Skip to main content

Posts

Showing posts from June, 2024

ಪ್ರಿಯತಮೆ

     ಪ್ರಿಯತಮೆ  ತಿಂಗಳಿನ ಸಖ್ಯದಲಿ ಕಂಗೊಳಿಪ  ನೈದಿಲೆಯು ರಂಗೆನ್ನ ಭಾವ ಸಖಿ ನೀನೇ ಶಶಿಯು ಮಂಗಳದ ಸುದಿನಕ್ಕೆ ಮುನ್ನುಡಿಯ  ಬರೆಯುತಲಿ  ಬಂದೆನ್ನ ಮನೆ  ಬೆಳಗಿದೆ ನೀನೇ ರತಿಯು ಕಂಗಳಿನ ತುಂಬೆಲ್ಲ ತುಂಬಿರುವ ಕನಸುಗಳು ನನಸಾಗುತಿದೆ   ನಿನ್ನ ಒಡನಾಟದಿ ಹೊಂಗನಸ  ಕಾಣುತಿಹ ಚೆಲುವದನವನ್ನೊಮ್ಮೆ ಮುದ್ದಿಸುವೆ ಮದನಾರಿ ತೋಳ್ಬನ್ದನದಿ ಕುಂದಿರದ ಜೀವನವು  ನಿನ್ನೊಡನಾಟದಲಿ ಸಂಗವನು ಬಯಸುತಿದೆ ಈ ಜೀವವು ಸುಂದರಿಯ ನಡುವನ್ನು ಮೃದುವಾಗಿ ಬಳಸುತಿರೆ ಮೈಮರೆಸಿ ಬಿಟ್ಟಿಹುದು ಮೃದು ದೇಹವು ಬಾನಿನಲಿ ಸರಿಯುತಿಹ  ಪೂರ್ಣಚಂದಿರ ನೋಡಿ ನಗುತಿಹನು ನಮ್ಮೊಲವ ಸರಸದಾಟ ಕಾನನದ ಸುಮದಂತೆ ಅರಳಿರುವ ಹೂವನ್ನು ಮಧು ಹೀರುತಿಹ ಪರಿಯ ದುಂಬಿಯಾಟ ಮಂದಹಾಸದ ಮುಖವು ಹೊಂದಿಕೊಳ್ಳುವ ಗುಣವು ನಿನ್ನದಿದು ಓ ಚೆಲುವೆ ನಾ ಸೋತೆನು ಕಂದನಂತಿರುವ  ಮುದ್ದು ಮುಖವನ್ನು ಕಾಣುತಲಿ ಮೈಮರೆತು ಬಿಟ್ಟಿಹೆನು ನಾ ಜಗವನು ಪಂಕಜಾ.ಕೆ. ರಾಮಭಟ್

ಅಂತರ್ಜಾಲ ಆಧಾರಿತ ಕವನ ರಚನೆ ವಾಚನೆ

ಗಜಲ್ ನವನವೀನ  ಕನಸುಗಳ ಹೊತ್ತು ಬಂದಿರುವೆ ನಿನಗಾಗಿI ನವೋಲ್ಲಾಸದಿ ನಲಿಯುವ ಕ್ಷಣಕೆ ಕಾದಿರುವೆ ನಿನಗಾಗಿ ಮದುರಸದ ಬಟ್ಟಲು ನನ್ನೊಡಲ ತುಂಬಾ ತುಂಬಿದೆ ಅನುರಾಗವ ನಿರೀಕ್ಷಿಸುತ  ನಿಂತಿರುವೆ ನಿನಗಾಗಿ  ಗಾಲಿ   ಕಳಚಿದ ಗಾಡಿಯಂತಾಗಿದೆ ನನ್ನ ಜೀವನ ಬಾಳಿನಲ್ಲಿ ಬಂದ  ಕಷ್ಟಗಳ ಸಹಿಸಿರುವೆ ನಿನಗಾಗಿ ಬದುಕ ಬಂಡಿಯ ಎಳೆಯಲು ನೀನು ಬರುವೆಯಲ್ಲವೇ ಮುರುಕು ಮಂಟಪದಲ್ಲಿ  ಕುಳಿತಿರುವೆ  ನಿನಗಾಗಿ ಜೀವನಕ್ಕೆ ಒಂದು  ಗುರಿ ಇರಬೇಕಲ್ಲವೇ  ಪಂಕಜಾ ಛಲದಿಂದ ಮುನ್ನಡೆದು ಬದುಕ ಗೆಲ್ಲುವೆ ನಿನಗಾಗಿ ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್  ಪೋಸ್ಟ್ ಮಾಸ್ಟರ್ [4/6/2020, 9:26 PM] pankajarambhat: ಅಂತರ್ಜಾಲ ಆಧಾರಿತ ರಾಜ್ಯಮಟ್ಟದ ಹಾಯ್ಕುಗಳ ರಚನೆ ಮತ್ತು ವಾಚನ ಸ್ಪರ್ಧೆಗಾಗಿ ಹಾಯ್ಕ1 ಬಾಳೆಂಬ ಬಂಡಿ ಸರಾಗ ಸಾಗುವಾಗ ಬೆಳದಿಂಗಳು 2   ನಾನೆಂಬ ಹಮ್ಮು ಏಳಿಗೆಗೆ ಮಾರಕ ಬಿಡದಿದ್ದರೆ 3 ಚೈತ್ರ ಬರಲು ತುಂಬಿತು ಚಿಗುರೆಲೆ ಮನಕೆ ತಂಪು ಪಂಕಜಾ.ಕೆ ಮುಡಿಪು [12/6/2020, 2:13 PM] pankajarambhat: ಆಧುನಿಕ ವಚನ  ರಚನೆ ಮತ್ತು ವಾಚನ ಸ್ಪರ್ಧೆಗಾಗಿ  ವಚನ 1.. ಕರುಣೆ ಸರ್ವ ಪ್ರಾಣಿಗಳನ್ನು ಕರುಣೆಯಿಂದ ಕಾಣಯ್ಯ ಎಲ್ಲರೊಡನೆ ಸ್ನೇಹಭಾವ ದಿಂದಿರಬೇಕಯ್ಯ  ದ್ವೇಷ ಮತ್ಸರವೆಂಬುದನು ತೊರೆಯಯ್ಯ   ಜಗ ಮೆಚ್ಚುವಂತೆ ಬಾಳಿ ಬದುಕ ಬೇಕಯ್ಯ ಜೀವನದ ನಶ್ವರತೆಯ ತಿಳಿದು ನಡೆ ಪಂಕಜಾರಾಮ  ವಚನ ..2 ಆಷಾಢ ಭೂತಿ ಮನದ ತುಂಬಾ ಕಾಮ ಕ್ರೋಧ ಲೋಭಗಳ ತುಂಬಿ ಮೈಕೈಗಳಿಗೆ ವ

ಸುಂದರ ಸಂಸಾರ ಕಥೆ

ಸುಂದರ ಸಂಸಾರ   ಚಿಕ್ಕ ಪ್ರಾಯದಲ್ಲಿ ಗಂಡ ಸತ್ತಾಗ ಇಬ್ಬರು ಚಿಕ್ಕಮಕ್ಕಳನ್ನು ಹಿಡಿದುಕೊಂಡು ದಿಕ್ಕೇ ತೋಚದೆ ನಿಂತಿದ್ದ  ಸುಗುಣಮ್ಮನಿಗೆ ಯಾರ ಸಹಾಯವೂ ಸಿಗದಾಗ ಸುತ್ತುಮತ್ತಿನ ಮನೆಯಲ್ಲಿ ಮನೆಕೆಲಸ ಮಾಡುತ್ತಾ ಅವರ ಮಕ್ಕಳಿಗೆ ತನ್ನಿಂದ ಆದಷ್ಟು ಒಳ್ಳೆಯ  ವಿಚಾರಗಳನ್ನು ಕಲಿಸುತ್ತಾ  ಒಬ್ಬಂಟಿಯಾಗಿ ಕಷ್ಟಪಟ್ಟು ಮಕ್ಕಳನ್ನು ಸಾಕಿ ವಿದ್ಯಾಭ್ಯಾಸ ಕೊಟ್ಟು ಉತ್ತಮ ಸಂಸ್ಕಾರಗಳನ್ನು ಕಲಿಸಿ ಸೂಕ್ತ ಸಮಯದಲ್ಲಿ ಮಕ್ಕಳಿಬ್ಬರ ವಿವಾಹವನ್ನು ಉತ್ತಮ ಮನೆತನದ ಹೆಣ್ಣು ಮಕ್ಕಳ ಜತೆ ನೆರವೇರಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು.                ಮನೆಗೆ ಬಂದ ಸೊಸೆಯರಿಬ್ಬರೂ ಸ್ವಂತ ಅಕ್ಕ ತಂಗಿಯರಂತೆ ಹೊಂದಿಕೊಂಡಿದ್ದು ಅತ್ತೆ ಸುಗುಣಮ್ಮನನ್ನು ತಮ್ಮ ತಾಯಿಯಂತೆ ಕಾಣುವ  ಒಳ್ಳೆಯ ಗುಣದ ಹೆಣ್ಣು ಮಕ್ಕಳಾಗಿದ್ದುದರಿಂದ  ಸುಗುಣಮ್ಮ ವೃದ್ದಾಪ್ಯದಲ್ಲಿ ಯಾವುದೇ ಚಿಂತೆಯಿಲ್ಲದೆ ಸೊಸೆಯಂದಿರ  ಕೆಲಸದಲ್ಲಿ ಅಷ್ಟೋ ಇಷ್ಟೋ ಸಹಾಯ ಮಾಡುತ್ತಾ ಬಿಡುವಿನ ವೇಳೆಯಲ್ಲಿ ರಾಮಾಯಣ ಮಹಾಭಾರತ ಇತ್ಯಾದಿ ಸದ್ಗ್ರಂಥಗಳನ್ನು ಓದುತ್ತಾ  ಮೊಮ್ಮಕ್ಕಳಿಗೆ  ಕಥೆಗಳನ್ನು ಹೇಳುತ್ತಾ ಕಾಲ ಕಳೆಯುತ್ತಿದ್ದರು.                ಅಜ್ಜಿಯೆಂದರೆ ಎಲ್ಲಾ ಮಕ್ಕಳಿಗೂ ತುಂಬಾ ಇಷ್ಟ ಶಾಲೆಯಿಂದ ಬಂದ ತಕ್ಷಣ ಅಜ್ಜಿಯ ಸುತ್ತಲೂ ಕುಳಿತು  ಕಥೆಗಾಗಿ ಪೀಡಿಸುತ್ತಿದ್ದರು.ಇತ್ತಿಚೆಗೆ ಕೊರೊನಾದ  ಕಾರಣದಿಂದ   ಶಾಲೆ ಬಂದ್ ಆದಾಗ ಮಕ್ಕಳು ಮನೆಯಲ್ಲೇ ಇರಬೇಕಾದ ಸಂಧರ್ಭದಲ್ಲಿ ಮಕ್ಕಳಿಗೆ ಮನೆಯಲ್ಲೇ ಪಾಠಗ

ಪುರಾಣದ ಕಥೆ ಲಕ್ಷ್ಮಣ ರೇಖೆ

ಪುರಾಣದ ಕಥೆ   ಲಕ್ಷ್ಮಣ ರೇಖೆ ಪಿತೃವಾಕ್ಯ ಪರಿಪಾಲಕನಾದ ಶ್ರೀ ರಾಮಚಂದ್ರನು ಹದಿನಾಲ್ಕು ವರ್ಷ ವನವಾಸಕ್ಕೆಂದು ಹೊರಟಾಗ ಪತಿವ್ರತಾ ಶಿರೋಮಣಿಯಾದ ಶ್ರೀ ರಾಮನ ಹೆಂಡತಿ ಸೀತಾಮಾತೆಯೂ ಅವರೊಂದಿಗೆ ಹೊರಟಳು ಕಾಡು ಮೇಡುಗಳಲಿ ಹಣ್ಣುಗಳನ್ನು ತಿನ್ನುತ್ತಾ ಅವರು   ಅಲ್ಲಿ ಒಂದು ಪರ್ಣಕುಟೀರವನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾಗ, ಮಾರೀಚನೆಂಬ ಮಾಯಾವಿ  ರಾಕ್ಷಸನು ಸೀತಾದೇವಿಯನ್ನು ಆಕರ್ಷಿಸಲು ಚಿನ್ನದ ಜಿಂಕೆಯ ರೂಪ ತಾಳಿ ಪರ್ಣ ಕುಟೀರದ ಸುತ್ತುಮುತ್ತಲಿನ ಸ್ಥಳಗಳಲ್ಲಿ ತಿರುಗಾಡುತ್ತಿದ್ದನು ..ಚಿನ್ನದ ಜಿಂಕೆಯನ್ನು ಕಂಡ ಸೀತಾದೇವಿಗೆ ಅದರ ಮೇಲೆ ಮೋಹವುಂಟಾಗಿ, ಆಕೆ ತನ್ನ ಗಂಡ ಶ್ರೀರಾಮಚಂದ್ರನಲ್ಲಿ ಅದನ್ನು ಜೀವಂತವಾಗಿ ತಂದು ಕೊಡುವಂತೆ ಪೀಡಿಸುತ್ತಾಳೆ. ಶ್ರೀ ರಾಮನು ಎಷ್ಟೆಷ್ಟೋ ಸಮಾಧಾನ ಮಾಡಿದರೂ ಸೀತಾದೇವಿ ತನ್ನ ಹಠವನ್ನು ಬಿಡುವುದಿಲ್ಲ .ಅದು ರಾಕ್ಷಸರ.ಮಾಯೆ ನಿಜವಾದ ಜಿಂಕೆಯಲ್ಲ  ಎಂದು ಹೇಳಿದರೂ ಸೀತಾದೇವಿ ತನ್ನ ಆಸೆಬಿಡದೆ ತನಗೆ ಅದು ಬೇಕೇ ಬೇಕೆಂದು ಹಠ ಹಿಡಿಯುತ್ತಾಳೆ. ಗತ್ಯಂತರವಿಲ್ಲದೆ ಶ್ರೀರಾಮನು ಜಿಂಕೆಯನ್ನು ಹಿಡಿಯಲು ಹೋಗುತ್ತಾನೆ .ಹೋಗುವಾಗ ತನ್ನ ತಮ್ಮ ಲಕ್ಷ್ಮಣ ನನ್ನು ಸೀತಾದೇವಿಯ ರಕ್ಷಣೆಗೆ  ನಿಲ್ಲಿಸಿ ತಾನು ಬಿಲ್ಲು ಬಾಣ ತೆಗೆದುಕೊಂಡು ಜಿಂಕೆಯನ್ನು ಹಿಡಿಯಲು ಹೋಗುತ್ತಾನೆ ಮಾಯಾವಿಯಾದ ಜಿಂಕೆ ರಾಮನನ್ನು  ಆಟವಾಡಿಸುತ್ತ ಕೈಗೆ ಸಿಕ್ಕಿಯೂ ಸಿಕ್ಕದಂತೆ ಜಾರಿಕೊಂಡು ಓಡುತ್ತಾ ನೆಗೆಯುತ್ತಾ ದಿಕ್ಕು ತಪ್ಪಿಸುತ್ತಿತ್ತು.ಅದನ್ನು

ರಾಮಾಯಣ. ಭಾಗ 5

ರಾಮಾಯಣ ಭಾಗ 5 ರಾವಣನ ಸಂಹಾರ ಪಂಕಜಾ. ಕೆ. ರಾಮಭಟ್ ಹುಡುಕುತ ಬಳಲಿದ ರಾಮನು ಸೀತೆಯ ಗಡಿಬಿಡಿಯಿಂದಲಿ ವನದೆಲ್ಲೆಡೆಯಲಿ ಮಡದಿಯ ಸುಳಿವನು ಕಾಣದೆ ಮನದಲಿ  ಬೇಸರ ಪಟ್ಟಿಹನು ತಡೆಯನ್ನೊಡ್ಡಿದ  ಪಕ್ಷಿಯು ನರಳುತ ತಡೆಯುತ ತನ್ನಯ ನೋವನು  ಗಣಿಸದೆ ಲೊಡನಯೆ ಹೇಳಿದ  ರಾವಣ ಸೀತೆಯ ಕದ್ದಿಹ ವಾರ್ತೆಯನು ವಾನರ ವೀರರ ಜತೆಯಲಿ ರಾಮನು ಸೇನೆಯ ಕೂಡಿಸಿ ಸೇತುವೆ ಕಟ್ಟಿದ ಮೇನೆಯುಯಿಲ್ಲದೆ ನಡೆಯುತ ಲಂಕೆಯ ಬೇಗನೆ ಮುಟ್ಟಿದರು ಕಾನನದೆಡೆಯಲಿ ಸರಸರ ಸರಿಯುತ ದಾನವರೆಲ್ಲರ  ತಲೆಯನು ತರಿಯುತ ಮಾನವ ರೂಪದ ರಾಮನು  ಕೊಂದನು ಬೇಗನೆ  ರಾವಣನ ವರುಷವು ಕಳೆಯಲು ರಾಮನು ಹೊರಟನು ಭರತನ ಕಾಣಲಯೋದ್ಯೆಯೆಡೆಗೆಯೇ ಮರೆಯದೆ ವಾನರ ವೀರರ ಕರೆಯುತ ನಡೆದನು ವೇಗದಲಿ ಬರುತಿಹ ರಾಮನ ಚರಣಕ್ಕೆರಗುತ ನರಹರಿಯೊಪ್ಪಿಸು ರಾಜ್ಯವನೆನುತಲಿ ಭರತನುಯಿಟ್ಟನು ಪಾದುಕೆಯೆಲ್ಲವ ರಾಮನ ಪದತಲದಿ  ಜೈ ಶ್ರೀ ರಾಮ್ ಪಂಕಜಾ ಕೆ ರಾಮಭಟ್ ಜಿ

ರಾಮಾಯಣ ಭಾಗ 4

   ರಾಮಾಯಣ ಭಾಗ 4   27 ಚಿನ್ನದ ಜಿಂಕೆ  ಮನೋಲ್ಲಾಸ ಪರಿವರ್ಧಿನಿಷಟ್ಪದಿ.. ವನದಲಿ ತಿರುಗುತ  ಗುಡಿಸಲು ಕಟ್ಟುತ ಮನದಲಿ  ಬೇಸರವಿದ್ದರು ತೋರದೆ ಜನಕನ ಕುವರಿಯ ಜತೆಯಲಿ ರಾಮನು   ಹರುಷದಿ  ಕೂಡುತಲಿ ಅನುಜನು ಲಕ್ಷ್ಮಣ ಜತೆಯಲ್ಲಿರುತಿರೆ ಬೆನಕನ ದಯೆಯಲಿ  ದಿನಗಳು ಕಳೆಯಲು ಕನಸಿನ ತೆರದಲಿ ಜೀವನ ಸಾಗಿತು  ಕಾಡಲಿ ನಡೆಯುತಲಿ ಸುಂದರ ಜಿಂಕೆಯ ಕಾಣುತ  ಸಾದ್ವಿಯು ನಂದನ ರಾಮನ ಕರೆದಳು ಬೇಗನೆ ಚಂದದ  ಹರಿಣವು ಬೇಕೆನಗೆನ್ನುತ  ಹಠವನು ಮಾಡಿದಳು ಚಂದಿರ ವದನೆಯೆ ಕೇಳೆನ್ನುತಲೀ ಮಂಧರಧರ ಶ್ರೀರಾಮನು ತಿಳಿಸಿದ ನಂದಿನಿ ಪೇಳ್ವೆನು ನಿಜವಲ್ಲವಿದೂ ರಾಕ್ಷಸ ಮಾಯೆಯದು  ಸೀತೆಯ ಕೋಪಕೆ ಹೆದರಿದ ರಾಮನು ಮಾತೊಂದರುಹುತ ಲಕ್ಷ್ಮಣನೊಡನೆಯೆ ಮಾತೆಯ  ನೆನೆಯುತ ಹರಿಣವ ಹಿಡಿಯಲು ಹೊರಟನು ಕಾಡಿನೆಡೆ   ನೀತಿಯ ಪಾಠವ  ಮನದಲಿ ಪಠಿಸುತ ಭೀತಿಯ ತೋರದೆ  ಲಕ್ಷ್ಮಣನೊಡನೆ ನಾಥನು ಬರುವ ದಾರಿಯ ನೋಡುತ ಹರಿಣಿಯು ಬಳಲಿದಳು ಹರಿಣವ ಹಿಡಿಯಲು ಹೊರಟಿಹ ರಾಮನು ಬರದಿರೆ  ಭಯವದು ಮೂಡಿತು  ಮನದಲಿ ಕರೆಯುವ ರಾಮನ ದನಿಯನು ಕೇಳಲು   ಜಾನಕಿ  ಬೆದರಿದಳು ತರುಣಿಯು  ಕರೆದಳು ಲಕ್ಷ್ಮಣನನುತಾ ಭರದಲಿ ಹೋಗೆಂದೆನುತಲಿ ಕಳುಹಲು ಸರಸರ ಬಂದನು ರಾವಣನಲ್ಲಿಗೆ  ವೇಶವ ಹಾಕುತಲಿ ಕರೆಯುತ ಕೇಳಿದ ದಾನವ ನೀಡಲು ಹರಿಸತಿ ಬೇಗನೆ ಭಿಕ್ಷೆಯನಿಕ್ಕಲು ಸರಸಕೆ ಕರೆದನು ರಾವಣ ತನ್ನಯ ರೂಪವ ತೋರುತಲಿ ಭಯದಲಿ ಕಂಪಿಸುತಿರುತಿಹ  ತರಳೆಯ ದಯೆಯನು ತೋರದೆ ಹಿಡಿದನು ಮುಡಿಯನು ಮಯಣದ ತೆರದಲಿ ಹೊಳೆಯುವ ಪುಷ್ಪಕ ವಾ

ರಾಮಾಯಣ ಭಾಗ3

 24  ಭರತನ ಆಗಮನ  ಚಿಲಿಪಿಲಿ ರಾಮಾಯಣ ಭಾಗ 3 ಮನೋಲ್ಲಾಸ (ಪರಿವರ್ಧಿನಿ ಷಟ್ಪದಿ) ಪಂಕಜಾ.ಕೆ. ರಾಮಭಟ್  ಬರುತಿಹ ಭರತನ ಕಾಣಲು ಲಕ್ಷ್ಮಣ ಸರಸರನೇರಿದ  ಮರವನು   ಬೇಗನೆ ಭರದಲ್ಲರುಹಿದ  ಕಂಡಿಹ ವಾರ್ತೆಯನನುಜಾ ರಾಮನಲಿ ಪುರಜನರೆಲ್ಲರು ಬರುತಿಹ  ವಿಷಯವ ನರಹರಿ ರೂಪದ ರಾಮನು ಕೇಳಲು ಕರವನು ಚಾಚುತ  ನಿಂತನು   ನೋಡುತ ಭರತನ   ದಾರಿಯನು ಬಂದಿಹ ತಮ್ಮನ  ತೆಕ್ಕೆಗೆ ಸೆಳೆಯುತ ಮಂದಿಯರೆಲ್ಲರ ಕೂಡಿಸಿ ನುಡಿದನು ಬಂದಿಹ ಕಷ್ಟವು ಕಳೆವುದು  ಬೇಗನೆ ಚಿಂತೆಯ ಮಾಡದಿರಿ ಮುಂದಿನ  ದಿನದಲಿ ಭರತನೆ ರಾಜನು ವಂದಿಸಿ ನಡೆಯಿರಿ  ಭಕ್ತಿಯ ತೋರುತ ಕುಂದನು ತೋರದತೆರದಲ್ಲವನೂ ರಾಜ್ಯವನಾಳುವನು ಎಂದಿಹ ರಾಮನ ಮಾತನು ಕೇಳುತ ಬಂದಿಹ  ಮಂದಿಯು ವಂದಿಸಿ ನಡೆಯಲು ನೊಂದಿಹ ಭರತನು ಪಾದುಕೆ ತಲೆಯಲಿ ಹೊರುತಲಿ ನಡೆದಿಹನು ಕಂದನ ತೆರದಲಿ ಮನವನು ಹೊಂದಿದ ನಂದನ ದಶರಥ ಪುತ್ರನು ಬೇಗನೆ ನೊಂದಿಹ ಜನರೆಡೆ ತನ್ನಯ  ಕರುಣೆಯ ನೋಟವ ಹರಿಸಿದನು ಪಂಕಜಾ. ಕೆ. ರಾಮಭಟ್

ರಾಮಾಯಣ ಭಾಗ 2

     11 ರಾಮನ ವನವಾಸ   ರಾಮಾಯಣ ಬಾಗ 2  ಪರಿವರ್ಧಿನಿ ಷಟ್ಪದಿ ಪಂಕಜಾ.ಕೆ. ರಾಮಭಟ್ ಮಡದಿಯ ಮಾತನು ಕೇಳಿದ ದಶರಥ ಬುಡವನು ಕಡಿದಿಹ ಬಾಳೆಯ ತೆರದೊಳ- -ಗೊಡನೆಯೆ ಬಿದ್ದನು ಮತಿಯನು ಕಳೆಯುತ ಮನದಲಿ ನೋಯುತಲಿ ಬಿಡದಿಯಲೆಲ್ಲೆಡೆ ಹರಡಿದ ಸುದ್ದಿಯು ಬಿಡದೆಯೆ ತಲುಪಿತು  ರಾಮನ ಕಿವಿಯನು ಗಡಿಬಿಡಿಯಿಂದಲಿ ತಂದೆಯ ಕಾಣಲು ಬಂದನು ತ್ವರಿತದಲಿ   ತಂದೆಯ ನೋವಿನ ಕಾರಣ ಕೇಳಲು ಮುಂದೆಯೆ ನಿಲ್ಲುತ ತಿಳಿಸಿದನವನಲಿ ಕುಂದಿದ ಮೊಗದಲಿ ಬೇಸರ ತೋರುತ  ತನ್ನಯ ವರಗಳನು ಬಂದಿಹ ಕಷ್ಟಗಳರಿಯಲು ರಾಮನು  ತಂದೆಯ ಮಾತನು ಪಾಲಿಪೆನೆನ್ನುತ ಮಂದಿಯರೆಲ್ಲರ   ಹಿಂದೆಯೆ ಬಿಡುತಲಿ ನಡೆದನು ಕಾಡಿನೆಡೆ ಸೀತೆಯು  ಪತಿಯನ್ನನುಸರಿಸುತ್ತಲಿ ಮಾತೆಯ ಚರಣಕ್ಕೆರಗುತ ಬೇಡಲು ಭೀತಿಯ ತೋರುತ ಹರಸಿದಲೊಲವಲಿ ಜಾನಕಿ ದೇವಿಯನು ಜಾತಕ ಪಕ್ಷಿಯ ತೆರದಲಿ ಲಕ್ಷ್ಮಣ  ಪಾತಕಿ ಕೈಕೆಯ ನಿಂದಿಸುತಿರುತಲಿ   ಕಾತುರದಿಂದಲಿ ರಾಮನ ಜತೆಯಲಿ  ನಡೆದನು ತವಕದಲಿ ವನವಾಸಕೆ ಹೊರಟಿಹ ರಾಮನ ಜತೆ ಜನಕನ ಕುವರಿಯು ಹೊರಟಳು ನಗುತಲಿ ಮನದಲಿ ತುಂಬಿದ ದುಗುಡವ ಸರಿಸುತ ನಾರಿನ ಮಡಿಯುಟ್ಟು ಬನದಲಿ ನಡೆಯುತ ಬಳಲಿದ ಮೂವರು ತಿನುತಲಿ ಕಾಡಲಿ ಬೆಳೆದಿಹ ಫಲಗಳ ಮನಸಿನ ಚಿಂತೆಯು ಕಳೆಯಲು ಬೇಗನೆ ಕಣ್ಣನು ಮುಚ್ಚಿದರು ದಶರಥ ರಾಜನು ದುಃಖದಿ ನರಳುತ ವಶವನು ಕಳೆದನು ತನುಮನವೆಲ್ಲವ ನಶೆಯಲಿ ಬೀಳುತ  ಬಿಟ್ಟನು ತನ್ನಯ ಪ್ರಾಣವ ಕ್ಷಣದಲ್ಲೇ ಕಸಿವಿಸಿಗೊಂಡಿಹ ಮನದಲಿ ಮಂತ್ರಿಯು ಕುಸಿಯುವ ಜೀವವ ಕರದಲಿ ಹಿಡಿಯುತ ತುಸುವೇ ಸಮಯದಿ ಕರೆ

ರಾಮಾಯಣ ಭಾಗ1ಪ್ಪರಿವರ್ಧಿನಿ ಷಟ್ಪದಿ

ಸಂಕ್ಷಿಪ್ತ ರಾಮಾಯಣ ಭಾಗ  1 ಚಿಲಿಪಿಲಿ ಮನೋಲ್ಲಾಸ  4  ಮಂಥರೆಯ ಕುತಂತ್ರ   (ಪರಿವರ್ಧಿನಿ ಷಟ್ಪದಿ ಯಲ್ಲಿ) ಪಂಕಜಾ.ಕೆ. ರಾಮಭಟ್ ಕೋಸಲ ದೇಶದ ರಾಜನು  ದಶರಥ ಹಾಸವ ಬೀರುತ ಮಡದಿಯರೊಡನೆಯೆ ತೋಷದಿ ರಾಜ್ಯವ ಪಾಲಿಸುತಿದ್ದನಯೋಧ್ಯಾ ನಗರದಲಿ ಕೂಸೊಂದಿಲ್ಲದ ಚಿಂತೆಯು ಕಾಡಲು ಬೇಸರ ಮೂಡಿತರಸನಾ ಮನದಲಿ ಸಾಸಿರ ಮುನಿಗಳ ಕರೆಸುತಲವರಲಿ ಸಲಹೆಯ ಕೇಳಿದನು ಮಾಡಿದ  ಯಾಗವ ಪುತ್ರನ ಪಡೆಯಲು ಬೇಡಿದ  ದೇವನ ಚರಣಕೆ ನಮಿಸುತ ಹಾಡುತ  ನಾಮವ ಬಕುತಿಯಲವನನು ಮನದಲಿ ಧೇನಿಸುತ ಮಾಡಿದ ಯಜ್ಞದ ಪುಣ್ಯದ ಫಲದಲಿ ಮೂಡಿತು  ಗರ್ಭದಿ  ಮಕ್ಕಳ ಕಲರವ ದೂಡಿತು ರಾಜನ ಚಿಂತೆಯು ರಾಣಿಯರೆಲ್ಲರು ಹಡೆಯುತಲಿ ಮುದ್ದಿನ ಮಕ್ಕಳು ಬೇಗನೆ ಬೆಳೆಯಲು ಮುದ್ದಿಸಿ ಕಲಿಸಿದನವರಿಗೆ ವಿದ್ಯೆಯ ಗದ್ದುಗೆಯೇರುವ ಸಮಯವು ಬರುತಿರೆ ತೋಷವು ಮನದಲ್ಲಿ ಗದ್ದಲ ಮಾಡುತ  ಪುರಜನರೆಲ್ಲರು ಸಿದ್ಧತೆ ಮಾಡಲು  ಸರಸರ ಸರಿಯುತ ಸದ್ದಿಲ್ಲದೆಯೇ ನೆರೆದರು  ಹರುಷದಿ  ಹಾರಿಸಿ  ಭಾವುಟವ ಮಂಥರೆ ಮಾತನು ಕೇಳಿದ ಕೈಕೆಯಿ ಮಂಥನ ಮಾಡುತ ಮನದಲಿ ಯೋಚಿಸಿ ಪಂಥದಿ ಪಡೆದಿಹ ವರಗಳ ಕೇಳಲು ನಡೆದಳು ರಾಜನೆಡೆ ಅಂತಃಪುರದೆಡೆ ಬರುತಿಹ  ಸಖನೆಡೆ- -ಯಂತರ ಕಾಯುತ  ಕೇಳಿದಲೊಲವಲಿ ಚಿಂತೆಗೆ ಹಚ್ಚುವ ಮಾತೊಂದರುಹಲು ದಶರಥ  ನೊಂದಿಹನು ಪಂಕಜಾ.ಕೆ. ರಾಮಭಟ್

ಮುಕ್ತಕ ಇತ್ಯಾದಿ

[4/12/2021, 7:55 pm] Pankaja K: ಮುಕ್ತಕ   ಕೆಟ್ಟತನ  ಮೈಗೂಡಿ ಇರುತಿರುವ ಜನರಿಂದ ತಟ್ಟನೇ ಸರಿಯುತಿರು ದೂರಕ್ಕೆ ಮನುಜ ಬಿಟ್ಟುಬಿಡು ಗೆಳೆತನವ ಕಡಿಯುತ್ತ  ಸಂಗವನು ಮೆಟ್ಟಿಬಿಡು ಅವರನ್ನು ಪಂಕಜಾಕ್ಷಿ ಪಂಕಜಾ.ಕೆ [4/12/2021, 7:55 pm] Pankaja K: ಮುಕ್ತಕ ಹತ್ತರಲಿ ಹನ್ನೊಂದು ಆಗಿರದೆ ಇರುತಿದ್ದು ತುತ್ತಿನಲಿ ಸಿಗುತಿರುವ ಕಲ್ಲಂತೆ ಇರದೆ  ಕತ್ತಲನು ಸೀಳುವಾ ಬೆಳಕಂತೆ ಇರಬೇಕು ಸುತ್ತಲೂ ಹರಡುತಲಿ ಪಂಕಜಾಕ್ಷಿ ಪಂಕಜಾ.ಕೆ. ಮುಡಿಪು [4/12/2021, 7:55 pm] Pankaja K: ಮುಕ್ತಕ    ಗುಟ್ಟೊಂದು ಹೇಳುವೆನು ಕಿವಿಗೊಟ್ಟು ಕೇಳುತಿರು ಕೆಟ್ಟವರ ಸಂಗವನು ಬಿಡುತಿದ್ದು ನೀನು ಮೆಟ್ಟುವಾ ಜನರನ್ನು  ಹರದಾರಿ ದೂರವಿಡು ಕಟ್ಟುತಲಿ ಕನಸನ್ನು ಪಂಕಜಾಕ್ಷಿ ಪಂಕಜಾ.ಕೆ [5/12/2021, 8:57 pm] Pankaja K: .ಗುರುಕುಲಾ ಚಿಕ್ಕಮಗಳೂರು ಘಟಕ ಸ್ಪರ್ಧೆಗಾಗಿ ಗಜಲ್ ದತ್ತಸಾಲು.. ಬತ್ತದ ಒರತೆಯ ಪ್ರೀತಿ ಕಂಡೆಯಾ  ಗಜಲ್ ಚಿತ್ತದಲ್ಲಿ  ನಿನ್ನ ಬಿಂಬವ ತುಂಬಿದೆಯಾ ಸಖ ಬತ್ತದ ಒರತೆಯ ಪ್ರೀತಿ ಕಂಡೆಯಾ ಸಖ ಬರಡಾದ  ಬಾಳಿಗೆ ತಂಗಾಳಿಯಾಗುವೆಯಲ್ಲವೇ ಒಲವಿನ ಪಯಣಕೆ ಜತೆಯಾಗಿ ಬರುವೆಯಾ ಸಖ ಕಂಗಳ ತುಂಬಾ ಕನಸನು ಬಿತ್ತಿದೆಯಲ್ಲ ನೀನು ಕಣ್ಣೋಟದ ಮದನ ಬಾಣಕೆ ಸೋತೆಯಾ ಸಖ ನಗುವಿನ ಹೊಳೆಯಲ್ಲಿ ನನ್ನ  ಮೈಮನ ಮರೆಸಿದೆ  ಕಣ್ಣೀರ ಕರಗಿಸಿ ಹೊಸಬೆಳಕು ತಂದೆಯಾ ಸಖ ನಿನಗಾಗಿ ಜೀವನವೆಲ್ಲಾ ಮುಡಿಪಾಗಿಟ್ಟಿರುವೆ ನಾನು ಪಂಕಜಾಳ ಬಾಳಲ್ಲಿ  ಹರುಷ  ಮೂಡಿಸಿದೆಯ ಸಖ ಪಂಕಜಾ

kavana

[3/3/2022, 6:00 pm] Pankaja K: ಚಿತ್ರಕ್ಕೊಂದು ಲೇಖನ    ಸ್ವಾವಲಂಬನೆಯ ಜೀವನ ಅಪಘಾತದಲ್ಲಿ  ಕಾಲುಗಳೆರಡನ್ನು ಕಳೆದು ಕೊಂಡಿದ್ದರೂ ಆತ್ಮವಿಶ್ವಾಸವನ್ನು ಕಳೆದು ಕೊಳ್ಳದೆ  ಗಾಲಿಖುರ್ಚಿಯಲ್ಲಿ ಕುಳಿತು  ಸ್ವಾವಲಂಬನೆಯ ಜೀವನವನ್ನು ನಡೆಸುತ್ತಿರುವ  ತರುಣನೊಬ್ಬನ ಚಿತ್ರ ಇಂದಿನ ಲೇಖನದ ವಿಷಯವಾಗಿದೆ .             ಎಷ್ಟೋ ಜನ ಹಣದ ಮದದಿಂದ  ಸೋಮಾರಿಗಳಾಗಿ ಕುಡಿತ ಮಾದಕ ವ್ಯಸನದ ದಾಸರಾಗಿ ಭೂಮಿಗೆ   ಭಾರವಾಗಿ ಹೆತ್ತ  ತಂದೆ ತಾಯಿಯರಿಗೆ ತಲೆನೋವಾಗಿ ಇರುತ್ತಾರೆ  ಅಂತಹವರ  ಮುಂದೆ  ಅಂಗವಿಕಲನಾಗಿದ್ದರೂ ಯಾರಿಗೂ ಭಾರವಾಗದೆ ತನ್ನ ಅನ್ನವನ್ನು ತಾನು ದುಡಿದು ತಿನ್ನಲು ಗಾಲಿ ಖುರ್ಚಿಯಲ್ಲಿ  ಕುಳಿತು ಸರಕುಗಳ ಮಾರಾಟ ಮಾಡುವ ತರುಣನ  ಸ್ವಾವಲಂಬಿ ಜೀವನವನ್ನು ಮೆಚ್ಚಲೇ ಬೇಕು.             ಆತ್ಮವಿಶ್ವಾಸ,  ಸಾಧಿಸುವ ಛಲ ವಿದ್ದರೆ ಅಂಗವಿಕಲತೆಯನ್ನು ಮೆಟ್ಟಿ ನಿಲ್ಲಬಹುದು.  ತಾನು ಯಾರಿಗೂ  ಭಾರವಾಗದೆ ದುಡಿದು ಉಣ್ಣುವ ಇಂತಹವರನ್ನು ಗೌರವಿಸಿ ಅವರಿಂದ ಸರಕುಗಳನ್ನು ಕೊಂಡು ಅವರನ್ನು ನಾವು ಪ್ರೋತ್ಸಾಹಿಸಬೇಕು  ಅವರ ಕನಸುಗಳಿಗೆ ರೆಕ್ಕೆ ಕಟ್ಟುವ ಕೆಲಸವನ್ನು ಮಾಡಿ ಅಂಗವಿಕಲತೆ ಶಾಪವಲ್ಲವೆನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಚಿತ್ರದ ತರುಣನಂತೆ ಪ್ರತಿಯೊಬ್ಬ ಅಂಗವಿಕಲನೂ ತನ್ನ ಅಂಗವಿಕಲತೆಯನ್ನು ಮೆಟ್ಟಿ ಬದುಕು ಕಟ್ಟಿ ಕೊಳ್ಳುವ ಕಲೆ ಕಲಿತರೆ ಅಂಗವಿಕಲತೆ ಅವರಿಗೆ ಶಾಪವಾಗದೆ  ಅವರ ಜೀವನ ಸುಂದರವಾಗಿ ರೂಪುಗೊಳ್ಳುವುದು        

ಲೇಖನ ಇತ್ಯಾದಿ

[3/3/2022, 6:00 pm] Pankaja K: ಚಿತ್ರಕ್ಕೊಂದು ಲೇಖನ    ಸ್ವಾವಲಂಬನೆಯ ಜೀವನ ಅಪಘಾತದಲ್ಲಿ  ಕಾಲುಗಳೆರಡನ್ನು ಕಳೆದು ಕೊಂಡಿದ್ದರೂ ಆತ್ಮವಿಶ್ವಾಸವನ್ನು ಕಳೆದು ಕೊಳ್ಳದೆ  ಗಾಲಿಖುರ್ಚಿಯಲ್ಲಿ ಕುಳಿತು  ಸ್ವಾವಲಂಬನೆಯ ಜೀವನವನ್ನು ನಡೆಸುತ್ತಿರುವ  ತರುಣನೊಬ್ಬನ ಚಿತ್ರ ಇಂದಿನ ಲೇಖನದ ವಿಷಯವಾಗಿದೆ .             ಎಷ್ಟೋ ಜನ ಹಣದ ಮದದಿಂದ  ಸೋಮಾರಿಗಳಾಗಿ ಕುಡಿತ ಮಾದಕ ವ್ಯಸನದ ದಾಸರಾಗಿ ಭೂಮಿಗೆ   ಭಾರವಾಗಿ ಹೆತ್ತ  ತಂದೆ ತಾಯಿಯರಿಗೆ ತಲೆನೋವಾಗಿ ಇರುತ್ತಾರೆ  ಅಂತಹವರ  ಮುಂದೆ  ಅಂಗವಿಕಲನಾಗಿದ್ದರೂ ಯಾರಿಗೂ ಭಾರವಾಗದೆ ತನ್ನ ಅನ್ನವನ್ನು ತಾನು ದುಡಿದು ತಿನ್ನಲು ಗಾಲಿ ಖುರ್ಚಿಯಲ್ಲಿ  ಕುಳಿತು ಸರಕುಗಳ ಮಾರಾಟ ಮಾಡುವ ತರುಣನ  ಸ್ವಾವಲಂಬಿ ಜೀವನವನ್ನು ಮೆಚ್ಚಲೇ ಬೇಕು.             ಆತ್ಮವಿಶ್ವಾಸ,  ಸಾಧಿಸುವ ಛಲ ವಿದ್ದರೆ ಅಂಗವಿಕಲತೆಯನ್ನು ಮೆಟ್ಟಿ ನಿಲ್ಲಬಹುದು.  ತಾನು ಯಾರಿಗೂ  ಭಾರವಾಗದೆ ದುಡಿದು ಉಣ್ಣುವ ಇಂತಹವರನ್ನು ಗೌರವಿಸಿ ಅವರಿಂದ ಸರಕುಗಳನ್ನು ಕೊಂಡು ಅವರನ್ನು ನಾವು ಪ್ರೋತ್ಸಾಹಿಸಬೇಕು  ಅವರ ಕನಸುಗಳಿಗೆ ರೆಕ್ಕೆ ಕಟ್ಟುವ ಕೆಲಸವನ್ನು ಮಾಡಿ ಅಂಗವಿಕಲತೆ ಶಾಪವಲ್ಲವೆನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಚಿತ್ರದ ತರುಣನಂತೆ ಪ್ರತಿಯೊಬ್ಬ ಅಂಗವಿಕಲನೂ ತನ್ನ ಅಂಗವಿಕಲತೆಯನ್ನು ಮೆಟ್ಟಿ ಬದುಕು ಕಟ್ಟಿ ಕೊಳ್ಳುವ ಕಲೆ ಕಲಿತರೆ ಅಂಗವಿಕಲತೆ ಅವರಿಗೆ ಶಾಪವಾಗದೆ  ಅವರ ಜೀವನ ಸುಂದರವಾಗಿ ರೂಪುಗೊಳ್ಳುವುದು        

ಕವನಗಳು

[12/6/2022, 3:59 pm] Pankaja K: ಗುರುಕುಲಾ ಚಾಮರಾಜನಗರ ಘಟಕ ಸ್ಪರ್ಧೆಗಾಗಿ ಕವನ ದತ್ತವಿಷಯ ಬಾಲಕಾರ್ಮಿಕ ಪದ್ದತಿ ತೋಲಗಿಸೋಣ ಕಮರದಿರಲಿ ಬದುಕು ಬಡತನದ ಬೇಗೆಯಲಿ ಬಳಲುತಿಹ ಕಾರ್ಮಿಕರು ಕೂಲಿ ಕೆಲಸಗಳಿಗೆ ತಮ್ಮ  ಮಕ್ಕಳನು ದೂಡುವರು ವಿದ್ಯೆಯನು ಕಲಿಯದೆಯೇ ಬದುಕುತಿಹ ಮುಗ್ಧರು ಕಷ್ಟದಲಿ ದುಡಿಯುತಲೆ ಬಾಲ್ಯವನು ಕಳೆಯುವರು ಬಾಲ್ಯದಾಟವಾಡುವಾ ವಯಸಿನಲಿ ಕೆಲಸವನು ಮಾಡುವರು ಹಸಿವಿನಾ ಕೂಪದಲಿ ಬೇಯುತ್ತ ಅರಳದೆಯೇ ಮುದುಡುವರು ಸರಿಯಲ್ಲ ಚಿಕ್ಕ ಮಕ್ಕಳನು ಹಚ್ಚುವುದು ಕೆಲಸಕ್ಕೆ ವಿದ್ಯೆಬುದ್ಧಿಯ ಕಲಿಸುತಲಿ ಅಣಿಗೊಳಿಸಿ ಜೀವನಕೆ ಬಾಲಕಾರ್ಮಿಕ ಪದ್ದತಿಯ ತೊಲಗಿಸೋಣ ನಾವೆಲ್ಲಾ ಅರಳಿಸುತಲವರ ಕನಸುಗಳ ತುಂಬೋಣ ಸಂತಸವ  ಬಾಳೆಲ್ಲಾ ಪಂಕಜಾ.ಕೆ. ಮುಡಿಪು [19/6/2022, 5:12 pm] Pankaja K: ಗುರುಕುಲಾ ಕಲಾಪ್ರತಿಸ್ಥಾನ  ಜಿಲ್ಲಾ ಘಟಕ  ಚಿಕ್ಕಮಗಳೂರು ಪ್ರೇಮಕವನ ಸ್ಪರ್ಧೆಗಾಗಿ ಹೃದಯ ಬಂಧನ ನನ್ನ ಹೃದಯದಿ ನಿನ್ನ ಕನಸಿದೆ ಚೆಲುವ ವದನದ ಸುಂದರಿ ಮನದ  ಬಯಲಲಿ ನಿನ್ನ ಹೆಸರಿದೆ ಮನವ ಸೆಳೆದಿಹ ಮೋಹಿನಿ ನನ್ನ ಹೃದಯವು ಬಂದಿಯಾಗಿದೆ ನಿನ್ನ ಪ್ರೇಮದ ಪಂಜರದಲಿ ಎನಿತು ಸುಖವದು ಚೆಲುವೆ ನಿನ್ನಯ ಒಲವಿನಾಸರೆಯಿರುತಲಿ ಮಧುರ ಕ್ಷಣಗಳ ನೆನಪು ತುಂಬಿದೆ ಹೃದಯ ದೇಗುಲದಲೆಲ್ಲಿಯೋ ಮರೆತು ಹೋಗದು ಮಧುರ ಕ್ಷಣಗಳು ಕನಸು ಮನಸಲಿ  ತುಂಬಿದೆ ಒಲವ ರಸವನು ಸವಿಯುವಾತುರ ಮನದ ತುಂಬಾ ತುಂಬಿದೆ ಚೆಲುವೆ ನಿನ್ನಯ ಪ್ರೇಮ ಪಂಜರದಿ ನನ್ನ ಹೃದಯವು ಕುಣಿದಿದೆ ಪಂಕಜಾ.ಕೆ. ಮುಡಿಪು

ಭಕ್ತಿಗೀತೆ

[4/9/2022, 7:50 pm] Pankaja K: ಗುರುಕುಲಾ ಕೊಡಗು ಘಟಕ ಚಿತ್ರಕ್ಕೊಂದು ಕವನ *ವರುಣಾಘಾತ* ಕೊಳೆಯನು ತೊಳೆಯುತ ಭರದಲಿ ಬರುತಲಿ ಮಳೆಯದು ಸುರಿಯಿತು ಬಿರುಸಿನಲಿ ಹೊಳೆಯಂತಾಯಿತು  ರಸ್ತೆಗಳೆಲ್ಲವು ಕಾಂಕ್ರೀಟ್ ಕಾಡಿನ ಮಧ್ಯದಲಿ ರಸ್ತೆಗಳೆಲ್ಲವೂ ನೀರಲಿ ಮುಳುಗಲು ದಾರಿಯು  ಕಾಣದೆ  ಬಳಲಿದರು ನೀರಿನ ಮೇಲೆಯೇ  ವಾಹನ ಓಡಿಸಲು ಸರ್ಕಸ್  ಮಾಡುತ ದಣಿಯುವರು ಹಸಿರಿನ ಗುಡ್ಡ ಕಾಡನು ಕಡಿಯುತ ಕಟ್ಟಿದ ಕಾಂಕ್ರಿಟ್  ಕಾಡುಗಳನು ಸುರಿಯುವ  ನೀರಿಗೆ  ಹರಿಯಲು ಆಗದೆ ಕೊಚ್ಚಿತು  ಮನೆ ಮಠಗಳನು ಮನುಜನೆ ತಿಳಿ ನೀ ಕಾಡುಗಳಿದ್ದರೆ ನಮ್ಮಯ ಜೀವನ  ಸುಸೂತ್ರವು ಪ್ರಕೃತಿಯ ಸಿರಿಯನು ಹಾಳುಗೆಡವದೆ ಉಳಿಸುತಲಿರೆ  ಜೀವನ ಪಾವನವು *ಪಂಕಜಾ.ಕೆ ಮುಡಿಪು* [11/9/2022, 2:13 pm] Pankaja K: *ಗುರುಕುಲಾ ಕೊಡಗು ಘಟಕ* *ಸ್ಪರ್ಧೆಗಾಗಿ* **ರುಬಾಯಿ* *ದತ್ತಪದ ನಗು* ನಗು ತುಂಬಿರುವ ಮುಖದ  ಕಳೆ ಹುಲುಸಾಗಿ ಬೆಳೆದಿರುವ  ಬೆಳೆ ಮನದ ನೋವು ಮರೆವ ಔಷಧಿ ಮನೆ ಮನಕೆ ಸಂತಸದ ಹೊಳೆ  *ಪ್ರತಿ ಸಾಲಿನಲ್ಲೂ 11 ಅಕ್ಷರವಿದೆ* *ಪಂಕಜಾ.ಕೆ ಮುಡಿಪು* [11/9/2022, 2:54 pm] Pankaja K: ಗುರುಕುಲಾ ಚಿಕ್ಕಮಗಳೂರು  ಚುಟುಕು ಸ್ಪರ್ಧೆಗಾಗಿ  *ದತ್ತಪದ.   *ಹಳ್ಳಿ ಜೀವನ* *ನಗರಜೀವನ* *ಸ್ವಚ್ಛ ಸುಂದರ* ಸ್ವಚ್ಛ ಸುಂದರ ಹಸಿರು ಪರಿಸರ  ಶುದ್ಧ ಗಾಳಿ  ನೀರಿನ   ಆಗರ ಹಳ್ಳಿ ಜೀವನದ ಸುಂದರ ಚಿತ್ರಣ ಪ್ರೀತಿ ವಿಶ್ವಾಸ ಬಂಧುರದ ತಾಣ  *ಒತ್ರಡದ ಜೀವನ* ನಗರದ ಜೀವನದಲ್ಲಿ  ತುಂಬಿದೆ  ಒ

ಹಾನಿಕವನ ಇತ್ಯಾದಿ

ಹನಿಕವನ *ನಮ್ಮ ಸಂಸ್ಕಾರ* ಮಾಡಬೇಕು  ನಾವೆಲ್ಲಾ ಅತಿಥಿ ಸತ್ಕಾರ ಅದುವೇ ನಮ್ಮ  ಸಂಸ್ಕೃತಿಯ ಸಾರ ಹಿಂದಿನಿಂದವೂ ಬಂದಿದೆ ಈ ಆಚಾರ ವಿಚಾರ ಅತಿಥಿ ದೇವೋಭವ ಎನ್ನುವುದು ನಮ್ಮ ಸಂಸ್ಕಾರ ಪ್ರೀತಿ ವಿಶ್ವಾಸ ಬಾಂಧವ್ಯ ಬೆಸೆಯಲು ಸಹಕಾರಿ ಬಂಧು ಬಾಂಧವರೊಡನೆ ಭೇಟಿ ಹಿತಕಾರಿ *ಪಂಕಜಾ.ಕೆ. ಚುಟುಕು      ನಾವಿಕ ಪೌರುಷಕ್ಕೆ ಹೆಸರೇ ಪುರುಷ ಅವನಿದ್ದರೆ  ಮನೆಯಲ್ಲಿ  ಹರುಷ ಬಾಳ ಬಂಡಿಯ ಪಯಣಕೆ   ಜತೆಗಾರ ಅವನಿಂದವೇ ಸುಂದರ ಸಂಸಾರ ದತ ತನಗ ಅತಿಯಾದ ಮುಗ್ಧತೆ ಇದ್ದರೆ ಅಪಾಯವು ಮೋಸಕ್ಕೆ ಬಲಿಯಾಗಿ ಬಾಳಾದೀತು ದುರ್ಭರ  *ಶ್ರೀಮತಿ.ಪಂಕಜಾ.ಕೆ. ಮುಡಿಪು*  ಕ ಅಕ್ಷರದಿಂದ ಪ್ರಾರಂಭವಾಗುವ ಕವನ ದತ್ತಪದ ಕರುನಾಡು ನಮ್ಮ ಕನ್ನಡ ನಾಡು ಕರುನಾಡಿನ ಮಣ್ಣಲಿ  ಇರುವುದು ಕಂಗಳ ತುಂಬುವ ಹಸಿರುವನ ಕಬ್ಬಿಗರುದಿಸಿದ  ನಾಡಿದು ನಮ್ಮದು ಕವಿ ಕೋಗಿಲೆಗಳು ಹಾಡಿಹರು ಕಂದನ ತೊದಲಿನ ನುಡಿಯಿದು ಕನ್ನಡ ಕಂಪನು ಬೀರಿದೆ ಎಲ್ಲೆಡೆಗೆ ಕವಿಗಳ ಕಲ್ಪನೆ ಗರಿಗೆದರುತಲಿ ಕನಸಲೂ ಮನಸಲೂ ಕಾಡುತಿದೆ ಕಲೆಗಳ  ನಾಡಿದು ಸುಂದರ ಬೀಡು ಕಸಿಯುತಲಿರುವುದು ಸಕಲರನು ಕಲಿಗಳು ಬಾಳಿದ ಹೆಮ್ಮೆಯ ನಾಡು ಕರವನು ಮುಗಿಯುವ ಕನ್ನಡಮ್ಮನಿಗೆ ಕಲರವ ಮಾಡುತ ನದಿಗಳು ಹರಿದಿವೆ ಕನ್ನಂಬಾಡಿಯ ಕಟ್ಟೆಯಲಿ ಕಣಕಣದಲ್ಲೂ ಕನ್ನಡ ತುಂಬುತ ಕನ್ನಡ  ತಾಯಿಯ ಕೀರ್ತಿಯ  ಹರಡೋಣ ಪಂಕಜಾ.ಕೆ. ಮುಡಿಪು ಅಬಾಬಿ ರಚನಾ ಸ್ಪರ್ಧೆಗಾಗಿ ವಿಷಯ..ಹದಿಹರೆಯ ಹದಿಹರೆಯದಲ್ಲಿ ಹಾದಿ ತಪ್ಪದಂತೆ ಜಾಗ್ರತೆಯಿಂದಿರಬೇಕು ಪಂಕಜಾರಾಮ ಬಾಳು ಗೋಳಾ

ಹನಿಕವನ ಚುಟುಕು

ಸ್ಪರ್ಧೆಗಾಗಿ  ಚಿತ್ರಕ್ಕೊಂದು ಹನಿಕವನ ಹಬ್ಬದ ಸಂಭ್ರಮ ಕಬ್ಬಿನ ಜಲ್ಲೆಯ ತಲೆಯ ಮೇಲೆ  ಹೊರುತ ಹಬ್ಬದ ಸಾಮಾನುಗಳ ಬೈಸಿಕಲ್ನಲ್ಲಿ ಹೇರುತ ಸಂಕ್ರಾಂತಿ ಹಬ್ಬವಾಚರಿಸುವ ಹುಮ್ಮಸ್ಸು  ತುಂಬುತ ಹೊರಟನು ಮನೆಯೆಡೆ ಗಾಡಿಯ ತುಳಿಯುತ ಎಳ್ಳು ಬೆಲ್ಲವ  ಬೀರುವ ಸಂಭ್ರಮದ  ಹಬ್ಬ  ತೊಟ್ಟಿರುವನು ಗುಲಾಬಿ ರಂಗಿನ ಹೊಸ ಜುಬ್ಬ ಹಬ್ಬದ ಸಂತಸಕೆ ತಂದನು  ಸಿಹಿತಿಂಡಿಯ ಡಬ್ಬ ಹುರುಪಿನಲಿ ಸಾಗಿಹನು ಹತ್ತಿ ಇಳಿಯುತ ದಿಬ್ಬ ಪಂಕಜಾ.ಕೆ. ರಾಮಭಟ್  ಚುಟುಕು ದತ್ತಪದ ಸಂಕ್ರಾಂತಿ   ಉತ್ತರಾಯಣದ ಪುಣ್ಯಕಾಲ ರವಿಯು ಬದಲಿಸಿದ ತನ್ನ ರಥದ ಚಲನ ಮಾಗಿಯ ಚಳಿ ಕಳೆದು ಬಿಸಿಲಿನಾಗಮನ ಉತ್ತರಾಯಣದ ಪುಣ್ಯಕಾಲವಿದು ಸಂಕ್ರಾಂತಿ ಮೈಮನದ ಜಡತೆ  ಕಳೆದು ತುಂಬಿತು ಹೊಸ ಕಾಂತಿ ಪಂಕಜಾ.ಕೆ.ರಾಮಭಟ್.ಮುಡಿಪು [        ನನ್ನವಳು      ನನ್ನಾಕೆ  ನನ್ನ ಮನೆ ಮನದ ಒಡತಿ      ಇವಳಿಲ್ಲದಿರೆ  ನನ್ನ ಬಾಳು ಅವನತಿ      ನನ್ನ ಹೃದಯದ ರಾಣಿ ಅವಳು      ಮಕ್ಕಳ ನೆಚ್ಚಿನ ತಾಯಿ ಅವಳು      ಅನ್ನಪೂರ್ಣೇಶ್ವರಿ ದೇವಿ ಆಕೆ      ನನ್ನ ಹೆಂಡತಿ ನನಗೊಂದು ಕೊಡುಗೆ            ಪಂಕಜಾ. ಕೆ ರಾಮಭಟ್ .ಮುಡಿಪು [ ಸ್ಪರ್ಧೆಗಾಗಿ ಟಂಕಾ ದತ್ತಪದ. ಕ್ಷಣಿಕ ಕ್ಷಣಿಕ ಸುಖ  ಮೈ ಮರೆವು ಅಪಾಯ ಎಚ್ಚರಬೇಕು ಬಾಳು ಗೋಳಾಗದಂತೆ  ಜಾಗ್ರತೆಯಿರಬೇಕು ಪಂಕಜಾ.ಕೆ. ರಾಮಭಟ್.ಮುಡಿಪು ಹನಿಗವನ ಮಹಾನ್ ನಾಯಕ ಸಂವಿಧಾನ ಶಿಲ್ಪಿ  ಅಂಬೇಡ್ಕರರು ಸಮಾನತೆಯ ಹರಿಕಾರರು ಸಧೃಢ ಭಾರತದ ಕನಸು ಕಂಡವರು ಬಡವರ ಶೋಷಣೆಗೆ ಧ್ವನಿಯೆ

ಬಾರೇ ನನ್ನೊಲವೆ

ಬಾರೇ ನನ್ನೊಲವೆ (ಭಾವಗೀತೆ) ಎದೆಯಾಳದಲ್ಲಿರುವ  ಚೆಲುವಾದ ಬಾವಗಳು ಹೊರಬರಲು ತವಕಿಸುತಿದೆ ಕೇಳು ಗೆಳತಿ ಚೆಲುವಾದ ಹೂವೊಂದು ಅರಳಿರುವ ಲತೆಯಂತೆ ನೀನಿರಲು ಬಾಳೆಲ್ಲಾ ಹೂವ ಹಾಸಿಗೆಯಂತೆ ಪಡಿಯಕ್ಕಿ ಎಡವಿ ನೀನಂದು ಬಂದೆ ಒಲವ ರಸ ಹರಿಸುತ್ತ ಮನದಲ್ಲಿ ನಿಂದೆ ಈ ಜೀವ ನಿನಗಾಗಿ ತುಡಿಯುತಿದೆ ನಲ್ಲೆ ನನ್ನುಸಿರು ನೀನಾದೆ  ನೀ ಅದನು ಬಲ್ಲೆ ಪ್ರಳಯವೇ ಆದರೂ  ಜತೆಯಾಗಿ ನಾನಿರುವೆ ಸ್ವರ್ಗದಾ ಸುಖವನ್ನು ಸವಿಯೋಣ ಇಲ್ಲೇ ಏಕಿಂಥ ಮುನಿಸು ನಿನಗಿದು ತರವೇ ನಿನ್ನ ಅಗಲಿಕೆಯ ಕ್ಷಣಗಳನು ನಾ ಸಹಿಸಲಾರೆ ಕಾದಿರುವೆ ನಿನಗಾಗಿ ಪ್ರೀತಿ ಹೂಗಳ ಹಿಡಿದು ನನ್ನೀ ಮನವು ಬರಿದಾಗಿದೆ  ನೀನಿಲ್ಲದೆ ಇಂದು ಬೇಗ ಬಾ  ನನ್ನೊಲವೆ ಕಾದಿರುವೆ ನಿನಗೆ ಮೈಮನವನಾವರಿಸು ಒಲವರಸ ಸುರಿದು ಪಂಕಜಾ.ಕೆ. ರಾಮಭಟ್ ಮುಡಿಪು

ಗೆಳೆತನ

ಗೆಳೆತನ   ಎಲ್ಲಿಯೋ  ಹುಟ್ಟಿ ಎಲ್ಲಿಯೋ ಬೆಳೆದು ಜತೆಯಾದೆ ನೀ ನನ್ನ ಕನಸುಗಳ ಸೆಳೆದು ನೋಯುವ ಮನಸಿಗೆ  ತಂಗಾಳಿಯಾದೆ ನೀನು ನಿನ್ನೊಲವ ಸಾಂತ್ವನಕೆ ಮೈಮರೆತೆ ನಾನು ಏಕಾಂತದ ಒಂಟಿತನಕೆ ಜತೆಯಾದೆಯಲ್ಲ ಕನಸಿನ ಗೋಪುರವ ನೀ ಕಟ್ಟಿದೆಯಲ್ಲ ಹೊಸತನವ  ತುಂಬುತಾ ಮನಸೂರೆಗೊಂಡೆ ಸ್ನೇಹವೆಂಬ ಅಮೃತದ ಜಲದಲ್ಲಿ ನಾ ಮುದಗೊಂಡೆ ಗೆಳೆತನವೆಂಬ ದೋಣಿಯಲಿರುವ ತಂಪು ಬಾಳದೋಣಿಯಲೂ ಅದರದೇ ಇಂಪು ಕಷ್ಟ ಸುಖ ಎಲ್ಲಕ್ಕೂ ಜತೆಯಾಗುವ ನಂಟು ಬಿಡಿಸಲಾರದ ಬಂಧ ಸ್ನೇಹದಾ ಗಂಟು ಕಂಡ ಕನಸಿಗೆ ನೀಹಿಡಿದೆ ಕನ್ನಡಿ ನೊಂದ ಮನಸಿಗೆ ನೀ ಬರೆದೆ ಮುನ್ನುಡಿ ನಗುವ ಹಿಂದಿನ ನೋವ ಮರೆಸುತಿದೆ ಸ್ನೇಹ ಕತ್ತಲೆಯ ಹಾದಿಗೆ  ಮುಂಬೆಳಕು ಸ್ನೇಹ ಶ್ರೀಮತಿ.ಪಂಕಜಾ.ಕೆ.ರಾಮಭಟ್

ಸರ್ಗದೈ ಸಿರಿ

          ಸ್ವರ್ಗದೈಸಿರಿ ಹಸಿರ ಹಂದರ ಹಾಸಿ ಧರೆಯಲಿ ರಸಿಕ ಕಂಗಳ ಸೆಳೆದಿದೆ ಕಸಿಯುತಿರುವುದು ಕಣ್ಣು ಮನವನು ಸ್ವರ್ಗದೈಸಿರಿಯಂತಿದೆ ಮನಕೆ ಮುದವನು ತುಂಬಿಸುತ್ತಲಿ ಹಸಿರು ಕಾನನ ಹರಡಿದೆ ಸುತ್ತ ನೀರಿನ ಹರಿವಿನೆಡೆಯಲಿ ತೂಗು ಸೇತುವೆ ನಿಂತಿದೆ ಕಲ್ಲು ಬಂಡೆಗಳೆಡೆಯೇ  ನಲಿಯುತ ಶುದ್ಧ ಝರಿಯದು  ನಿಂತಿದೆ ಸಲಿಲ ಜಲದಲಿ  ಮೂಡಿ ಬಿಟ್ಟಿಹ ಹಸಿರ ಸೊಬಗು ಮೈ ಮರೆಸಿದೆ ನೀಲ  ಬಾನಲಿ ಚಲಿಸುತಿರುವ  ಬೆಳ್ಳಿ ಮೋಡದ ಚಿತ್ರಣ ರಸ್ತೆ ಮಧ್ಯೆಯೇ ನಿಂತು ನೋಡುವ ಕಂಗಳಿಗೆ ರಸದೌತಣ ಉಳಿಸಿ ಬೆಳೆಸಲು  ಹಸಿರ ಸಿರಿಯನು ಉಸಿರು ತುಂಬಿಸಿ ಕೊಡುವುದು ಧರೆಯ ಒಡಲಿಗೆ ಕೊಳ್ಳಿ ಇಡದಿರೆ ಸ್ವಚ್ಛ ಪರಿಸರ ಸಿಗುವುದು ಶ್ರೀಮತಿ.ಪಂಕಜಾ.ಕೆ. ರಾಮಭಟ್