Skip to main content

Posts

Showing posts from August, 2019

ನಿಶಾ ದೇವಿ

ನಿಶಾ ದೇವಿ ಬಾನಲಿ ಚೆಲು ಬಣ್ಣವ ಕಲಸುತ ರವಿ ತಾನಿಶೆಯೊಡನಾಡಲು ತೆರಳಿದನು ಆಗಸದಂಚಲಿ ಹಬ್ಬಿದ ಬಣ್ಣದ ಓಕುಳಿ ಎಲ್ಲೆಡೆ ತುಂಬಿತುಚೆಲುವಿನ ಚಿತ್ತಾರದ ಟಿಕಳಿ ಬೀಸುವ ತಂಗಾಳಿಯ ತಂಪು ಗಿಡಮರಗಳ ತೊನೆದಾ...

ಅಮೃತ ಧಾರೆ ಭಾವಗೀತೆ

ಅಮೃತಧಾರೆ ಅಂಬರದ ತುಂಬೆಲ್ಲಾ ಕರಿ ಮೋಡಗಳ ದಂಡು ನೀಲಾಗಸದಿ  ಹರಡಿಹುದು ಕಪ್ಪನೆಯ  ಹಿಂಡು llಪll ವಸುಂದರೆಯ ಮೈಯೆಲ್ಲಾ ಕಣ್ಣಾಗಿದೆl ವರುಣನೊಲವಿನ ನಿರೀಕ್ಷೆಯಲಿ ಬೆಂಡಾಗಿದೆl ತನು ಕಾದು ಮೈಯೆಲ್ಲಾ ಕೆಂ...

ಸುಂದರ ಕ್ಷಣ

     ಸುಂದರ ಕ್ಷಣ ಮಳೆಗಾಲವು ಮೆಲ್ಲ ಮೆಲ್ಲನೆ ಬಂದಿತು ಹೊತ್ತಿ ಉರಿದ ಧರೆಗೆ ತಂಪನು ತಂದಿತು ಮಳೆಯ ಸ್ಪರ್ಶವು ಇಳೆಗೆ ತಂದಿತು ತಂಪು ತುಂಬಿದ ಹರ್ಷದೊಲವಿನ ತೇರನು ಹಸಿರು ಹುಲ್ಲು ತಲೆಯನೆತ್ತಿ ಬಿಂಕದ...

ಪ್ರಕೃತಿಯ ಬಂಧ

ಪ್ರಕೃತಿಯ ಬಂಧ ಬಾನಲಿ ತೇಲಾಡುತಿವೆ  ಮೋಡಗಳ ಹಿಂಡುl ಆಗಸದಿ ಹಾರಾಡುತಿವೆ ಹಕ್ಕಿಗಳ ದಂಡುll ರವಿ ತಾ ಇಳೆಗೆ ಬೆಳಕ ಸುರಿಸಲು  ಬಂದl ಭೂತಾಯಿ ಹೊದ್ದಿರುವ ಹಸಿರು ಸೀರೆಯ ಅಂದll ಹರಡಿತದೋ ಎಲ್ಲೆಲ್ಲೂ ಚೆಲುವ ಬ...

2 ಚುಟುಕುಗಳು ಜೇನು ಬಗ್ಗೆ

1..ಮಧುರಸ ಮಧುರಸವ ಹೀರುವ ದುಂಬಿಗಳ ಶ್ರಮ ಸಿಹಿಯಾದಜೇನು ಶ್ರಮ ಜೀವಿಯ ಬಾಳು ಹಾಲು ಜೇನು 2    ಡೈವೋರ್ಸ್ ಜೇನ್ನೊಣ ಗಳು ಕಡಿದಾವೆಂದು ಸಿಹಿ ಜೇನ ಬಿಡುವುದೇ? ಜಗಳವಾಯ್ತೆಂದು ಹಾಲು ಜೇನಿನಂತಿದ್ದ ಸಂಸಾರವ...

ಪ್ರೀತಿ

ಪ್ರೀತಿ ನಿನ್ನ   ಅನುರಾಗದ  ಸೆಳೆತದಲಿ ಅದೇನೋ ಮೋಡಿಯೋ ಕಾಣೆ ಮನಸು ನವಿಲಿನ ತೆರದಲಿ ಕುಣಿಸಿ ಮೀಟಿತು  ನನ್ನೆದೆಯ  ವೀಣೆ ಇನಿಯಾ ನೀ ಬಂದು ಸೆಳೆದೆ ನನ್ನ ಕಣ್ಣ ಹೊಮ್ಮಿತು ತನುಮನದಲಿ ಹೊಸ ಬಣ್ಣ ಭಾವನೆ...

ಲಕ್ಷ್ಮಿ ಸ್ತುತಿ. 2

ಲಕ್ಷ್ಮಿ ಸ್ತುತಿ ಪಂಕಜವಾಸಿನಿ ಹರಿ ವಕ್ಷಸ್ಥಳ ನಿವಾಸಿನಿ ಮಂಗಳ ರೂಪಿಣಿ ಜಗದಂಬೆ ll ಸುರಗಣ ಪೂಜಿತೆ ಹರಿಯರಮಣಿ  ನಿತ್ಯವೂ ಕಾಯೋ ಜಗದಂಬೆ ll ಅನುದಿನ ನಿನ್ನಯ ನಾಮವ ಜಪಿಸುತ ಸ್ತುತಿಸುವೆ ನಿನ್ನನು ಭಕುತ...

ಚೆಲುವೆ

ಚೆಲುವೆ ಚೆಲುವಾದ ಮೊಗದಲಿ ಮುಗುಳುನಗೆ  ಅರಳಿರಲು ಮನಸೋಲದವರಾರು ಹೇಳು ಚೆಲುವೆll ಹೊಳೆ ಹೊಳೆವ ಮುಂಗುರುಳು ನಸುನಗುವ ಚೆಂದುಟಿಯ ಚೆಲುನಗೆಗೆ ಮರುಳಾಗದವರಾರು ಹೇಳು  ಚೆಲುವೆll ಕಣ್ಣೋಟದಲೆ  ಕೆಣಕುತ ...

ಒಲವ ಹನಿ. 2

ಒಲವಹನಿ ಅಗಸದಿ ತುಂಬಿರುವ ಮೋಡಗಳ ದಂಡು ಮಳೆಯ ಹನಿಗಳ ಸುರಿಸಿ ತಂದಿತು ಇಳೆಗೆ ತಂಪು ಮುದುಡಿದ ಮನಗಳು ಅರಳುತಿದೆ ಒಲವ ಧಾರೆಯ  ಸವಿದ ಇನಿಯಳಂತೆ ಎಲ್ಲೆಲ್ಲೂ ಹರಿಯುತಿದೆ ನೀರಧಾರೆ ಕೊಚ್ಚಿಹೋಗುತಿದೆ ಇ...

ಅಜ್ಜಿ ಪೇಟೆ ಪ್ರಯಾಣ ನಗೆ ಕವನ

ಅಜ್ಜಿಯ  ಪೇಟೆ ಪ್ರಯಾಣ ಅಜ್ಜಿಯೊಮ್ಮೆ ಮೊಮ್ಮಗನ ಕಾಣಲೆಂದು ಪೇಟೆ ಬೀದಿಗೆನಡೆದುಕೊಂಡು ಹೊರಟಳು ಪೇಟೆ ತುಂಬಾ ತಿರುಗುತ್ತಿರುವ ಜನರ ಕಂಡು ಬೆರಗಾಗಿ ತೆಗದ ಬಾಯಿ ಮುಚ್ಚಲಿಲ್ಲಅವಳದು ಏನು ಇದು ಇಂತ ವೇ...

ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ದಿನಾಚರಣೆ ಬಂದಿತು ಸ್ವಾತಂತ್ರ್ಯ ದಿನಾಚರಣೆ ಹಾರಿತು ಎಲ್ಲೆಡೆ ತ್ರಿವರ್ಣಧ್ವಜ ಬ್ರಿಟಿಷರು ಆಳಿದ ನೆಲದಲಿ ಹಚ್ಚಿದರು ಸ್ವಾತಂತ್ರ್ಯದ ಹಣತೆ ಉರಿಸಿದರು ಸ್ವಾಭಿಮಾನದ ಸೊಡರು ಬೂದಿ...

ಮಮತೆಯ ಮಡಿಲು

ಮಮತೆಯ ಮಡಿಲು ಮಮತೆಯಾ ಮಡಿಲೊಂದು ಕೈಬೀಸಿ ಕರೆಯುತಿದೆ ಅಣ್ಣ ತಮ್ಮರ ಒಲವು ರಾತ್ರಿ ಹಗಲೂ ಕಾಡುತಿದೆ ಅಕ್ಕ ತಂಗಿಯರ ಜತೆ ನಲಿದಾಡಿದಾ ಮನೆ ತಮ್ಮ ಅಣ್ಣಂದಿರ ಒಲವು ತುಂಬಿ ತುಳುಕಿದಾ ತೆನೆ ಅಪ್ಪ ಅಮ್ಮನ ಮ...

ಗಜಲ್. 21 ಉಸಿರು(ಚೆನ್ನ)

ಗಜಲ್. 21 ಬಾನಿನಲಿ ಹರಡಿರುವ ಬಿಳಿಯ ಮುಗಿಲು ಎಷ್ಟು ಚೆನ್ನ ಅಂಬರದಲಿ ತುಂಬಿದ ಬೆಳದಿಂಗಳ ಹಾಲು ಎಷ್ಟು ಚೆನ್ನ ಸೂರ್ಯ ಮೂಡುವ ಮೊದಲೇ ಹಾಸಿಗೆ ಬಿಟ್ಟು ಏಳಬೇಕು ರವಿಕಿರಣದ ಸ್ಪರ್ಶದಲಿ ಮೈ ಮರೆಯಲು ಎಷ್ಟು ಚ...

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಾಯರಿ

ಶಾಯರಿ. ...1 ಬರೆಯಬೇಕೆಂದಿದ್ದೆ ಶಾಯರಿ ಮುಗಿದುಹೋಯಿತು ಪೆನ್ನಿನ ಶಾಯಿರಿ ಏನು ಮಾಡಲಿ ನಾನು ಹೇಳಿರಿ ಗಲ್ಲಕ್ಕೆ ಕೈ ಹಚ್ಚಿ ಕೊಂಡು ಕೂತೇರಿ ಶಾಯರಿ ...2 ನಿನ್ನ ಕಣ್ಣ ಕಾಂತಿ ನೋಡಿ ಬಾನ ತಾರೆ ನಕ್ಕಿತು ನಿನ್ನ ಮ...

ಮುದ್ದುಕೃಷ್ಣ

ಮುದ್ದು ಕೃಷ್ಣ ಮೆಲ್ಲ ಮೆಲ್ಲ ಬಂದನಲ್ಲ ಮುದ್ದುಕೃಷ್ಣ ಗಲ್ಲಕೊಂದು ಮುತ್ತನಿಟ್ಟ ಚೆಲುವ ಕೃಷ್ಣ ಕೊಳಲಗಾನ ನುಡಿಸಿ ಮನವ ಕದ್ದನಲ್ಲ ಬೃಂದಾವನದ ಸುತ್ತು ತಿರುಗಿಸಿ ದಣಿಸಿದನಲ್ಲ ರಾಧೆ ಒಲವ ಗೆದ್ದುಕೊ...

ಗಜಲ್ 20 ಆತುರ

ಗಜಲ್. 20  ಆತುರ ಮಳೆ ಬಂದಾಗ ಹರಿವ ನೀರಿನಲ್ಲಿ ಆಡುವಾಸೆ ಗರಿಬಿಚ್ಚಿ ಹಕ್ಕಿಗಳಂತೆ ಬಾನಿನಲ್ಲಿ ಹಾರಾಡುವಾಸೆ ತುಂಬಿ ಹರಿಯುವ ತೊರೆಯ ಕಂಡಿದೆ ಮನವು ಮನಸಾರೆ ಅಲೆಗಳಲ್ಲಿ  ತೇಲಾಡುವಾಸೆ ಹೂವ ಮಧುವ ಸವಿಯು...

ಚೆಲುವ ಭಾವ

      ಚೆಲುವ ಬಾವ ನಾನು ಹೆಣ್ಣು ನೀನು ಗಂಡು ಒಲವೇ ನಮ್ಮ ಜೀವನ ನಾನು ಹೂವು ನೀನು ದುಂಬಿ ಪ್ರೀತಿ ನಮ್ಮ ಬಾವನ ನಾನು ಭೂಮಿ ನೀನು ಭಾನು ಸುರಿಸು ಮಳೆಯ ಹೂರಣ ಸೂರ್ಯ ಚಂದ್ರ ಮಿನುಗುತಾರೆ ಒಲವ ಸುರಿವ ಜೀವನ ನನ...

ಗಣಪಗೆ ನಮನ

ಗಣಪಗೆ ನಮನ ನಮಿಸುವೆನು ಗಣಪ ನಿನ್ನ ಚರಣ ಕಮಲಗಳಿಗೆ ಗಜಮುಖವದನ ಗಜಾನನ ವಿಘ್ನನಿವಾರಕ ವಿಘ್ನೇಶ್ವರ ಈಶ್ವರ ನಂದನ ಗಣೇಶ್ವರ ಪಾರ್ವತಿ ತನಯ ಗಜಮುಖನೆ ಮೊದಲ ವಂದನೆಯ ಸಲ್ಲಿಸುವೆ ನಿನಗೆ ಭಾದ್ರಪದ ಚೌತಿ...

ಹೂಮನಸು

ಹೂ ಮನಸು ಮಂಜಿನಾ ಸ್ಪರ್ಶದಲಿ ಮೈಮರೆತು ನಿಂತಾಗ ಮೆಲ್ಲ ಮೆಲ್ಲನೆ ಬಂದು ಮನಕೆ ಲಗ್ಗೆಯಿಟ್ಟೆಯೇಕೆ ಮಂಜು ಹನಿಗಳು ಕರಗಿ ಮುತ್ತಾಗಿ ಸಾಗುತಿರಲು ಮನದಿ ತುಂಬಿದ  ಭಾವನೆಗೆ ಮುನಿದು  ಕರಗಿದೆಯೇಕೆ ನಿನ...

ನೆನಪಿನಲೆಗಳಲಿ

ನೆನಪಿನಲೆಗಳಲಿ ಸಂತಸದ ಹಕ್ಕಿಗಳು ಸವಿಜೇನ ಹೊನಲಾಗಿ ಸಾವಿರ ಸಾವಿರ ಕನಸುಗಳಾಗಿ ಸಾಗುತಿದೆ ಮನದಲಿ ಇಂದು ನಲ್ಲ ನಿನ್ನ  ಸವಿ ನೆನಪು ನಾ ಮುಂದು ತಾ ಮುಂದು ನವಿರಾಗಿ ಮನತುಂಬಿ ನುಗ್ಗುತಿದೆ ಮನದಲಿ ಇಂದ...

ಪ್ರೇಮಜ್ಯೋತಿ

ಪ್ರೇಮ ಜ್ಯೋತಿ ನನ್ನ ಜತೆಗೆ ಹೆಜ್ಜೆ ಹಾಕುತ ನನ್ನ ಬಾಳ ಪಯಣದಲ್ಲಿ ಜತೆಗೆ  ಬರುವೆಯ ಚೆಲುವಿಯೇ ನನ್ನ ಒಲವ ತುಂಬಿ ಕೊಡುವೆ ಕಣ್ಣ  ರೆಪ್ಪೆಯಂತೆ  ನಿನ್ನ ಒಲವಿನಿಂದ ಕಾಣುವೆ ಬಾರೆ ನನ್ನ  ಪ್ರೇಮ ಜ್ಯೋತಿ ...

ಮೊರೆ

ಮೊರೆ ವೆಂಕಟರಮಣನೆ ಸಂಕಟಹರಣನೆ ಮೋದದಿ ನಿನ್ನನು ಭಜಿಸುವೆನು ಸರಸಿಜನೇತ್ರನೇ ಲಕ್ಷ್ಮೀರಮಣನೆ ಅನುದಿನ ನಿನ್ನನು ನೆನೆಯುವೆನು ಸಪ್ತಗಿರಿವಾಸನೆ ಶ್ರೀ ವೆಂಕಟೇಶನೆ ಭವಬಂದನದೊಳು ಸಿಲುಕಿರುವೆನು ...

ದೀಪಾವಳಿ

ದೀಪಾವಳಿ ಬೆಳಕಿನ ಹಬ್ಬವುದೀಪಾವಳಿ ಎಲ್ಲೆಲ್ಲೂ ಪಟಾಕಿಗಳ  ಹಾವಳಿ ಪರಿಸರವೆಲ್ಲ ಮಲಿನ ಜೀವ ಜಂತುಗಳ ಹರಣ ಹಚ್ಚಬೇಕು ಸಾಲು ಸಾಲು ದೀಪ ಬಿಡಬೇಕು ಪಟಾಕಿಗಳ  ತಾಪ ಸಾಲು ಸಾಲು ಹಣತೆಯ ಹಚ್ಚಿ ಮನೆ ಮನದ ಕಳೆ...

ಪ್ರಕೃತಿ ಚೆಲುವು

ಪ್ರಕೃತಿ ಚೆಲುವು ಗುಡ್ಡ ಬೆಟ್ಟಗಳಲ್ಲಿ ಹಸಿರ ಬೆಳಕು ನದಿ ತೊರೆಗಳಲಿ ನೀರ ಸೆಳಕು ಗಿಡಮರಗಳಲಿ ಹೂವ ಚೆಲುವು ಹಕ್ಕಿಗಳ ಗಾನದಲಿ ತುಂಬಿದ ಒಲವು ಬಾಂದಳದಿ ಉದಯಿಸಿದ ಶಶಿಯ ಸೊಬಗು ಕಾಣುವ ಕಣ್ಣಲ್ಲಿ ಮೂಡು...

ನಿನ್ನಾಟ

ನಿನ್ನಾಟ ಮನದಲಿ ನೂರಾರು ಆಸೆಗಳ ತುಂಬಿ ನಿನ್ನಾಗಮನಕೆ ಎದೆತೆರೆದು ಕಾಯುತ್ತಿದ್ದೆ ಆಸೆಯ ಕರಿಮುಗಿಲು ಮನದಲಿ ಕಟ್ಟಿ ಹಸಿರು ಹೂಬಳ್ಳಿ ಚಿಗುರಿಸುವ  ನಿರೀಕ್ಷೆಯಲಿದ್ದೆ ಆಸೆ ನಿರಾಸೆಗಳ ತಾಕಲಾಟದಲ...

ಹನಿಕವನ 2

   ಹನಿಕವನ 2        ಪ್ರಳಯ ನಿನ್ನ ಒಲವಿನ ಹನಿಗಾಗಿ ಬಾಯ್ಬಿಟ್ಟು ಕಾದ ನನಗೆ ನೀ ಕೊಟ್ಟ ಉಡುಗೊರೆ ನನ್ನದೆಲ್ಲವ ಕೊಚ್ಚಿ ಕೊಂಡೊಯ್ದ್ದ ಮಹಾಮಳೆ ನಿನ್ನ ಅಬ್ಬರಕೆ ಬೆಚ್ಚಿ ಬೆರಗು ಅಳಿಸಿಹೋಯ್ತು ನನ್ನೆಲ...

ಗಜಲ್. 22 ಬೇಟೆ

ಗಜಲ್ 22 ಹಸಿದವನು ಮಾಡುವನು ಆಹಾರದ ಬೇಟೆ ಜ್ಞಾನದಾಹಿ ಹುಡುಕುವನು ಜ್ಞಾನದ ಬೇಟೆ ಪುಸ್ತಕಗಳ ಓದಿನಲ್ಲಿ ಮೈ ಮರೆತಿರುವೆ ನಾ ಮನಕೆ ಇನ್ನಷ್ಟು ಬೇಕೆಂಬ ಇಂಗದ ಬೇಟೆ ವಿದ್ಯೆ ಇದ್ದರೆ ಎಲ್ಲೆಲ್ಲೂ ಸನ್ಮಾನ ದ...

6 ಚುಟುಕುಗಳು

      6..ಚುಟುಕುಗಳು      1.ಹಸಿರು. ಉಸಿರು ಹಸಿರು ಇದ್ದರೆ  ತುಂಬುವುದು ಉಸಿರು ಉಳಿಸಬೇಕು ಭೂತಾಯಿ ಬಸಿರು ಕಾಂಕ್ರೀಟ್ ಕಾಡಲೇನಿದೆ ಸೊಬಗು ಹಸಿರು ತುಂಬಿದ ಕಾನನವು ಬೆರಗು 2  ವ್ಯರ್ಥ ಹಸಿದವನ ಎದುರು ಹಳಸ...

ಲೇಖನ ನಾನೇಕೆ ಬರೆಯುತ್ತೇನೆ

ನಾನೇಕೆ ಬರೆಯುತ್ತೇನೆ ನಾನೇಕೆ ಬರೆಯುತ್ತೇನೆ ಈ ಪ್ರಶ್ನೆಗೆ ಉತ್ತರಿಸುವುದು ಸ್ವಲ್ಪ ಕಷ್ಟ . ಏಕೆಂದರೆ ನಾನು ಪೂರ್ಣ ಪ್ರಮಾಣದ ಬರವಣಿಗೆಯನ್ನು ಪ್ರಾರಂಭಿಸಿದ್ದು ಇತ್ತೀಚೆಗೆ, ಅಂದರೆ ನನ್ನ ಕೆಲಸದಿ...

ಭಕ್ತಿಗೀತೆ ಸ್ಪರ್ಧೆಯ ವಿಜೇತರು

*ಎಲ್ಲರಿಗೂ ನಮಸ್ಕಾರ* 🙏🙏🙏🙏🙏🙏🙏🙏🙏 *ಭಕ್ತಿರಸದಲ್ಲಿ ಗೀತೆಗಳ ಬರೆದು ಚಂದಿನಂಗಳದಲಿ ದೇವ ದೇವತೆಯರ ಗುಣಗಾನ ಮಾಡಿದರು ನಮ್ಮ ಕವಿಗಳು* 💐💐💐💐💐💐💐💐💐 *ಇಂದಿನ ಅತ್ಯುತ್ತಮ ಗೀತೆ* 🏆 *ಪಂಕಜಾ ಮುಡಿಪುರವರ ...