[21/11, 5:45 PM] pankajarambhat: *ಪಂಕಜಾರವರ ಮಧುರ ಗಾನ* ಕವಿತೆಗೆ ಒಂದು ಸನ್ನಿವೇಶವನ್ನು ಕಟ್ಟಿಕೊಡುವುದು ಸುಲಭದ ಮಾತಲ್ಲ...ಆದರೆ ಕವಯಿತ್ರಿ ಪಂಕಜಾರವರು ಮಾಗಿ ಕಾಲ,ಚುಮುಚುಮು ಚಳಿ,ಹಿಮ....ಹೀಗೆ ಪಾತ್ರಗಳನ್ನು ಕಣ್ಣ ಮುಂದೆ ತರುವಲ್ಲಿ ಯಶಸ್ವಿಯಾಗಿದ್ದಾರೆ....ಇಲ್ಲಿ ಪ್ರಿಯತಮನು ಬಂದಿರುವುದು ಕವಿತೆಗೆ ರಂಜನೆ ಸಿಕ್ಕಿದೆ...ಓದುಗನಿಗೆ ಖುಷಿ ಕೊಡುವ ಬರಹ... 👏🙏💐 [21/11, 5:45 PM] pankajarambhat: *ಮಧುರ ಗಾನ* *ಪಂಕಜಾ .ಕೆ* *ಇತ್ತ ಮಳೆಗಾಲ ಸರಿದು ಚಳಿಗಾಲದ ಆರಂಭ.ಮಂಜು ಮುಸುಕಿದ ಬೆಟ್ಟ.ಸೂರ್ಯೋದಯವಾಗಲು ಕರಗಿ ತೊಟ್ಟಿಕ್ಕುವ ಮಂಜಿನ ಹನಿಗಳು.ಕವಯಿತ್ರಿ ಪ್ರಕೃತಿಯಲ್ಲಿನ ಆಗುಹೋಗುಗಳನ್ನು ಪ್ರಣಯಕ್ಕೆ ಹೋಲಿಸುತ್ತಾ ಸಾಗಿದ್ದಾರೆ.ಕವನ ತುಂಬಾ ಚೆನ್ನಾಗಿ ಮೂಡಿಬಂದಿದೆ* *ಧನ್ಯವಾದಗಳು* *ಶ್ಯಾಮ್ ಪ್ರಸಾದ್ ಭಟ್* [21/11, 5:45 PM] pankajarambhat: ಪಂಕಜಾ.ಕೆ ರವರ ಕವನ ಮಧುರ ಗಾನದ ಕವಿತೆ ಭೂಮಿಯ (ಪ್ರಕೃತಿಗೂ) ಸೂರ್ಯನಿಗೂ ಪ್ರೀತಿಯ ಸಂಬಂಧ ಬೆಸೆದು ಮಾಗಿಯ ಚಳಿಯನು ವರ್ಣಿಸುತ್ತಾ ಭರದಿಂದ ಬಿಗಿದಪ್ಪಿ ಮೈಮನವ ಮರೆಸಿ ಕರಗಿಸಿದ ಮಂಜಿನ ಹನಿಯ ತೆರೆಯನು ಬಿಸಿಯಪ್ಪುಗೆಯ ತವಕದಲಿ ಚಳಿಗಾಲದ ಮಂಜಿನ ಹನಿಯಲಿ ಸೂರ್ಯನು ಕದ್ದು ಬಂದು ಭೂಮಿಯ ಅಪ್ಪುವ ಬೆಟ್ಟಗಳು ಕರಗಿ ನೀರಾಗಿ ತನು ಮನ ತಣಿಸಿಕೊಂಡು ಹಿತವಾಗಿ ನರಳಿ ನಗುತ ನಿಂತ ಪ್ರಕೃತಿ ನಕ್ಕಳು ಒಲವ ಬಲೆಯಲಿ. ಸುಂದರವಾದ ಕವಿತೆ ಮೇಡಂ. ಧನ್ಯವಾದಗಳು...