Skip to main content

Posts

Showing posts from March, 2019

ಬರ

ಬರ ನೆಟ್ಟ ಗಿಡಮರಗಳ ಬೇರು ಅಶಿಸುತ್ತಿವೆ ಮೈತುಂಬ ನೀರು ಭಾವಿ ಕೆರೆ ತೊರೆಗಳ ನೀರು ಬತ್ತಿ ನೀರಿಗಾಗಿ ಭೂತಾಯಿ ಒಡಲ ಕೆತ್ತಿ ಅಂತರ್ಜಲಕೆ ಕನ್ನ ಕೊರೆದು ನೀರಸೆಳೆಯು  ಸಂಪೂರ್ಣ ಅಳಿದು ಎಲ್ಲೆಲ್ಲೂ ಕಾಣ...

ಸ್ವಾತಿ ಮಳೆ

ಸ್ವಾತಿ ಮಳೆ ಸ್ವಾತಿ ಮಳೆಯ ಮುತ್ತು ಭೂಮಿ ತಾಯಿಗೆ ಗೊತ್ತು ಬರಲಿ ಸ್ವಾತಿ ಮಳೆ ಮುತ್ತಾಗಲಿ ಇಳೆ ಸ್ವಾತಿ ಮಳೆಯಲಿ ಮಿಂದ ಇಳೆ ನಗುಮುಖದ ಧರಿತ್ರಿ  ಕಳೆ ಬಿಸಿಲ ಬೆಗೆಗೆ ಬೆಂದ ಇಳೆಗೆ ತಂಪಾಗಲಿ ಧರೆಗೆ

ಹೊಸವರ್ಷಕ್ಕೆ ಸ್ವಾಗತ

ಹೊಸವರ್ಷಕೆ ಸ್ವಾಗತ ಹೊಸವರ್ಷದಾಗಮನಕೆ ವರುಣನ ಸ್ವಾಗತ ಬೀಸುಗಾಳಿಯ ಜತೆ ಮಳೆಯ ಸಿಂಚನ ಬಿರುಬಿಸಿಲಿಗೆ ಬಳಲಿ ಬೆಂಡಾದ ಇಳೆಗೆ ಹನಿ ಮಳೆಯ ತಂಪು ಕಂಪಿನ ನೀರ ಜಳಕ ಹೊಸಮಣ್ಣಿನ ಪರಿಮಳವು ಎಲ್ಲೆಡೆ ಹಬ್ಬಿ ...

ಹೆಣ್ಣು ಗಂಡಿನ ಸ್ನೇಹ

ಹೆಣ್ಣು ಗಂಡಿನ ಸ್ನೇಹ ಕೂಡಿ ಆಡಿದೆವು ನಾವು ಬಾಲ್ಯದಿಂದ ಒಟ್ಟಾಗಿ ಕುಣಿದೆವು ಜತೆಯಾಗಿ  ನಲಿದೆವು ಅಕ್ಕ ತಂಗಿಯರಲ್ಲಿ ಅಣ್ಣ ತಮ್ಮಂದಿರಲ್ಲಿ ಕೊನೆಗೆಹೆತ್ತಬ್ಬೆಅಪ್ಪನಲ್ಲೂ ಹೇಳಲಾರದ ವಿಷಯ ಹಂಚಿ...

ಸಮಚಿತ್ತ

ಸಮಚಿತ್ತ ಸೋಲು ಗೆಲುವುಗಳುಂಟು ನೋವು ನಲಿವುಗಳುಂಟು ಬಾಳ ಪಯಣದಲಿ ಸೋಲು ಬಂತೆಂದು ಕುಗ್ಗದೆ ಗೆಲುವು ಬಂತೆಂದು ಹಿಗ್ಗದೆ ಸಮಚಿತ್ತತೆ ಯಿರಲಿ ಚಿತ್ತ ದೇವ  ಕೊಟ್ಟಿಹ ಬಾಳು ಹಾಳುಗೆಡವಿದರೆ ಗೋಳು ಬಾಳ...

ಹರೆಯ

ಹರೆಯ ಹರೆಯದಲ್ಲಿ ಹಕ್ಕಿಯಂತೆ ಆಗಸದಲಿ ರೆಕ್ಕೆ ಬಿಚ್ಚಿ ಹಾರುವ ಮನಸು ಗರಿಗೆದರಿದ ಆಶೆಗಳು ಬಾನೆತ್ತರ ಏರಿ ಕುಳಿತು ನಲಿದ ಕನಸು ಬೇಡನ ಬಲೆಯೊಳಗೆ ಸಿಕ್ಕಿ ರೆಕ್ಕೆಮುರಿದ ಹಕ್ಕಿಯಂತಾಗದಿರಲಿ ಬಾಳು ಕನ...

ಗುಬ್ಬಿಹಕ್ಕಿ

ಗುಬ್ಬಿ ಹಕ್ಕಿ ಗುಬ್ಬಿಯೊಂದು ಹಾರಿ ಬಂದು ಮಾಡಮೇಲೆ ಕುಳಿತಿತು ಅತ್ತ ಇತ್ತ ಕತ್ತು ತಿರುಗಿಸಿ ಸುತ್ತ ಮುತ್ತ ನೋಡಿತು ಗೂಡುಕಟ್ಟಲದಕೆ ಜಾಗ ಎಲ್ಲಿಯೂ ಇಲ್ಲವೆಂದು ಕಂಡಿತು ಮುಳಿಹುಲ್ಲ ಮಾಡು ಈಗ ಹುಡುಕ...

ಹೋಳಿ ಹಬ್ಬ

ಹೋಳಿ ಹಬ್ಬ ಶಿಶಿರನು ತೆರಳುವ ಹೊತ್ತು ವಸಂತನಾಗಮನದ ಹೊತ್ತು ಪೂರ್ಣ ಚಂದ್ರನುಬರುವ ಹೊತ್ತು ಹೋಳಿ ಹಬ್ಬದ ಸಂಭ್ರಮದ ಹೊತ್ತು ರಂಗು ರಂಗುಗಳ ಹಬ್ಬಹೋಳಿ ಎಲ್ಲೆಲ್ಲೂ ರಂಗಿನೋಕುಳಿ ಹೋಳಿ ಹುಣ್ಣಿಮೆಯ ಗೌ...

ಕೊಡುಗೆ

       ಕೊಡುಗೆ ದೇವನ  ಪ್ರೀತಿಯ ಕೊಡುಗೆಯಿದು ಪ್ರಕೃತಿ ರಮ್ಯ ಸುಂದರ ತಾಣವಿದು ಪರಿಸರ ಉಳಿಸಿಕೊಂಡರೆ ಹಸಿರು ಸಿಗುವುದು ನಿತ್ಯ ನಮಗೆ ಉಸಿರು ಬಿರುಬಿಸಿಲ   ಬೇಗೆಯಲ್ಲಿ ನಿಂದು ಗಿಡಮರಗಳು. ಬಸವಳಿದಿ...

ಸಕಾಲ

ಸಕಾಲ ಮಳೆ ಬಂದು ಇಳೆಗೆ ತಂದಿತು ತಂಪು ಹರಡಿತು ಎಲ್ಲೆಲ್ಲೂ ಹೊಸ ಮಣ್ಣಿನ ಕಂಪು ಬೀಜ ಬಿತ್ತಲು ಇದು ಸಕಾಲ ವ್ಯರ್ಥ ಮಾಡಬೇಡ ಈ ಕಾಲ ಸಕಾಲದಲ್ಲಿ ಬೀಜ ಗಳ ಬಿತ್ತಿ ಪಡೆಯಬೇಕು ಅದರಲ್ಲಿ ಉತ್ಪತ್ತಿ ಸಾವಯವ ತರಕ...

ವೀರಯೋಧ

ವೀರ ಯೋಧ ಭಾರತಾಂಬೆಯ ಶಿಖರದಲಿ ಮಳೆ ಬಿಸಿಲಿಗೆ ಮೈಯನೊಡ್ಡಿ ಮೈಯ ಕೊರೆವ ಚಳಿಗಾಳಿ ಯಲ್ಲಿ ದೇಶಕಾಯುವ ವೀರಯೋಧನೆ ಸಲ್ಲಿಸುವೆ ನಿನಗೆ ನಿತ್ಯ ವಂದನೆ ಭಾರತಾಂಬೆಯ ಸೆರಗಸೆಳೆಯುವ ವೈರಿಗಳ ಸದೆ ಬಡಿದು ನೀ...

ಹುಚ್ಚು.ಮಳೆ

ಹುಚ್ಚು ಮಳೆ ಬಾನು ತುಂಬಿದ ಕರಿಯ ಮುಗಿಲು ಅಟ್ಟಹಾಸದಿ ಮೆರೆದು ಸುರಿಸಿದ ಮಳೆಗೆ ಮನದಲಿ ತುಂಬಿದೆ ಏನೋ ಆವೇಗ ಜೀವಜಂತುಗಳೆಲ್ಲಾ ಹನಿಮಳೆಗೆ ನೆನೆದು ಸಂಭ್ರಮಿಸುತ್ತಿರುವ ಕ್ಷಣ ಗಳಲ್ಲೇ ಆಗಸವೇ ತೂತಾಗ...

ಯುಗಾದಿ

ಯುಗಾದಿ ಹೊಸ ಸಂವತ್ಸರ ವ ಸಾರುತ್ತ ಹೊಸವರ್ಷವು ಹೊಸತನದಿ  ಬಂದಿತು ಹಳತು ಕಳೆದು ಹೊಸತನವ ಮನದಲ್ಲಿ ತುಂಬುತ ಮತ್ತೆ ಬಂದಿತು  ಯುಗಾದಿ ಗಿಡಮರಗಳು ಚಿಗುರಿ ಹೂವು ಹಣ್ಣುಗಳ ತೇರನು ಕಟ್ಟಿ ನಲಿಯಿತು ಮುದ...

ಹೊಸ ಸಂವತ್ಸರ

ಹೊಸ ಸಂವತ್ಸರ ಪ್ರಕೃತಿ  ಮಾತೆಗೆ  ತಂದಿದೆ ಪುಳಕ ಹೊಸವರ್ಷದಾಗಮನದ ಜಳಕ ಹಳೆಯ ಎಲೆಗಳ ಉದುರಿಸಿ ಚಿಗುರು  ಹೂಗಳ   ಅರಳಿಸಿ ತುಂಬುತಿದೆ ಕನಸುಗಳ ಹೂರಣ ಎಲ್ಲೆಲ್ಲೂ ಹೂ ಹಸಿರು ತೋರಣ ಅರಳಿ ನಿಂತಿವೆ ಕುಸ...

ಸಿಕ್ಕಲಿಲ್ಲ ಹೆಣ್ಣು

ಸಿಕ್ಕಲಿಲ್ಲ ಹೆಣ್ಣು ಮೂವತೈದಾದರು.ನಿನಗೇಕಿನ್ನು ಮದುವೆ ಇಲ್ಲ ಹಂಗಿಸಿ ಕಾಡಿಸಿ ನೋಯಿಸಿ ದರೆಲ್ಲ ನೂರಾರು ಗಂಡಸರ  ಮುಂದೆ ನಿಂತು  ವಧೂಪರೀಕ್ಷೆಗೆ  ಕೊರಳು ಒಡ್ಡಿ ನಿಂತು ದಾಂಪತ್ಯದ ಮಧುರ ಕನಸನ್ನ...

ಬಾಳೊಂದು ಹೂಬನ

ಬಾಳೊಂದು ಹೂಬನ ಬಾಳೊಂದು  ನಂದನವನ ಬೆಳೆಸಬೇಕದರಲ್ಲಿ ಹೂಬನ ಕಷ್ಟ  ದುಃಖಗಳ  ಸಹಿಸುತ ನೋವುನಲಿವುಗಳಲಿತೇಲುತ ನಗುತ  ನಗಿಸುತಿರಲು  ಬಾಳು ರುಚಿಯಾದ  ಹಣ್ಣಿನ  ಹೋಳು ಜೀವನವೊಂದು  ಜಂಜಾಟ ಇರಲಿ ಅದರ...

ಅಭಿನಂದನೆ

ಅಭಿನಂದನೆ ಅಭಿನಂದನಾ ನಿನಗೆ ಅಭಿನಂದನೆ ವೈರಿಯ ಬಂಧನದಲ್ಲಿದ್ದರೂ ಧೃತಿಗೆಡದೆ ಹಿಂಸೆಯ ಸಹಿಸುತ ಗುಟ್ಟನು ಬಿಡದೆ ಶತ್ರುಗಳ ಸದೆಬಡಿದು ಸೆರೆಯಾದೆ ಕರ್ತವ್ಯವೇ ಉಸಿರೆನುತ ಉಳಿಸಿದೆ ಭಾರತ ಕೀರ್ತಿಯ ...

ಒಲವ ಭಾವ

ಒಲವ ಭಾವ ಬಾವನೆಗಳೆಂಬ ಚೆಲುವ ಹನಿಗಳು ಮುತ್ತಿನಾಭರಣದ ಗಣಿಗಳು ಮನದಲಿ ತುಂಬಿದೆ ಒಲವ  ತನಿರಸ ಹೊಳೆಯಾಗಿ ಹರಿಯುತ್ತಿದೆ ಜೀವರಸ ಒಲವಗಾನದ ಮಳೆ ಎಲ್ಲೆಲ್ಲೂ ಹರಿದಿದೆ ಮನಕೆ   ಹೊಸತನದ  ಕಳೆ ತಂದಿದೆ ಕ...

ನೆನಪಿನೋಲೆ

ನೆನಪಿನೋಲೆ ಬೆಳದಿಂಗಳ ರಾತ್ರಿಯಲಿ ತಂಗಾಳಿ ಬೀಸುತ್ತಿರಲು ಮನದಲ್ಲಿ ನಿನ್ನ ನೆನಪು ತರುತಿದೆ ಒಲವ ಕಂಪು ನೈದಿಲೆಯ ಅರಳುವಿಕೆಯಲೂ ನಿನ್ನದೇ ನೆನಪು ರಾತ್ರಿರಾಣಿಯ ಕಂಪಲೂ ತುಂಬಿದೆ ನೆನಪು ನೆನಪುಗಳ ...

ಶಿವರಾತ್ರಿ 9...ಗಜಲ್

ಗಜಲ್. 9 ಶಿವರಾತ್ರಿಯ ದಿನವಿದು ಪೂಜಿಸಬೇಕಲ್ಲ ಶಿವನ ಭಜನೆಧ್ಯಾನವ ಮಾಡಿ ಪಡೆಯಬಹುದಲ್ಲ ಶಿವನ ಜಾಗರಣೆ ಉಪವಾಸ ಮಾಡಿದರೆ ಸಾಕೇನು ಭಕ್ತಿಯಿಂದ ಅರ್ಚಿಸಿ  ನಮಿಸಬೇಕಲ್ಲ ಶಿವನ ಹಸಿದವನಿಗೆ  ಸಿಗದ ಅನ್ನವ...

ದೇವ ಸೃಷ್ಟಿ

ದೇವ ಸೃಷ್ಟಿ ಓ ದೇವಾ ನೀ ಸೃಷ್ಟಿ ಸಿದ ತಾಣವೂ ಕಣ್ಮನ ತಣಿಯುವ ನೋಟವೂ ನಾನಂದು ನಿನ್ನಕಂಡಾಗಲೊಮ್ಮೆ ಮನಸೆಲ್ಲಾ ಖುಷಿಯಾಯಿತು ಓ ದೇವಾ ಬುವಿಯಲ್ಲಿ ತುಂಬಿರುವ ಸೌಂದರ್ಯವನು ಕಂಡು ಬೆರಗಾದೆ ನಾ ಇಂದಿಗೂ ಓ ...