಭಿನ್ನಾಭಿಪ್ರಾಯ ಸಹಜವಲ್ಲವೇ? ಒಂದೇ ತಾಯಿಯ ಮಕ್ಕಳಲ್ಲೂ ಇದೆ ಕೈಯ ಬೆರಳುಗಳಂತೆ ಭಾವ ವ್ಯತ್ಯಾಸ ತಿಳಿದು ನಡೆಯಲು  ಬೇಕು ಒಡೆಯದಂತೆ ಮನೆಯ ನಡೆಸಬೇಕು ಸಾಂತ್ವನವ ಕೊಟ್ಟು ಪಡೆಯುತ  ಮನೆ ಮಂದಿಯ ಜತೆ  ಕೂಡಿ ಬಾಳಬೇಕು ಎಲ್ಲರೊಡನೆ ನಗುತ ನಗಿಸುತ  ಬಾಳಿ ಜೀವನ ಸಾರ್ಥಕ್ಯ ಪಡೆಯಬೇಕು ಸಾಂತ್ವನಿಸುವ ಕೈಗಳಿರಲು ಕಷ್ಟ ಸುಖಗಳ ದೋಣಿ ಸರಾಗ ಹರಿದೀತು ಇದನರಿತರೆ ಬಾಳು ಬಂಗಾರವಾದೀತು ಸುಖ ಶಾಂತಿ ನೆಮ್ಮದಿಯ ತವರಾದೀತು ಪಂಕಜಾ.ಕೆ

ಹೆಣ್ಣು (ಹನಿ ಕವನ)

ಹೆಣ್ಣು ಹೆಣ್ಣೆಂದು ಜರೆಯುವರು  ಹೆಣ್ಣೊಂದು ಹುಟ್ಟಿದರೆ ತಿಳಿಯುವರು ಹುಣ್ಣೆ0ದು  ಹೆಣ್ಣು ಹೆತ್ತವರ ಕಣ್ಣಲ್ಲಿ ಸುರಿಸುವರು ಕಣ್ಣೀರು  ಹೆತ್ತವಳು ಹೊತ್ತವಳು ಪ್ರೀತಿಯಿಂದ ಸಲಹಿದವಳು ಅತ್ತಾಗ ತಾ ಅತ್ತು ನಕ್ಕಾಗ ತಾ ನಗುತ   ಕಂದನ ಏಳ್ಗೆಯಲಿ ಕಣ್ಣಾದವಳು ಹೆಣ್ಣಲ್ಲವೇ? ನಗು ನಗುತ  ಸಂಸಾರದ ಭಾರವನು ತಾ ಹೊತ್ತು ನಲ್ಲನಿಗೆ ಸಿಹಿ ಮುತ್ತ ಹಂಚಿ ನೋವ ನುಂಗುತ  ಬದುಕಿದವಳು ಹೆಣ್ಣಲ್ಲವೇ? ಪಂಕಜಾ.ಕೆ

ಗಜಲ್ 31

ಗಜಲ್ ನಿನ್ನ ಸುಮಧುರ ಗಾನದಲಿ ಮೈಮರೆಸಿದೆ ನಲ್ಲ ಕೋಗಿಲೆಯಇಂಪಾದ ದನಿಯಂತೆ ಕೇಳಿಸಿದೆ ನಲ್ಲ ಸಂಗೀತವು ಮನದ ಬೇಸರ ಕಳೆಯುವ ಸಾಧನ ಮದುರಾನುಭೂತಿಯಲಿ ನನ್ನ ತೇಲಿಸಿದೆ ನಲ್ಲ ಗಾನಸುಧೆಯಲಿ  ಅದೆಂತ ಅಮಲು  ಮನಕೆ ಸಂತಸವ ತುಂಬಿಸಿದೆ  ನಲ್ಲ ತಾಳವಿಲ್ಲದ ಗಾಯನ ಕರ್ಣಕಠೋರ   ಧ್ವನಿಯ ಮಾಧುರ್ಯ ಮರುಳಾಗಿಸಿದೆ ನಲ್ಲ ಸರಸ್ವತಿಯು  ಒಲಿದರೆ ಎಲ್ಲವೂ ಸಾಧ್ಯ ಹಾಡಲು ಕಲಿಯ  ಬೇಕೆನಿಸಿದೆ  ನಲ್ಲ ಗಾಯಕರಿಗೆ ಸಿಗುತಿದೆ ಮಾನ ಸನ್ಮಾನ ರಾಗದಲೆಗಳಲಿ ಮುಳುಗಿಸಿದೆ ನಲ್ಲ ಪಂಕಜಾಳ ಸಾನ್ನಿಧ್ಯವಿರಲು  ಮನಕೆ ಉಲ್ಲಾಸ ಹಾಡುಹಕ್ಕಿಯಂತೆ ಇರಲು ಬಯಸಿದೆ ನಲ್ಲ ಪಂಕಜಾ.ಕೆ.

ಗಜಲ್ 30

ಗಜಲ್ ನಿನ್ನ ಮುರಳಿಯ ಗಾನದಲಿ ಮೈ ಮರೆತೆ ಕೃಷ್ಣ ಮೋಹನರಾಗದಲೆಗಳಿಗೆ ಸೋತೆ ಕೃಷ್ಣ ಬೃಂದಾವನದಲಿ ಗೋಪಿಯರ ಒಡನಾಟದ ಮೋದ ರಾದೆಯ  ಮನವ ಸೆಳೆದು ಕದ್ದೊಯ್ದೆಯಂತೆ ಕೃಷ್ಣ ಭಾವದಲೆಗಳ ತೇರಿನಲಿ ಕಂಪಿಸುತ್ತ...

ಹಾಷ್ಯ ಚುಟುಕು ಚಂದ

ಹಾಸ್ಯ ಚುಟುಕು ಚಂದ ಹೆಂಡತಿ. ಎಲ್ಲರೂ ನನ್ನನ್ನೇ ನೋಡುತ್ತಾ ಇದ್ದಾರೆ ನಾನೆಷ್ಟು ಚಂದ ಇದ್ದೇನೆ ನೋಡಿ ರೀ ಗಂಡ...ಅದು ಹಾಗಲ್ಲ ಕಣೆ ನೀನು ಒಲೆಯ  ಬೂದಿಯನ್ನು ಮುಖಕ್ಕೆ ಹಚ್ಚಿದ್ದಿಯಾ ಅದಕ್ಕಿರಬಹುದು ಪಂ...

ಜಾತಿ ಹನಿಕವನ

ಜಾತಿ ಜಾತಿಯ ಹೆಸರಲಿ ಕಿಚ್ಚನು ಹಚ್ಚುತ ಸಂತಸಪಡುತಿಹರು ಮೀಸಲಾತಿಯಅಡಿಯ ಫಲವನು ಪಡೆಯುತ ಪ್ರತಿಭೆಯ ತುಳಿಯುವರು ಉರಿಯುವ ಬೆಂಕಿಗೆ ತುಪ್ಪವ ಸುರಿಯುತ ಮೈಯನು ಕಾಸುವರು ನೀತಿಯು ಇಲ್ಲದಜಾತಿಯು ಇದ್ದ...

ಅತ್ತಿಗೆಯ ನೆನಪಲ್ಲಿ ಸಾಯುಜ್ಯ6.10 2019

ಅತ್ತಿಗೆಯ ನೆನಪಲ್ಲಿ ಕರುಳಕುಡಿಗಳ ಬಿಟ್ಟು ಕರ್ತವ್ಯದ ಕರೆಯಲಿ ವ್ಯಸ್ಥಳಾಗಿರಲು ನಾನಂದು ಮನಕೆ ದೈರ್ಯವ ಕೊಟ್ಟು ನೀನಿಂತೆ ಅವರ ಪಾಲನೆಗೆ ನಿನ್ನ ಸಹಕಾರವಿರಲು ನಿರಾಳವಾಗುತ ಕರ್ತವ್ಯವನು ನಿರ್ವಹ...

ಒಡನಾಟ ಚಿತ್ರದುರ್ಗದ ಕವಿಗೋಷ್ಠಿಗೆ ಹೋದ ಸಂಧರ್ಭ

ಒಡನಾಟ ಪ್ರಜ್ವಲಿಪ ದೀಪದ ಜತೆಯಲ್ಲಿ ಸಾಗಿ ಪಡೆದೆ ನಾನಿಂದು ಕವಿ ಕವಯಿತ್ರಿಯರ ಒಡನಾಟದ ಬಾಗ್ಯ ಕಳೆದ ಮಧುರ ಕ್ಷಣಗಳ ನೆನಪು ಮರೆಯಲಾರದ ಸವಿ ಸವಿ ನೆನಪು ಸಜ್ಜನರ ಒಡನಾಟ ಹೆಜ್ಜೇನು ಸವಿದಂತೆ ಗಾದೆ ಮಾತ...

ಪ್ರಶ್ನೆಯಾಗಿದೆ

ಪ್ರಶ್ನೆಯಾಗಿದೆ ಮನೆಯ ಮಾಡಿನಲಿ ಪುಟ್ಟ ಗೂಡನು ಕಟ್ಟಿ ಚಿಲಿ ಪಿಲಿ ಗಾನವ ಹಾಡುತ್ರ ನಲಿದಾಡುತ್ತಿದ್ದ ಪುಟ್ಟ ಹಕ್ಕಿಗಳೆಲ್ಲಿ? ಜುಳು ಜುಳು ಹರಿಯುವ ನದಿ ಬೆಟ್ಟ ಗುಡ್ಡಗಳಲ್ಲಿ ತುಂಬಿದ ಹಸಿರು ಸ್ವಚ್...

ಹಾಸ್ಯ ಚುಟುಕು ಚಂದ

ಹಾಸ್ಯ ಚುಟುಕು ಚಂದ ಹೆಂಡತಿ. ಎಲ್ಲರೂ ನನ್ನನ್ನೇ ನೋಡುತ್ತಾ ಇದ್ದಾರೆ ನಾನೆಷ್ಟು ಚಂದ ಇದ್ದೇನೆ ನೋಡಿ ರೀ ಗಂಡ...ಅದು ಹಾಗಲ್ಲ ಕಣೆ ನೀನು ಒಲೆಯ  ಬೂದಿಯನ್ನು ಮುಖಕ್ಕೆ ಹಚ್ಚಿದ್ದಿಯಾ ಅದಕ್ಕಿರಬಹುದು ಪಂ...

ನನ್ನೊಲವೇ ನೀನು

ನನ್ನೊಲವೇ ನೀನು ನನ್ನೆದೆಯ ಬಾಂದಳದಿ ನಗೆ ಹೂವ ಹನಿಸುತ್ತ ಸುಗಂಧ ಬೀರುವ ಕುಸುಮ ನೀನು ನಿನ್ನ ಒಡನಾಟದಲಿ ನವಿಲ ನರ್ತನದ ಬಾವ ತನು ಮನವ ಸೆಳೆವ ಸೊಬಗಿ  ನೀನು ಬಾಳ  ದೋಣಿಯ ಏರಿ ನೀ ಬಂದ  ಆ ಹೊತ್ತು ಒಲವ ಪಯಣ...

ವಿಮರ್ಶೆ ಬಾಳ ದೋಣಿ

[05/10, 2:37 PM] ಪದ್ಯಾಣ ಗೋವಿಂದ ಭಟ್: ಪಂಕಜಾ.ಕೆ. ಅವರ ಬಾಳದೋಣಿ ಭಾವಗೀತೆ ಕುರಿತು ____________________ ಗೀತೆಯಲ್ಲಿ ಭಾವ ಹತಾಶೆಯ ರೂಪದಲ್ಲಿ ಬಿಂಬಿತವಾಗಿದೆ.ಆರ್ದ್ರತೆಯಿದೆ,ಪ್ರಾರ್ಥನೆಯಿದೆ.ಬದುಕಿನಲ್ಲಿ ಸೋಲು,ನೋವುಗಳನ್ನುಂಡ...

ಬಾಳ ದೋಣಿ

ಬಾಳ. ದೋಣಿ ಒಡಲು ಬಿರಿದಿದೆ ಕನಸು ಕರಗಿದೆ ಮನಸು ನೋವಲಿ ಮಿಡಿದಿದೆ ಬಾಳ ಬಯಲಲಿ ಮುಳ್ಳು ಹರಡಿದೆ ಬದುಕು  ಬಾರವಾಗಿದೆ ಬಾಳ ತೇರನು ಎಳೆಯಲಾರದೆ ಬೆನ್ನು ಮೂಳೆಯು ಬಾಗಿದೆ ದೇವ ಕರುಣೆಯ ತೋರಿ ಕಳೆದುದೆಲ್...

ನಮೋ ದುರ್ಗೆ ಭಕ್ತಿಗೀತೆ

ನಮೋ ದುರ್ಗೆ   (ಭಕ್ತಿಗೀತೆ) ನವರಾತ್ರಿಯು ಬಂತಮ್ಮ ನವದಿನಗಳು ನಿನಗೆ ಮುಡಿಪಮ್ಮ ನವದುರ್ಗೆಯೇ ಬಾರಮ್ಮ ನಮಿಸುವೆ ನಿನಗೆ ನೋಡಮ್ಮ ಅಭಯ ಹಸ್ತವ ತೋರಮ್ಮ ಅನುದಿನ ನಮ್ಮನು ಪೊರೆಯಮ್ಮ ಅರ್ಚನೆ ಮಾಡುವೆ ಒಲ...

ಬದುಕು ಕವನದ ಬಗ್ಗೆ ವಿಮರ್ಶೆ

[03/10, 3:25 PM] pankajarambhat: ಪಂಕಜಾ ಕೆ ರವರ ಬದುಕು ದಿನ ಬೆಳಗಾದರೆ ಸಂಘರ್ಷ ಎತ್ತಲೂ ಸಿಗುತ್ತಿಲ್ಲ ಈ ಮನಕೆ ಹರ್ಷ ಎಂಬ ಕೊರಗಿನೊಂದಿಗೆ ಈ ಮೂರು ದಿನದ ಬದುಕಿನ ಬಂಡಿಯನ್ನು ಕಣ್ಣ ಮುಂದೆ ಚೆನ್ನಾಗಿ ಬಿಂಬಿಸಿದ್ದೀರಿ ಮೇಡಂ 👏👏 ...

ಬದುಕು

ಬದುಕು ನೂರು ಸಂಘರ್ಷಗಳ  ನಡುವೆ ಎತ್ತ ಸಾಗಬೇಕೆನ್ನುವುದ ತಿಳಿಯದೆ ಬರಿದೆ ಸಾಗುತಿದೆ ಜೀವನ ನಾನು ನನ್ನದೆನ್ನುವ ಅಹಂಕಾರ ಮೋಹ ಮದ ಮತ್ಸರಗಳ ಹಾರ ತುಂಬಿ ತುಳುಕಿ ಬರಡಾಗುತಿದೆ ಜೀವನ ನೆರೆಯವನನ್ನೂ ನಂ...

ವಿಮರ್ಶೆ ಕ್ಷಮಿಸುವೆಯಾ ಕವನದ ಬಗ್ಗೆ

*ಪಂಕಜ  ಅವರ ಕವನದ ಕುರಿತು ಒಂದೆರಡು ಮನದ ಮಾತು* 🙏🙏🙏🙏🙏🙏🙏🙏 *ಪ್ರೀತಿ ತುಂಬಿ ಹರಿಯುವಾಗ ಅದರ ಅರಿವು ನಮಗೆ ಇರುವುದಿಲ್ಲ ಅದು ದೂರವಾದಾಗಲೇ ನಮಗೆ ಅದರ ನೋವು ನಲಿವು ತಾಗುವುದು ಹೃದಯಕ್ಕೆ ಎಂಬ ಸಾಲುಗಳು ...

ಕ್ಷಮಿಸುವೆಯಾ ?

ಕ್ಷಮಿಸುವೆಯಾ? ನಮ್ಮಿಬ್ಬರಲಿತ್ತು  ಒಲವು ಕಳೆಯಿತು ದಿನ ಹಲವು ಒಲವ ಸುರಿಸುವಲ್ಲಿಯೂ ನೀ ಕಾಯ್ದೆಯೇಕೆ ಅಂತರ? ಅಂತರವು ನಮ್ಮಿಬ್ಬರನು ಅಂದು  ಬೇರ್ಪಡಿಸಿತೇ? ಮನದ ಮಾತುಗಳೆಲ್ಲ ಬರಿದಾಗಿ ಹೋಯಿತೆ? ಅಂ...