Skip to main content

Posts

Showing posts from August, 2020

ಆಮೃತಧಾರೆ

ಅಮೃತಧಾರೆ ಅಂಬರದ ತುಂಬೆಲ್ಲಾ ಕರಿ ಮೋಡಗಳ ದಂಡು ನೀಲಾಗಸದಿ  ಹರಡಿಹುದು ಕಪ್ಪನೆಯ  ಹಿಂಡು llಪll ವಸುಂದರೆಯ ಮೈಯೆಲ್ಲಾ ಕಣ್ಣಾಗಿದೆl ವರುಣನೊಲವಿನ ನಿರೀಕ್ಷೆಯಲಿ ಬೆಂಡಾಗಿದೆl ತನು ಕಾದು ಮೈಯೆಲ್ಲಾ ಕೆಂಪಾಗಿದೆl ಇಳೆಯಿಂದು ಮೈ ಮರೆತು ಇನಿಯನರಸಿದೆ ll ಇನಿಯಳ ಒಲವಿನ ಕರೆಗೆ ಮನಸೋತನೇ?l ಬಂದಂದು ಬಿಗಿದಪ್ಪಿ ಸಂತೈಸಿದನೇ?l ವರುಣನೊಲವಿನ ಧಾರೆ ಹರಿದು ತಂಪಾಗಿದೆ l ಹಸಿರು ಹುಲ್ಲುಗಳು ತಾ ಬಿರಿದು ತಲೆಯೆತ್ತಿದೆ ll ಎಲ್ಲೆಲ್ಲೂ ಹಸಿರ ಸಿರಿ ಹೂ ಹಾಸಿದೆ l ಅಂಬರ ಚುಂಬಿತ ಗಿರಿಗಳ ಸಾಲು ಮೇಲೆದ್ದಿದೆ l ಅಮೃತ ಧಾರೆಯಲಿ  ಮಿಂದು ಮೈಮರೆತಿದೆ l ಜುಳು ಜುಳು ಹರಿಯುವ ನದಿಯಿಂದು ಹುಚ್ಚೆದ್ದು ಕುಣಿದಾಡಿದೆ ll ವರುಣನಾಗಮನದಿಂದ ಸಂತೃಪ್ತಿl ಸಂಭ್ರಮದಿ ಮುಳುಗೆದ್ದು ಮೀಯುತ್ತಿದೆ ಪ್ರಕೃತಿl ಎಲ್ಲೆಲ್ಲೂ ತುಂಬಿರುವ ಪ್ರಕೃತಿ ಸಿರಿl ಅನಂದದಾ  ಅಮಲಿನಲಿ ನಲಿಯುತಿದೆ ll ಪ್ರಕೃತಿಯ ಮಡಿಲಲ್ಲಿ ನಲಿದಾಗ ಸುಕೃತಿ l ಕಳೆಯುತ್ತಿದೆ  ಮೈಮನದ  ವಿಕೃತಿl ಜೀವನೋತ್ಸಾಹವ ಹೆಚ್ಚಿಸುತl ತುಂಬುತಿದೆ ಮೈಮನಕೆ ಉಲ್ಲಾಸ ಹಾಸ ll ಪಂಕಜಾ.ಕೆ.

ನವಪರ್ವದಲ್ಲಿ ಅತ್ಯುತ್ತಮ ಮಕ್ಕಳಗೀತೆ ಪ್ರವಾಸ

ನವಪರ್ವ ಸ್ಪರ್ಧೆಗಾಗಿ ಮಕ್ಕಳ ಗೀತೆ .ಪ್ರವಾಸ ಪ್ರವಾಸ ಹೋಗಲು ಮಕ್ಕಳು ನಾವು ಗುರುಗಳ ಜತೆಯಲಿ ಹೊರಟಿಹೆವು ಅಮ್ಮನು ಕೊಟ್ಟ ಕುರುಕಲುತಿಂಡಿಯ ಗೆಳೆಯರ ಜತೆಯಲಿ ಮೆಲ್ಲುತಲಿ ಕಿಟಕಿಯ ಬದಿಯೇ ಬಸ್ಸಲಿ ಕುಳಿತು ಪ್ರಕೃತಿಯ ಚೆಲುವನು ಸವಿಯುತಲಿ   ಓಡುವ ಬಯಲು ಹರಿಯುವ ನದಿಯು ನೋಡುತ ಮೈ ಮನ ಮರೆಯುತಲಿ ಬಾದಾಮಿಯ ಪಟ್ಟದಕಲ್ಲು ಬೇಲೂರಿನ ಶಿಲಾ ಬಾಲಿಕೆಯು ಬೆರಗನು ತುಂಬಿತು ನಮ್ಮಯ ಮನದಲ್ಲಿ   ಬಿಜಾಪುರದ ಗೋಲಗುಮ್ಮಟ ಹಳೆ ಬೀಡಿನ  ಅದ್ಭುತಕಲೆಯು ಮೈಯನು ಮರೆಸಿತು ಮನವನು ಸೆಳೆಯುತಲಿ ನಮ್ಮಯ ಕಲಿಕೆಗೆ  ಬಲು ಉಪಯೋಗ ಪ್ರವಾಸದ  ನಮ್ಮ ಈ ಅನುಭವವು ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಖಿದ್ಮಾ ಫೌಂಡೇಷನ್ ಸ್ಪರ್ಧೆಯಲ್ಲಿ ಉತ್ತಮ ವೆಂದು ಆಯ್ಕೆಯಾದ ಕವನ ಕೊಟ್ಟ ಪದ ಕೈಗನ್ನಡಿ.

ಖಿದ್ಮಾ ಪೌಂಡೇಶನ್ ಸ್ಪರ್ಧೆಗಾಗಿ ಭಾವನೆಗಳ ಪ್ರತಿಫಲನ ಮನದಲ್ಲಿ ತುಂಬಿರುವ  ಹಿಡಿದಿಟ್ಟ ಭಾವನೆಗಳು ಮುಖದಲ್ಲಿ ಪ್ರತಿಫಲಿಸಿದೆ ಬಟ್ಟಬಯಲಾಗಿಸುತಿದೆ ಮನುಜರ ಮನವನ್ನು ತೆರೆದಿಟ್ಟ ಪುಸ್ತಕದ ತೆರದಂತೆಯೇ ಮನಸಿನಾ ಕೈಗನ್ನಡಿ ಮುಖವೆಂಬ ಮಾತನ್ನು ವ್ಯಕ್ತಪಡಿಸುತ್ತಿದೆ ಮುಖವೆಂಬ ಕೈಗನ್ನಡಿ ಮುಚ್ಚಿಡಬೇಕೆಂದರೂ ಮುಚ್ಚಿಡಲಾಗದಂತೆ ಎಲ್ಲವನು ಹೊರದೂಡಿ ಬೆತ್ತಲಾಗಿಸಿದೆ ಹಿಂದೊಂದು  ಮುಂದೊಂದು  ರೀತಿಯನು ತೋರದೆಯೇ ಪ್ರಾಮಾಣಿಕನಾಗಿದ್ದರೆ ಯಶ ಕಟ್ಟಿಟ್ಟ ಬುತ್ತಿ ಮನಸಿನಾ ಸಂತೋಷ  ಮುಖದಲ್ಲಿ ಪ್ರತಿಫಲಿಸಿ ಬಾಳನ್ನು ಬೆಳಗುವುದು ಇದು ಖಂಡಿತ ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ನಾಟ್ಯ ವಿಶಾರದ ಗಣಪ ಖಿದ್ಮಾ

ಖಿದ್ಮಾ ಪೌಂಡೇಶನ್ ಕರ್ನಾಟಕ   ಚಿತ್ರಕ್ಕೊಂದು ಕವನ     ನಾಟ್ಯ ವಿಶಾರದ ಗಣಪ ಗೌರೀ ನಂದನ ಗಜಮುಖವದನ ಬಾದ್ರಪದ ಶುಕ್ಲದ ಚೌತಿಯದಿನದಲಿ ಗೆಜ್ಜೆಯ ಕಾಲ್ಗಳ ನಾದವ ಬೀರುತ ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ನೀ ಬಾರೋ ವಿಘ್ನಗಳ ನಿವಾರಕ  ವಿಘ್ನೇಶ್ವರ ಗರಿಕೆಯ ಅರ್ಪಿಸಿ ಪೂಜಿಪೆ ನಿನ್ನ ಬೇಡಿದ ವರಗಳ ಕೊಡುತಲಿ ನಾಟ್ಯವನಾಡುತ ಬೇಗನೆ ನೀ ಬಾರೋ  ನಾಟ್ಯಲೋಲನೆ ನಟರಾಜನೆ ಕೈಯಲಿ ಕೊಳಲನು ಹಿಡಿದು ತಕಥೈ ತಕಥೈ ಕುಣಿಯುತಲಿ ದೊಡ್ಡ ಹೊಟ್ಟೆಯ ಕುಣಿಸುತ ನೀ ಬಾರೋ ಮೂಷಿಕ ವಾಹನ ಮೂಜಗ ಪ್ರಿಯನೇ ಅಜ್ಞಾನವ ಕಳೆದು ಸುಜ್ಞಾನವ ನೀಡು  ಬಗೆ ಬಗೆ ಭಕ್ಸ್ಯವ ಅರ್ಪಿಸಿ ಭಜಿಸುವೆ ಅನುದಿನ ಕರುಣಿಸು ನಮಗೆ ನೆಮ್ಮದಿಯ  ಪಾರ್ವತಿ ಸುತನೆ ಮೋದಕ ಪ್ರಿಯನೇ   ವಿದ್ಯಾದಾಯಕ ಲಂಬೋದರನೆ  ನಿತ್ಯದ ಬದುಕಿನ ವಿಘ್ನವ ಕಳೆಯುತ  ಕೊಡು ನಮಗೆ ನೀನು ಅಯೋರಾರೋಗ್ಯಗಳ   ಪಂಕಜಾ.ಕಬ್ಬಿನಹಿತ್ಲು.ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಕಾವ್ಯಕೂಟ ದಲ್ಲಿ ಉತ್ತಮವೆಂದು ಆಯ್ಕೆಯಾದ ನನ್ನ ಭಾವಗೀತೆ ನೆನಪಿನ ದೋಣಿ

ಕಾವ್ಯಾ ಕೂಟ ಸ್ಪರ್ಧೆಗಾಗಿ ನೆನಪಿನ ದೋಣಿ ಮೌನದಲಿ ಮಾತೊಂದು  ಮುತ್ತಾಗಿ ಬಂದಂತೆ ಸವಿಯಾದ ನೆನಪಲ್ಲಿ  ನಾ  ಇಂದು ತೇಲಿದೆ ನಾನ್ನಾಸೆ ನೀನಾದೆ  ನಿನ್ನಾಸೆ ನಾನು ಒಲವಿಂದು ಹೂವಾಗಿ ಪರಿಮಳ ವ ಬೀರಿದೆ ಬಾಲ್ಯದ ಕನಸುಗಳು ನನಸಾದ ಹೊತ್ತಲ್ಲಿ ಮೈಮನಕೆ ಮುದ ತಂದು ಸೆಳೆದೊಯ್ದೆ ನೀನು ಹಿತವಾದ ಭಾವದಲಿ ಮನವನು ಸೆಳೆಯುತ ಮೈಮರೆತ ಆ ಕ್ಷಣವು ಮರೆಯಲೇಗೆ ಚೆಲುವೇ ಬೆಳದಿಂಗಳ ರಾತ್ರಿಯಲಿ ತಾರೆಗಳ ಎಣಿಸುತ್ತ ನಿನ್ನ ಮಡಿಲಲ್ಲಿ ಮಲಗಿ ಮಗುವಾದೆ ನಾನು ನನ್ನೆದೆಯ ಭಾವನೆಗೆ ನಿನ್ನೊಲವ ಭಾವ ಕೂಡಿ ಸಪ್ತಸ್ವರಗಳ ಮೇಳೈಸಿ. ಮನ  ತಣಿಸಿತಲ್ಲ ಪಂಕಜಾ.ಕೆ. ಮುಡಿಪು

ದಾನ ಮಾಡಿ ಅಮರರಾಗಿ

ದೇಹಾಂಗ ದಾನ ದಿನಾಚರಣೆಯ ಪ್ರಯುಕ್ತ ಕವನ ರಚನೆ ಕಾರ್ಯಕ್ರಮಕ್ಕಾಗಿ ದಾನ ಮಾಡಿ ಅಮರರಾಗಿ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನದ ಅನುಬಂಧ ರಕ್ತದಾನ ಒಂದು ಮಹಾದಾನ ಅದುಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಬಿದ್ದು ಹೋಗುವ ನಶ್ವರ ಶರೀರ ಅಂಗಾಗ ದಾನದಿಂದ ಅದು ಅಮರ ಕಣ್ಣಿಲ್ಲದವರಿಗೆ ನಮ್ಮ ಕಣ್ಣೇ ಬೆಳಕು ಅವರ ಕಣ್ಣಲಿ ಬೆಳಗುತ್ತಿದೆ  ಜ್ಯೋತಿ ಉಸಿರು ಹೋಗುವ ಮುನ್ನ ಮಾಡಿಬಿಡು  ರಕ್ತದಾನ ಅಂಗಾಗ ದಾನ  ಸ್ವ ಇಚ್ಛೆಯಿಂದ ಕೊಟ್ಟ ಈ  ದಾನ ಕೊಟ್ಟೀತು ಮನಕೆ  ಸಮಾಧಾನ ಉಸಿರು ನಿಂತು ಹೋದರೂ ಅಂಗಾಂಗಗಳಾಗದಿರಲಿ ವ್ಯರ್ಥ ಅಗ್ನಿ ಅದನು ಸುಡುವ ಮುನ್ನ  ಬೆಳಗಲಿ ಅಂಧನ ಕಣ್ಣಿನಲಿ ಜ್ಯೋತಿ ಬಡಿಯಲಿ ನಿನ್ನ ಹೃದಯ ನಿತ್ಯ  ಸಾವಿನಾಚೆಯಲೂ ಅಮರವಾಗಲಿ ದೇಹ ಸತ್ತು ಮಣ್ಣಾಗುವ ಮೊದಲು ಉಪಯೋಗವಾಗಲಿ...

ಬಾರಯ್ಯ ಬಾರೋ ಕಾವ್ಯ ಕೂಟ

[11/08, 11:22 PM] pankajarambhat: ಬಾರಯ್ಯ ಬಾರೋ    ಯದುಕುಲ ತಿಲಕ  ಯಶೋದೆ ಬಾಲಕ  ಗೋವರ್ಧನೋದ್ದಾರಿ  ಗೋಪಿಲೋಲಾ ಬಾರಯ್ಯ ಬಾರೋ   ಪೂತನಿಯ ಸೆಳೆದಟ್ಟಿ ಬೆಣ್ಣೆಯನು ಕದ್ದು ತಾಯಿಗೆ ಬಾಯಲ್ಲಿ  ಜಗವನ್ನೇ ತೋರಿದ ಲೀಲಾಮಯ ಬಾರೋ ಯಮುನೆಯ ತೀರದಲಿ  ರಾಧೇಯೊಡನಾಡುತ್ತ ಗೋಪಿಯರ ಮನವನ್ನು ಸೆಳೆದ ಚೆಲುವಾಂತ ಚೆನ್ನಿಗನೆ ಬಾರೋ ವೈಕುಂಠ ವಾಸಿಯೇ ಪದುಮನಾಭನೆ ಭಕ್ತಿಯಲಿ ಬೇಡುವೆನು ಕೊಡು ವರವ ಬಾರಯ್ಯ ಬಾರೋ ರಾಧಾ ಮಾದವ ಮುರಳೀಲೋಲ ಬಗೆ ಬಗೆಹೂಗಳ ಅರ್ಪಿಸಿ ಪೂಜೆಪೆ ನಿನ್ನ ಬಾರಯ್ಯ ಬಾರೋ ಪಂಕಜಾ ಕೆ ಮುಡಿಪು [11/08, 11:22 PM] pankajarambhat: ಸರ್ವರಿಗೂ ಮತ್ತೊಮ್ಮೆ ಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು ಅಷ್ಟಮಿಯ ಶ್ರೇಷ್ಠತೆಯ ಬಿಂಬಿಸಿ ಬರೆದ ಉತ್ಕೃಷ್ಟ ಬರಹಗಳ ತೂಗುವುದು ಕೃಷ್ಣನನು ತೂಗಿದಷ್ಟೇ ಭಾರ ಬೆಣ್ಣೆಯ ಚಪ್ಪರಿಸಿದಷ್ಟೇ ಸೊಗಸು.  *ಫಲಿತಾಂಶ ಪಟ್ಟಿ*  ದಿನಾಂಕ *11/08/20*  ವಾರ *ಮಂಗಳವಾರ*  ಇಂದಿನ ಅಡ್ಮಿನ್: *ಮಲ್ಲೇಶ ಜಿ*  ಪ್ರಕಾರ *ಭಾವಗೀತೆ*  ವಿಷಯ *ಕೃಷ್ಣ*  🏕️🏕️🏕️🏕️🏕️🏕️🏕️  🏆 *ಅತ್ಯುತ್ತಮ* 🏆 ಶಕುಂತಲಾ ಮೇಡಂ ಸುರೇಶ್ ನೆಗಳಗುಳಿ ಸರ್ ಭಾಗ್ಯ ನಂಜುಂಡಸ್ವಾಮಿ 🌇🌇🌇🌇🌇🌇🌇  🎖️ *ಉತ್ತಮ* 🎖️ ಲಕ್ಷ್ಮಿ ವಿ ಭಟ್ ಬಸನಗೌಡ ಎಂ ಪಾಟೀಲ ಪಂಕಜ ಮುಡಿಪು ಲಲಿತ ಮ ಅರಳಿ 🎇🎇🎇🎇🎇🎇🎇  🥇 *ಪ್ರಥಮ...

ಕೂಡಿ ಬಾಳಬೇಕು ಕರುನಾಡ ಹಣತೆ

ಕರುನಾಡ ಹಣತೆ  ಬೆಂಗಳೂರು ಬಳಗದ  ಕವನ  ಸ್ಪರ್ಧೆಗಾಗಿ ಕೂಡಿ ಬಾಳಬೇಕು ಕೂಡಿ ಬಾಳುವುದೇ  ಇದರ ಸೂತ್ರ  ಪ್ರೀತಿ ಒಗ್ಗಟ್ಟುಗಳೇ ಮೂಲಮಂತ್ರ ಅವಿಭಕ್ತ ಕುಟುಂಬದ ಆಶಯವ್ಯಕ್ತ ಎಲ್ಲರೂ ಒಂದಾಗಿ ಬಾಳುವುದೇ ಸೂಕ್ತ ಉತ್ತಮ ಸಂಸ್ಕೃತಿರೂಪಿಸುವ ಕಾರ್ಯಾಗಾರ ಅವಿಭಕ್ತ ಕುಟುಂಬವೆಂಬ ಮಾಯಾಗಾರ ಅದ್ಬುತ ತುಂಬಿದ ಜೀವನದ ಸಾರ ಆಗಲಾರದೆಂದಿಗೂ ಜೀವನ ಬಾರ  ಕೂಡು ಕುಟುಂಬವು ಭದ್ರತೆಯ ನೆಲೆವೀಡು  ಕಷ್ಟ ಸುಖದಲಿ ಹೆಗಲಾಗುವ ಭಾವಬೀಡು   ಅಜ್ಜಯಜ್ಜಿಯರ ಮಾರ್ಗದರ್ಶನದಲ್ಲಿ ಮಗು ನಿರಾಳ ಪ್ರೀತಿ ಮಮತೆಯ ರಕ್ಷಣೆಯಲ್ಲಿ ಬಾಳಾಗದು ಕರಾಳ ಶಿಥಿಲಗೊಳ್ಳುತ್ತಿದೆ  ಇಂದೀಗ ಈ  ಅನು ಬಂಧ ಸ್ವತಂತ್ರ ಮನೋಭಾವ ದ ಜನರೇ ಇದಕ್ಕೆಕಾರಣ ನಾನು ನನ್ನದೆನ್ನುವ ಸ್ವಾರ್ಥ ತುಂಬಿದ ಮನವು ಹೊಂದಾಣಿಕೆಯ ಕೊರತೆಯಲಿ ನರಳುತಿರುವವು ಪಾಶ್ಚಿಮಾತ್ಯಸಂಸ್ಕೃತಿಯ  ಕೆಟ್ಟ ಪರಿಣಾಮವಿದು ವಿಭಕ್ತ ಕುಟುಂಬಗಳು ಹೆಚ್ಚಳವಾಗುತ್ತಿರುವುದು ಒಬ್ಬಂಟಿ ಯಾಗಿರುತ ಬಾಳಲೇನಿದೆ  ಸೊಗಸು ಮೌನ ಸಾಮ್ರಾಜ್ಯದಲಿ ತುಂಬಿದೆ ಇರುಸು ಮುರುಸು ಹಬ್ಬ ಹರಿದಿನಗಳಲ್ಲೂ ಮನೆ ಭಣ ಭಣ ತೀರಿಸಲಾದೀತೆ ಹೆತ್ತ ತಂದೆ ತಾಯಿಯ ಋಣ ಪಂಕಜಾ.ಕೆ.ಮುಡಿಪು ಹೆಸರು...ಪಂಕಜಾ.ಕೆ.ಮುಡಿಪು   ವಿಳಾಸ...ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ನ್ಯಾನೊ ಕಥೆ ಗುರು ಮತ್ತು ಗುರಿ ಖಿದ್ಮಾ 12..8.2020

ಚಿತ್ರಕ್ಕೊಂದು  ನ್ಯಾನೊ ಕಥೆ   ಗುರು ಮತ್ತುಗುರಿ   ತುಂಬಾ ದಿನದಿಂದ ಶಿಕ್ಷಕರಿಲ್ಲದೆ ಇದ್ದ ಆ ಹಳ್ಳಿಯ ಶಾಲೆಗೆ ಬಂದ ರಮೇಶ, ತನ್ನ ಸ್ವಂತ ಖರ್ಚಿನಲ್ಲಿ ಗೋಡೆಯಲ್ಲಿ ಸ್ವಾತಂತ್ರ್ಯಕ್ಕಾಗಿ ದುಡಿದ ಮಹಾತ್ಮರ ಫೋಟೋಗಳನ್ನು ತೂಗು ಹಾಕಿ, ನೆಲದಲ್ಲಿ  ಶಿಸ್ತಿನಿಂದ ಕುಳಿತ ಮಕ್ಕಳಿಗೆ  ಕಪ್ಪು ಹಲಗೆಯ ಮೇಲೆ ಗುರು ಮತ್ತು ಗುರಿ  ಎಂದು ಬರೆದುದನ್ನು ತೋರಿಸುತ್ತಾ, ಗುರು ಮತ್ತು ಗುರಿಯ ಬಗ್ಗೆ  ಹೇಳುತ್ತಾ ,ಮಕ್ಕಳನ್ನು ತಮ್ಮ  ಗುರಿಯ ಕಡೆ ಮನಸು  ನೆಡುವಂತೆ  ಉತ್ತಮವಾಗಿ ಪಾಠಮಾಡಿ ,ಹಳ್ಳಿಯ ಆ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಿ ಉತ್ತಮ ಅಧ್ಯಾಪಕನೆಂಬ ಬಿರುದು ಪಡೆದ ಪಂಕಜಾ. ಕಬ್ಬಿನಹಿತ್ಲು ಮುಡಿಪು

ಚುಟುಕು ಕಾವ್ಯಕೂಟ ದಲ್ಲಿ ಮೆಚ್ಚಿಗೆ

ಕೊರೊನಾ  (ಚುಟುಕು) ಕೊರೊನಾ  ಪೀಡಿಸುತ್ತಿದೆ ದಿನದಿಂದ ದಿನಕ್ಕೆ ಹಬ್ಬುತ್ತಿದೆ ಮನೆಯಲ್ಲೇ ಇರಬೇಕಾಗಿದೆ ದೇವರೇ ನಮ್ಮನ್ನು ಕಾಯಬೇಕಿದೆ ಪಂಕಜಾ.ಕೆ ಮುಡಿಪು

ಮೋಹನ ಹನಿ ಹನಿ

ಹನಿ ಹನಿ ಇಬ್ಬನಿ ಸ್ಪರ್ಧೆಗಾಗಿ ಮೋಹನ ಚೆಲುವ ಕೃಷ್ಣನ  ತುಂಟ ನಗುವಿಗೆ ರಾಧೆ ಮನವದು ಸೋತಿದೆ ಮುರಳಿ ಗಾನದ ಚೆಲುವ ನಾದವು ಮೋಹನಾಂಗಿಯ ಕೆಣಕಿದೆ ಮನದಿ ಮೂಡುವ  ಭಾವತರಂಗವು  ನಿತ್ಯ ಮನವನು ಕಾಡಿದೆ   ಮುರಳಿ ಲೋಲನ ಮೋಹಪಾಶವು ಕನಸು ಮನಸನು ಸೆಳೆದಿದೆ ಯಮುನಾ ನದಿಯ  ದಡದ ತುಂಬಾ ಮುರಳಿಗಾನವೇ ತುಂಬಿದೆ ಎಲ್ಲಿ ನೋಡಿದರಲ್ಲಿ ಕಾಣುವುದು ಚೆಲುವ ಕೃಷ್ಣ ರೂಪವು ಪಂಕಜಾ.ಕೆ ಮುಡಿಪು

ನವಪರ್ವ ಲೇಖನ ತೃತೀಯ ನಮ್ಮ ಮನೆ ಕೈತೋಟ

ನವಪರ್ವ ಸಾಹಿತ್ಯ ಸಂಕ್ರಾಂತಿ ಸ್ಪರ್ಧೆಗಾಗಿ ನಮ್ಮ ಮನೆಯ ಕೈತೋಟ (ಲೇಖನ)       ಹಸಿರೇ. ...ಉಸಿರು ಮುಂಗಾರು ಮಳೆ ಪ್ರಾರಂಭವಾಯಿತೆಂದರೆ ಮನೆಯ ಸುತ್ತು ಮುತ್ತು ಗಿಡಗಳನ್ನು ನೆಟ್ಟು ಬೆಳೆಸುವುದು ನನ್ನ ಹವ್ಯಾಸಗಳಲ್ಲಿ ಒಂದು. ಕೈತೋಟ ಮಾಡುವುದು ಎಂದರೆ ನನಗೆ ಎಲ್ಲಿಲ್ಲದ ಆಸಕ್ತಿ,ಅದಕ್ಕಾಗಿ  ನರ್ಸರಿ ಮತ್ತು ಸ್ನೇಹಿತರ ಮನೆಗಳಿಂದ ಗಿಡಗಳನ್ನು ತಂದು  ನೆಟ್ಟು ಬೆಳೆಸುತ್ತೇನೆ. ಕೈತೋಟದಲ್ಲಿ ಕೆಲಸಮಾಡುತ್ತಿದ್ದರೆ ಸಮಯ ಸರಿದುದೇ ತಿಳಿಯುವುದಿಲ್ಲ. ಹಿಂದಿನ ವರ್ಷ ಜತನದಿಂದ ಕಾದಿಟ್ಟ ತರಕಾರಿ ಬೀಜಗಳನ್ನು ಹಾಕಿ ಅದು ಇರುವೆಗಳ ಪಾಲಾಗದಂತೆ ಜಾಗ್ರತೆವಹಿಸಿ ಉತ್ತಮವಾಗಿ ಬೆಳೆದು ಫಲ ಸಿಗುವಂತೆ ಮಾಡುವುದು ಸುಲಭದ ಕೆಲಸವಲ್ಲ.                ನಮ್ಮ ಮನೆಯ ಹಿತ್ತಲಿನಲ್ಲಿ  ಹಲವಾರು ಹೂಗಿಡಗಳನ್ನು , ಔಷಧೀಯ ಗಿಡಗಳನ್ನು, ತರಕಾರಿ ಹಣ್ಣಿನ ಗಿಡಗಳನ್ನೂ ನಾನು ಬೆಳೆಸಿರುತ್ತೇನೆ. ಇದರಿಂದ ಮನೆಗೆ ಬೇಕಾದ ತರಕಾರಿಯನ್ನು ಮಾರ್ಕೆಟ್ ನಿಂದ ತರುವ ಶ್ರಮಮತ್ತು ಹಣದ ಉಳಿತಾಯವಾಗುತ್ತದೆ,ಅಲ್ಲದೆ ಸಾವಯವ ತರಕಾರಿ  ಸಿಗುತ್ತದೆ .ಮನೆಯಲ್ಲೇ ಬೆಳೆಸಿದ ಹಸಿರು ಸೊಪ್ಪು ತರಕಾರಿಗಳು ರಾಸಾಯನಿಕ ಮುಕ್ತವಾಗಿದ್ದು ಆರೋಗ್ಯವರ್ಧಕವೂ ಆಗಿರುತ್ತದೆ                      ಹೂವು   ತರಕಾರಿಗಳನ್ನು...

ನನ್ನೊಲವೆ ಕಾವ್ಯಮೈತ್ರಿ

ಕಾವ್ಯಮೈತ್ರಿ ಸ್ಪರ್ಧೆಗಾಗಿ   ನನ್ನೊಲವೆ ಮುಂಜಾನೆ ಕನಸಿನಲಿ  ನೀನಂದು ಬಂದೆ ತುಂಟತನವ ತೋರುತ  ನಗು ನಗುತ ನಿಂದೆ ಎದೆಯಲ್ಲಿ ಕಂಪನವು ಮನದಲ್ಲಿ ಕನಸು ನಾಚಿಕೆಯ ತೆರೆಯಲ್ಲಿ ಮೈ ಮನಕೆ ಬಿಸುಪು ಹೂ ಮನದ ಹೂವುಗಳು ಬಿರಿದರಳಿತು ಪ್ರೀತಿಯ ಅಲೆಯಲ್ಲಿ ಮನ ತೇಲಾಡಿತು ನಾನಾದೆ  ಅಂದೆ ನಿನಗಾಗಿ ಹಂಬಲಿಸಿ ಊರಿಡೀ ಅಲೆದಾಡೋ ಅಲೆಮಾರಿಯೂ. ಜತೆಯಾಗಿ ಸಾಗೋಣ  ಬಾ ಬೇಗ ನಲ್ಲೆ ಬೇಸರವ ಕಳೆಯುತ್ತ ಕುಣಿಯೋಣ ಇಲ್ಲೆ ಮಧು ಮಾಸ ಬಂದಿಹುದು ನಮಗಾಗಿಯೇ ತನಿರಸವ ಸವಿಯುತ್ತಾ ನಲಿಯೋಣವೇ ಚಂದಿರನ ಬೆಳಕಿನಲಿ ಮೈ ಮನಕೆ ತಂಪು ನೀ ಜತೆಯಲಿದ್ದರೆ  ಕೋಗಿಲೆಯ ಇಂಪು ನೋಡಿಲ್ಲಿ  ಚಂದಿರನು ಮರೆಯಾದನು ನಮ್ಮಿಬ್ಬರನು ಕಂಡು  ಮರೆಯಾದನೆ ನಾಚಿಕೆಯ  ಕಿತ್ತೊಗೆದು ನೀನೊಮ್ಮೆ ಬಾ  ಸ್ವರ್ಗವನೆ ಧರೆಯಲ್ಲಿ ತರುತಿರುವೆ ಬಾ ಜನುಮ ಜನುಮದಾ ಅನುಬಂಧ ವೇ ಅನುದಿನವೂ ನಿನ್ನೊಡನೆ ಜತೆಯಾಗುವೆ ಪಂಕಜಾ.ಕೆ. ಮುಡಿಪು

ಖಿದ್ಮಾ ಪ್ರಕೃತಿ ಸೊಭಾಗೂ

ಖಿದ್ಮಾ ಫೌಂಡೇಷನ್ ಕರ್ನಾಟಕ  ಚಿತ್ರಕ್ಕೊಂದು ಕವನ ಸ್ಪರ್ಧೆಗಾಗಿ   ಪ್ರಕೃತಿ ಸೊಬಗು ಪಡುಕಡಲಲಿ ಮುಳುಗುವ ನೇಸರ ಬಾನಲಿ ಬಣ್ಣವ  ಕಲಸಿದನು ಬಾಂದಳವೆಲ್ಲಾ  ಓಕುಳಿಯಾಡುತ ನಿಶೆಯೊಡನಾಡಲು  ತೆರಳಿದನು ಕಡಲಲಿ ತನ್ನಯ ಬಿಂಬವ ತುಂಬಿ ರಸಿಕರ ಮನವನು ಸೆಳೆಯುವನು ಎಲ್ಲೆಡೆ ಹಬ್ಬಿದ ಚೆಲು ಬಣ್ಣದ ಬೆರಗು ಕಣ್ಮನ ತುಂಬಿತು ಪ್ರಕೃತಿಯ ಸೊಬಗು ರವಿ ಕಡಲೆಡೆಯಲಿ ಮುಳುಗುತಲೇ ಚಂದಿರ ಭರದಲಿ ಬಾನಲಿ  ಬರುತಿಹನು  ಹಾಲಿನ ಹೊಳೆಯನು ಧರೆಯಲಿ ಸುರಿಸಿ ಕಡಲಿನ ಅಲೆಯಲಿ ಬಿಂಕದಿ ತೇಲುವನು ಚಂದಿರ ಬಿಂಬವ ಕಾಣುತ ನೈದಿಲೆ ನಾಚುತ  ತನ್ನಯ ದಳಗಳ ಅರಳಿಸಿತು ಮೋಡದ ಎಡೆಯಲಿ ನುಸುಳುತ ಶಶಿಯು ತಾರೆಗಳನೊಡನಾಡುತ ನಲಿಯುವನು ಪಂಕಜಾ.ಕೆ. ಮುಡಿಪು  07.08.2020

ಅಣ್ಣ ತಂಗಿಯರ ಬಂಧ ಕುರುನಾಡು ಹಣತೆ ಯಲ್ಲಿ ತೃತೀಯ

 ಬಾನುವಾರ ಕರುನಾಡ ಹಣತೆ ಕವನ ಸ್ಪರ್ಧೆಗೆ   ಅಣ್ಣ ತಂಗಿಯರ ಬಂಧ ರಾಖಿಯ ಹಬ್ಬವು ಬಂದಿಹುದು ಸಹೋದರ ಪ್ರೇಮವ ಸಾರುವುದು ತಂಗಿಯು ಕಟ್ಟುವಳು ರಾಖಿಯನು ಅಣ್ಣನು ಕೊಡುವನು ರಕ್ಷೆಯನು ಸಹೋದರ ಸಹೋದರಿಯರ ಬಂಧ ಸಾರುತಿದೆ ರಕ್ಷಾಬಂಧನದ ಈ ಬಂಧ ಅಣ್ಣ ತಂಗಿಯರ ಈ ಪ್ರೀತಿಯ ಬಂಧ ಜನುಮ ಜನುಮದಾ ಅನುಬಂಧ ಹಣೆಗೆ ಹಚ್ಚುತ ತಿಲಕವನು ಕೈಗಳಿಗೆ ಕಟ್ಟುವಳು ರಾಖಿಯನು ಆರತಿ ಮಾಡಿ ಸಿಹಿಯನು ತಿನಿಸಿ ತಂಗಿಯು ಬೇಡುವಳು ಆಶೀರ್ವಾದವನು ಶ್ರೀಕೃಷ್ಟನ ಕರಗಳ ಗಾಯವ ಕಂಡು  ತನ್ನ ಯ ಸೀರೆಯ ಅಂಚನು ಹರಿದು ಕಟ್ಟಿದಳಂದು  ದ್ರುಪದನ ಕುವರಿ ಪಡೆಯುತ ಶ್ರೀ ಕೃಷ್ಣ ನ ರಕ್ಷೆಯನು ನೂಲಿನ ಎಳೆಯಲಿ ಸಹೋದರ ಪ್ರೇಮ ತುಂಬಿದೆ  ಸಹೋದರಿಯ ರಕ್ಷಣೆಯ ನೇಮ ಸಹೋದರಿಯ ಕೈಯಿಂದ ಕಟ್ಟುವ ರಾಖಿ ಸಹೋದರನ ಆಯುರಾರೋಗ್ಯಕೆ ಸಾಕ್ಷಿ ರಕ್ಷಾ ಬಂಧನದ ಶುಭಘಳಿಗೆ ಭರವಸೆ ಬೆಸೆಯುವ ಈ ಘಳಿಗೆ ನಾಡಿನೆಲ್ಲೆಡೆ ತುಂಬಿದೆ  ಸಂಭ್ರಮವು ಸಾರಿದೆ ಅಣ್ಣ ತಂಗಿಯರ  ಬಂಧವನು ಪಂಕಜಾ.ಕೆ.ಮುಡಿಪು ಹೆಸರು...ಪಂಕಜಾ.ಕೆ.ಮುಡಿಪು ವಿಳಾಸ..ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ ಶ್ರೀ ಗಣೇಶ ಕೃಪಾ .ಮುಡಿಪು ಅಂಚೆ ..ಕುರ್ನಾಡು ..ದ.ಕ.574153 ಮೊಬೈಲ್ ನಂಬರ್ 9964659620 [08/08, 6:55 AM] ಎಸ್ ರಾಜು ಸೋಲೇನ ಹಳ್ಳಿ ಕರುನಾಡ ಹಣತೆ: *ಫಲಿತಾಂಶ ಪ್ರಕಟಣೆ*           ---------------------------- *"ಚಿತ್ರದುರ್ಗ ಜಿಲ್ಲೆಯ ...

ಹನಿ ಹನಿ ಇಬ್ಬನಿ ಸಮಾಧಾನಕರ ವರ್ಷಧಾರೆ ಭಾವಗೀತೆ

[08/08, 2:52 PM] pankajarambhat: ಹನಿ ಹನಿ ಇಬ್ಬನಿ ಸ್ಪರ್ಧೆಗಾಗಿ   ವರ್ಷಧಾರೆ ಬಾನಿನಲಿ ಕಟ್ಟಿರುವ ಕರಿಮೋಡಗಳ ದಂಡು ಹೂಮಳೆಯ ಸುರಿಸುತ್ತ ತಂಪೆರೆಯಿತು ಒಡಲಲ್ಲಿ ಹುದುಗಿದ್ದ ಬೀಜಗಳು ತಲೆಯೆತ್ತಿ ಭೂತಾಯಿ ಒಡಲು ಬಿರಿದರಳಿತು ನವಮಾಸ ತುಂಬಿರುವ ಹೆಣ್ಣಿನಂದದಿ ಇಳೆ ಹಸಿರುಡುಗೆಯಲಿ ನಲಿದಾಡಿತು ಕಣ್ಣು ಮನತುಂಬುವ ಭೂರಮೆಯ  ಚೆಲುವಿಗೆ ಕವಿಮನದಲೊಂದು ರಾಗ  ಗುಣುಗುಣಿಸಿತು ಇನಿಯಳ ಜತೆಯಲ್ಲಿ ನವಿಲೊಂದು ಕುಣಿದಾಡಿ ಕಣ್ಮನಕೆ ಹಬ್ಬವನು  ತಂದೊಡ್ಡಿದು ಭೋರೆಂದು ಸುರಿಯುವ ಜಡಿಮಳೆಯ ಜತೆಯಲ್ಲಿ ಕೋಲ್ಮಿಂಚುಗಳು ಮೂಡಿ ಮನ ಬೆರಗಾಯಿತು ಪಂಕಜಾ.ಕೆ. ಮುಡಿಪು [08/08, 9:05 PM] ವಾಣಿ ಭಂಡಾರಿ ಹನಿ ಹನಿ ಇಬ್ಬನಿ ಬಳಗ: 🎪🎪🎪🎪🎪🎪🎪🎪🎪🎪🎪 *ಹನಿಹನಿಇಬ್ಬನಿ/ ಚಿಂತಕರ ಚಾವಡಿ* ❤️☔❤️☔❤️☔❤️☔❤️☔❤️ *ಇಂದಿನ ಫಲಿತಾಂಶ ಪಟ್ಟಿ* 🤓🥳🤓🥳🤓🥳🤓🥳🤓🥳🤓 *ವಾರ:-ಶನಿವಾರ* *ದಿನಾಂಕ:-೦೮-೦೮-೨೦೨೦* *ಪ್ರಕಾರ:-ಭಾವಗೀತೆ* *ಅಡ್ಮಿನ್:-ವಾಣಿ ಭಂಡಾರಿ*  🌳🌈🌳🌈🌳🌈🌳🌈🌳🌈🌳 *ಇಂದು ಹೂಮಳೆ ಹರಿಸಿದ ರಭಸಕ್ಕೆ ಇಬ್ಬನಿಯಲ್ಲಿ ಭಾವತರಂಗ ಮೀಟಿದಂತೆ ಆಗಿದೆ.ಹೂಮಳೆಯಲ್ಲಿ ನವಿರಾಗಿ ನೆಂದು,ಮಿಂದು, ಮೈದುಂಬಿ, ಕುಣಿದು, ಕುಪ್ಪಳಿಸಿ, ಸಂತಸದಲೆಯಲ್ಲಿ ಸುಮನಸ್ಸಿನಿಂದ ಬರೆದು ಭಾಗವಹಿಸಿದ ಸರ್ವ ಕವಿ ಹೃದಯಗಳಿಗೂ ಧನ್ಯವಾದಗಳು* 🙏🏻☔🙏🏻☔🙏🏻❤️🙏🏻☔🙏🏻☔🙏🏻 *💧ಇಂದಿನ ಅತ್ಯುತ್ತಮ ಬರಹ💧* *🏆ಶಂಕರಾನಂದ ಹೆ...

ಕರುನಾಡ ಹಣತೆ ಬಳಗದಲ್ಲಿ ಮೂರನೇ ಸ್ಥಾನ ಅಣ್ಣ ತಂಗಿಯರ ಬಂದ

ಬಾನುವಾರ ಕರುನಾಡ ಹಣತೆ ಕವನ ಸ್ಪರ್ಧೆಗೆ   ಅಣ್ಣ ತಂಗಿಯರ ಬಂಧ ರಾಖಿಯ ಹಬ್ಬವು ಬಂದಿಹುದು ಸಹೋದರ ಪ್ರೇಮವ ಸಾರುವುದು ತಂಗಿಯು ಕಟ್ಟುವಳು ರಾಖಿಯನು ಅಣ್ಣನು ಕೊಡುವನು ರಕ್ಷೆಯನು ಸಹೋದರ ಸಹೋದರಿಯರ ಬಂಧ ಸಾರುತಿದೆ ರಕ್ಷಾಬಂಧನದ ಈ ಬಂಧ ಅಣ್ಣ ತಂಗಿಯರ ಈ ಪ್ರೀತಿಯ ಬಂಧ ಜನುಮ ಜನುಮದಾ ಅನುಬಂಧ ಹಣೆಗೆ ಹಚ್ಚುತ ತಿಲಕವನು ಕೈಗಳಿಗೆ ಕಟ್ಟುವಳು ರಾಖಿಯನು ಆರತಿ ಮಾಡಿ ಸಿಹಿಯನು ತಿನಿಸಿ ತಂಗಿಯು ಬೇಡುವಳು ಆಶೀರ್ವಾದವನು ಶ್ರೀಕೃಷ್ಟನ ಕರಗಳ ಗಾಯವ ಕಂಡು  ತನ್ನ ಯ ಸೀರೆಯ ಅಂಚನು ಹರಿದು ಕಟ್ಟಿದಳಂದು  ದ್ರುಪದನ ಕುವರಿ ಪಡೆಯುತ ಶ್ರೀ ಕೃಷ್ಣ ನ ರಕ್ಷೆಯನು ನೂಲಿನ ಎಳೆಯಲಿ ಸಹೋದರ ಪ್ರೇಮ ತುಂಬಿದೆ  ಸಹೋದರಿಯ ರಕ್ಷಣೆಯ ನೇಮ ಸಹೋದರಿಯ ಕೈಯಿಂದ ಕಟ್ಟುವ ರಾಖಿ ಸಹೋದರನ ಆಯುರಾರೋಗ್ಯಕೆ ಸಾಕ್ಷಿ ರಕ್ಷಾ ಬಂಧನದ ಶುಭಘಳಿಗೆ ಭರವಸೆ ಬೆಸೆಯುವ ಈ ಘಳಿಗೆ ನಾಡಿನೆಲ್ಲೆಡೆ ತುಂಬಿದೆ  ಸಂಭ್ರಮವು ಸಾರಿದೆ ಅಣ್ಣ ತಂಗಿಯರ  ಬಂಧವನು ಪಂಕಜಾ.ಕೆ.ಮುಡಿಪು ಹೆಸರು...ಪಂಕಜಾ.ಕೆ.ಮುಡಿಪು ವಿಳಾಸ..ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ ಶ್ರೀ ಗಣೇಶ ಕೃಪಾ .ಮುಡಿಪು ಅಂಚೆ ..ಕುರ್ನಾಡು ..ದ.ಕ.574153 ಮೊಬೈಲ್ ನಂಬರ್ 9964659620

ನಾಟಕ

ಮಾನ್ಯರೇ, ನಿಮ್ಮ ಮೇಲ್ ತಲುಪಿದೆ. ಫಲಿತಾಂಶ ಹತ್ತು ದಿನದೊಳಗೆ ನಮ್ಮ ಗ್ರೂಪ್ ನಲ್ಲಿ‌ಪ್ರಕಟಿಸಲಾಗುವುದು. ನಮ್ಮ ಗ್ರೂಪ್  :  https://chat.whatsapp.com/ C03ml0zblTCIJXRMXoebU7 ಧನ್ಯವಾದಗಳು💐 ನವಪರ್ವ ಫೌಂಡೇಶನ್ (ರಿ.) ಬೆಂಗಳೂರು Hide quoted text On Mon, 30 Mar, 2020, 4:04 PM pankaja K, < pankajarambhat@gmail.com > wrote: ಸಾಹಿತ್ಯ ಸಂಕ್ರಾಂತಿ ಸ್ಪರ್ಧೆಗಾಗಿ  ನಾಟಕ ರಚನೆ  ಕೊರೊನಾ ಜಾಗೃತಿ ದೃಶ್ಯ .1 ವಿಮಾನ ನಿಲ್ದಾಣದ ಹೊರಗೆ  ವೈಭವ್ ನ ತಂದೆ ಸಂಕೇತ್ ತಾಯಿ  ಸರ್ವಾಣಿಹಾಗೂ ಇನ್ನೊಂದು ಕಡೆ ರಾಜುವಿನ  ತಂದೆ  ಮಲ್ಲೇಶ್ ತಾಯಿ. ಗೌರಿ  ಕಾತರದಿಂದ ಕಾಯುತ್ತಿರುವುದು ಸಂಕೇತ್. ...ಈಗ ಎಲ್ಲಾ ಕಡೆ ಕೊರೊನಾ ಇರುವುದರಿಂದ ನಮ್ಮ ಮಗ ವೈಭವ್ ಆದಷ್ಟು ಬೇಗ ಊರಿಗೆ ಬಂದರೆ ಒಳ್ಳೆಯದು ಸರ್ವಾಣಿ...ಹೌದು ನಮಗೆ ಇರುವವ ಒಬ್ಬ ಮಗ ದೇವರು ಅವನನ್ನು ಚೆನ್ನಾಗಿ ಇಟ್ಟಿರಲಿ ಯಾವಾಗ ಅವನನ್ನು ನೋಡುವೇನೋ ಎಂದು ಮನಸು ತುಡಿಯುತ್ತಿದೆ ಅಷ್ಟರಲ್ಲಿ ವಿಮಾನ ನಿಲ್ದಾಣದಿಂದ ವೈಭವ್ ಹೊರಗೆ ಬರುವುದು ಕಂಡು ಸಂಕೇತ್..ಆಗೋ ನಿನ್ನ ಮಗ ಬಂದ ಇನ್ನು ನೀನು ಉಂಟು ಅವನು ಉಂಟು ಈ ಪಾಪದ ಪ್ರಾಣಿಯ ನೆನಪು  ಆಗುತ್ತದೋ ಇಲ್ಲವೋ  (ನಗು) ಸರ್ವಾಣಿ..ಹೋಗಿ ನೀವೊಬ್ಬರು ಇಲ್ಲಿಯೂ ನನ್ನನ್ನು ಕೆಣಕದಿದ್ದರೆ ನಿಮಗೆ ಆಗೋಲ್ಲವೇ ( ಹುಸಿ ಮುನಿಸಿನಲ್ಲಿ) ಸಂಕೇತ್..ಹತ್ತಿರ ...

ಚಿತ್ರಕ್ಕೊಂದು ಕಥೆ ಕಲಾಕಾರ

ಕವಿ ಸಾಹಿತಿಗಳ ಜೀವಾಳ ಚಿತ್ರ ಕಥಾ ಸ್ಪರ್ಧೆಗಾಗಿ   ಕಲಾಕಾರ ಶಿವಪ್ಪ ಒಬ್ಬ ಅದ್ಬುತ ಶಿಲ್ಪಿ.ಕಲ್ಲಿನಿಂದ ವಿವಿಧ ಶಿಲ್ಪಕಲೆಗಳನ್ನು ಮಾಡುವುದರಲ್ಲಿ ಸಿದ್ದಹಸ್ತರೆಂದು ಹೆಸರುವಾಸಿಯಾಗಿದ್ದರು. ಕಲ್ಲಿನಲ್ಲಿ ಅನೇಕ ದೇವರ ಮೂರ್ತಿ ಗಳನ್ನು ಆತ  ಕೆತ್ತಿದ್ದ . ಭಾರತದ ಹೆಚ್ಚಿನ ದೇವಸ್ಥಾನಗಳ ಶಿಲ್ಪಗಳು ಆತನ ಕೈ ಚಳಕದಿಂದ ನಿರ್ಮಾಣವಾಗಿದ್ದುದಾಗಿತ್ತು. ಬಾಲ್ಯದಿಂದಲೂ  ಬಿಡದೆ ಮಾಡಿದ ಕಾಯಕವಾಗಿದ್ದರೂ .ಪ್ರಾಯಸಂದ ಆತನಿಗೆ ಇಂದು ಅದು ಅನಿವಾರ್ಯವಾಗಿತ್ತು .         .        ತನ್ನ ಒಬ್ಬನೇ ಮಗ ಹಾಗೂ ಸೊಸೆಯನ್ನು ಒಂದೇ ದಿನದಲ್ಲಿ ಕಳೆದುಕೊಂಡ ಶಿವಪ್ಪನಿಗೆ  ಮೊಮ್ಮಗಳು ಶ್ರುತಿಯೇ ಈಗ  ಬಾಳಿನ ಬೆಳಕು .ಅವಳನ್ನು ದೂರದ ಹಾಸ್ಟೆಲ್ ನಲ್ಲಿ ಬಿಟ್ಟು ವಿದ್ಯೆಕಲಿಸುತ್ತಿದ್ದ  ಶಿವಪ್ಪನಿಗೆ ತನ್ನ ನಂತರ ತನ್ನ ಕುಲಕಸುಬನ್ನು ಮುಂದುವರಿಸಲು ಯಾರೂ ಇಲ್ಲವೆನ್ನುವ ಚಿಂತೆಯಿದ್ದರೂ  ಮೊಮ್ಮಗಳ ನಗುಮುಖವನ್ನು ನೋಡಿ ತನ್ನ ದುಃಖವನ್ನು ಮರೆಯುತ್ತಿದ್ದ.         ಆ ದಿನ ಮೊಮ್ಮಗಳು ಓದು ಮುಗಿಸಿ ಅಜ್ಜನ ಮನೆಗೆ ಬಂದಿದ್ದಳು.ಅಜ್ಜನ ಕೆಲಸವನ್ನು ನೋಡುತ್ತಾ ಅಜ್ಜನಿಗೆ ತನ್ನ ಕಾಲೇಜಿನ ಅನುಭವಗಳನ್ನು  ರಸವತ್ತಾಗಿ ಹೇಳುತ್ತಾ ನಗುತ್ತಿದ್ದ ಅವಳನ್ನು ಕಂಡು ಶಿವಪ್ಪ ತನ್ನ ಕಾಯಕವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದ ಮೊಮ್ಮಗಳಿಗೆ ಆದಷ್ಟು...

ಕವಿ ಸಾಹಿತಿಗಳ ಜೀವಾಳ ಮಮತೆಯ ಮಡಿಲು ಚಿತ್ರಕ್ಕೊಂದು ಕವನ

ಕವಿ ಸಾಹಿತಿಗಳ ಜೀವಾಳ ಚಿತ್ರಕವನ ಸ್ಪರ್ಧೆಗಾಗಿ  ಚಿತ್ರಕ್ಕೊಂದು ಕವನ ಮಮತೆಯ ಮಡಿಲು ಹಳೆಯ ಪುಸ್ತಕ ಬಿಡಿಸಿ ಕಥೆಗಳ ಓದಿ ಹೇಳುವ ಅಜ್ಜಿಯ ಮಡಿಲಲಾಡುವ ಮುದ್ದು ಕುವರಿಯ ಕಂಡ ಕಂಗಳು ತುಂಬಿವೆ ತನ್ನ ಪುಟ್ಟ ಕರಗಳಿಂದ ಕಣ್ಣ  ನೀರನು ಒರಸುತ ಅಜ್ಜಿ ಮುಖದಲಿ ನಗುವ ಅರಳಿಸಿ ಮುದ್ದು ಮಾಡುತ ಮುಗ್ಧ ಬಾಲೆಯು ನಗುವಳು  ಪ್ರಾಯ ಸಂದ  ಸಮಯದಲ್ಲಿ ಮೊಮ್ಮಕ್ಕಳ ಆಟಪಾಠವು ಹಿರಿಯ ಜೀವಕೆ ಕೊಡುವ ಸಂತಸ ಹೇಗೆ ಹೇಳಲಿ ಅರಿಯೆನು ಹಿರಿಯರನ್ನು ಪ್ರೀತಿ ತೋರುತ ರಕ್ಷಣೆಯನು ಮಾಡಿರಿ ಸಾಕಿ ಸಲಹಿದ  ಋಣವನೆಂದು ಮರೆಯಬಾರದು ನೋಡಿರಿ ಪ್ರೀತಿ ತೋರುವ ಜೀವವಿರಲು ಮನದಿ ತುಂಬುವುದು ಸಂತಸ ಹಿರಿಯರ ಹಾರೈಕೆಯಿರಲು ಬಾಳು ಬೆಳಗುವುದು ಖಂಡಿತ ಪಂಕಜಾ.ಕೆ.ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಚಿತ್ರಕ್ಕೊಂದು.ಕಥೆ ಕವಿ ಸಾಹಿತಿಗಳ ಜೀವಾಳ ವೃದ್ಧ.ಮಾತೆಯ ನೋವು

ಕವಿ ಸಾಹಿತಿಗಳ ಜೀವಾಳ ಚಿತ್ರಕ್ಕೊಂದು ಕಥೆ   ವೃದ್ಧ ಮಾತೆಯ ನೋವು ಗಂಡ ತೀರಿಹೋದ ಮೇಲೆ ಸಾವಿತ್ರಮ್ಮ ಎಳೆಯ ಮಗು ರಾಕೇಶನನ್ನು ಕಟ್ಟಿಕೊಂಡು ಪಟ್ಟ ಕಷ್ಟ ಅಷ್ಟಿಷ್ಟಲ್ಲ.ಇನ್ನೂ ಎಳೇಹರೆಯದ ಆಕೆ ಗಂಡಸರ ಕೆಟ್ಟ ಕಣ್ಣುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಾ ಮನೆಕೆಲಸ ಮಾಡಬೇಕಾದರೆ ಸಾಕು ಸಾಕಾಗುತ್ತಿತ್ತು.ಎಷ್ಟೋ ಬಾರಿ ಆತ್ಮಹತ್ಯೆ ಮಾಡಿಕೊಳ್ಳೋಣ ಎನ್ನುವಷ್ಟು ಬದುಕು ಬೇಸರವಾಗಿದ್ದುದುಂಟು ಆದರೆ ತಾನು ಸತ್ತರೆ  ತನ್ನ ಮಗ ನಿರ್ಗತಿಕನಾಗುತ್ತಾನೆ,ಹಾಗಾಗಬಾರದು ಹೇಗಾದರೂ ಮಗನನ್ನು ಒಂದು  ನೆಲೆಗೆ ಹಚ್ಚಬೇಕು ಎಂದು ದೃಢಸಂಕಲ್ಪದಿಂದ ಆಕೆ ತನ್ನೆಲ್ಲ ದುಃಖ ನುಂಗಿಕೊಂಡು ಕೆಲಸ ಮಾಡುತ್ತಿದ್ದಳು.ರಾಕೇಶನಾದರೊ ಜಾಣ ಅಮ್ಮನ ಕಷ್ಟ ತಿಳಿದ ಆತ ಸ್ವಲ್ಪ ದೊಡ್ಡವನಾದ ತಕ್ಷಣ ಶಾಲೆ ಮುಗಿದ ಮೇಲೆ ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿ ತನ್ನ  ಶಾಲಾಶುಲ್ಕಕ್ಕಾಗುವಷ್ಟು  ಸಂಪಾದಿಸುತ್ತಿದ್ದ. ಜಾಣನಾಗಿದ್ದರಿಂದ ಅವನಿಗೆ ವಿದ್ಯಾರ್ಥಿವೇತನವೂ ಬರುತ್ತಿದ್ದುದರಿಂದ ಇದ್ದುದರಲ್ಲಿ ತಕ್ಕಮಟ್ಟಿಗೆ ತಾಯಿ ಮಗ ಆರಾಮವಾಗಿದ್ದರು. ರಾಕೇಶ್ ನ ವಿದ್ಯಾಭ್ಯಾಸ ಮುಗಿದು ಆತನಿಗೆ ಒಂದು ಒಳ್ಳೆಯ ಕೆಲಸ ಆದಾಗ ಅವನು ತಾಯಿಯನ್ನು ಇತರರ ಮನೆ ಕೆಲಸದಿಂದ ಬಿಡಿಸಿ  ತನ್ನೊಡನೆ ಕರೆದು ಕೊಂಡು ಹೋದ ಅಲ್ಲಿ ಅವನನ್ನು ಮೆಚ್ಚಿ ಬಂದ ಹೆಣ್ಣು ರಶ್ಮಿ ಮನೆ ಮನ ಎರಡನ್ನು ಬೆಳಗಿ  ಎಲ್ಲರ ಜತೆ ಹೊಂದಿಕೊಂಡು ಇದ್ದಳು ಇತ್ತೀಚೆಗೆ ಮಗಳು ಶ್ರಾವ್ಯ...

ನೆನಪಿನ ಕಾಣಿಕೆ ಕಥೆ ಮಣ್ಣಿನ ಋಣ ನವಪರ್ವದಲ್ಲಿ ಅತ್ಯುತ್ತಮ

ನವಪರ್ವ ಬಳಗದಲ್ಲಿ ಅತ್ಯುತ್ತಮವೆಂದು ಆಯ್ಕೆಯಾದ ನನ್ನ ಕಿರು ಕಥೆ ಕೊಟ್ಟಪದ..ನೆನಪಿನ ಕಾಣಿಕೆ ಮಣ್ಣಿನ ಋಣ    ತುಂಬು ಬಡತನದಲ್ಲಿ ಬೆಳೆದ ಸಾಕೇತನಿಗೆ ತನ್ನ ಬಾಲ್ಯ ಮಿತ್ರ ದನುಷ್ ಎಂದರೆ ಅಚ್ಚುಮೆಚ್ಚು .ಇಬ್ವರೂ ಒಬ್ಬರಿನ್ನೊಬ್ಬರು  ಬಿಟ್ಟಿರಲಾರದಷ್ಟು ಆತ್ಮೀಯರಾಗಿದ್ದರು.ಬಡವನಾಗಿದ್ದ ಸಾಕೇತನು ಓದು ಬರಹದಲ್ಲಿ ಮುಂದಿದ್ದರೂ ,ತನ್ನ ಬಡತನದ ಕಾರಣದಿಂದಾಗಿ ಮುಂದೆ ಕಲಿಯುವ ತನ್ನ ಹಂಬಲವನ್ನು  ಬಿಟ್ಟು ಬಿಡಬೇಕಾದ  ಪರಿಸ್ಥಿತಿ ಬಂತು .ಇದನ್ನು ತಿಳಿದ ಆತನ ಗೆಳೆಯ ದನುಷ್ ತನ್ನ ತಂದೆ ತನಗೆ ಕೊಟ್ಟ ಪ್ಯಾಕೆಟ್ ಮನಿಯಿಂದ ಗೆಳೆಯನ ಶಾಲೆಯ ಶುಲ್ಕ ವನ್ನು ಕಟ್ಟಿ ಗೆಳೆಯನ ವಿದ್ಯಾಭ್ಯಾಸ ಪೂರ್ಣವಾಗುವಂತೆ ನೋಡಿಕೊಂಡ .ಮಿತ್ರನ ಈ ಒಂದು ಉಪಕಾರದಿಂದ ಕಣ್ಣು ತುಂಬಿ ಬಂದ  ಸಾಕೇತ್ ಗೆಳೆಯನ ಕೈಯನ್ನು ಹಿಡಿದುಕೊಂಡು ಅತ್ತು ಬಿಟ್ಟ   .ಗೆಳೆಯ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋಗುವ ತನ್ನ ನಿರ್ಧಾರವನ್ನು ತಿಳಿಸಿದಾಗ ಆತನಿಗೆ ತನ್ನ ನೆನಪಿನ ಕಾಣಿಕೆಯಾಗಿ ಸಾಕೇತ್ ಚಿಕ್ಕದಾದ ಒಂದು   ಬಾಟಲಿಯನ್ನು ಕೊಟ್ಟು ನಿನಗೆ ಕೊಡಲು ನನ್ನಲ್ಲಿ ಇದರ ಹೊರತು ಬೇರೇನೂ ಇಲ್ಲ  ದಯವಿಟ್ಟು ಇದನ್ನು ತೆಗೆದುಕೊ ಮತ್ತು ಜೋಪಾನವಾಗಿ  ಇಟ್ಟುಕೊ ನಿನ್ನ ವಿದ್ಯೆ ನಿನ್ನ ತಾಯ್ನಾಡಿನ ಉನ್ನತಿಗೆ ಉಪಯೋಗವಾಗಲಿ ಎಂದು ಹಾರೈಸಿ ಗೆಳೆಯನನ್ನು ಅಪ್ಪಿ ಕಣ್ಣೀರಿಟ್ಟು ಬೀಳ್ಕೊಟ್ಟ. ಹೋಗುವ ಅವಸರದಲ್ಲಿ ಇದ್...

ಹಸಿರನು ಉಳಿಸೋಣ

ಹಸಿರನು ಉಳಿಸೋಣ ವಸಂತಮಾಸದಿ ಮಾಮರದಲ್ಲಿ ಕೋಗಿಲೆ ರಾಗದಲಿ ಹಾಡುತಿದೆ ಕೋಗಿಲೆ ಹಾಡಿನ ಇಂಚರ ತುಂಬಿ ಮೈಮನವೆಲ್ಲಾ ಅರಳುತಿದೆ ಅರಳಿದ ಹೂಗಳ ಗಂಧವು ಹಬ್ಬಿ ಮನಕೆ  ಮುದವನು  ತುಂಬುತಿದೆ ಹಕ್ಕಿಗಳಿಂಚರ ಕಿವಿಗಳ ತುಂಬಿ ಕನಸಿನಲೋಕಕೆ ಸಾಗುತಿದೆ ಮನದಲಿ ತುಂಬಿದ ಬೇಸರ ಕಳೆದು ಹಿಗ್ಗಿನ  ಬುಗ್ಗೆಯು ಉಕ್ಕುತಿದೆ ಇನಿಯನ ನೆನಪದುಮನದಲಿ ನುಸುಳಿ ಲಜ್ಜೆಯು  ಮೈ ಮನದಲಿ ತುಂಬುತಿದೆ ಮೂಡಣದಲ್ಲಿ ಮೂಡುವ ರವಿಯು ಬಾಳಿಗೆ ರಂಗನು ತುಂಬುವನು ಬಾನಲಿ ಕಲಸಿದ ಚೆಲುವಿನ ಬಣ್ಣ ಕಣ್ಮನ ತುಂಬುತ ಸೆಳೆಯುತಿದೆ ಹಸಿರನು ಉಳಿಸಿ ಬೆಳೆಯುತಲಿದ್ದರೆ ಕೊಡುವುದು ನಮಗೆ ಉಸಿರನ್ನು ಸುಂದರ ಪರಿಸರ ಇರುತಿರೆ ಎಲ್ಲೆಡೆ ರೋಗದ ಭೀತಿಯು ತೊಲಗುವುದು ಹಸಿರೇ ಉಸಿರು ಎನ್ನುವ  ಸತ್ಯವ ತಿಳಿಯುತ ನಾವು ಹಸುರನು ಬೆಳೆಸೋಣ ನಾಳೆಯ ಬಾಳಿನ ನೆಮ್ಮದಿಗಾಗಿ ಹಸಿರನು  ಬೆಳೆದು ಉಳಿಸೋಣ ಪಂಕಜಾ.ಕೆ.ಮುಡಿಪು

ಹನಿ ಹನಿ ಇಬ್ಬನಿ

ಹನಿ ಹನಿ ಇಬ್ಬನಿ ಸ್ಪರ್ಧೆಗಾಗಿ ಗುರಿ ಮನದ ತುಂಬಾ ಕನಸುಗಳು ತುಂಬಿ ನಿಂತು ಕಾಡಿದೆ ನನಸು ಮಾಡ ಲದಕೆ ನಾವು ನಿತ್ಯ ಶ್ರಮಿಸಬೇಕಿದೆ ಭರವಸೆಯ ಬೆಳಕಿನಲಿ ಬಾಳ ದೋಣಿ ಸಾಗಿದೆ ಗುರಿಯ ಸೇರಲದಕೆ ನಾವು ಛಲವ ತುಂಬ ಬೇಕಿದೆ ಕಲ್ಲು. ಮುಳ್ಳು ಏನೇ ಇರಲಿ ಸರಿಸಿ  ನಡೆಯ ಬೇಕಿದೆ ಕಷ್ಟ ಸುಖವ ಸಹಿಸಿಕೊಂಡು ತೀರ ಸೇರಬೇಕಿದೆ ಕೋಪ ದ್ವೇಷ ಮರೆತು ನಾವು ಒಂದುಗೂಡಬೇಕಿದೆ ನಾವು ಎಲ್ಲಾ ಒಂದೇ ಎನುತ ನಗುತ ಬಾಳಬೇಕಿದೆ ಪಂಕಜಾ.ಕೆ.ಮುಡಿಪು

ಬಾಳಲು ಭಾರವಸೆಯಿರಲಿ ಕಾವ್ಯಾಕುಟ ಮೆಚ್ಚುಗೆ

ಕಾವ್ಯಕೂಟ ಸ್ಪರ್ಧೆಗಾಗಿ ಬಾಳಲಿ ಭರವಸೆಯಿರಲಿ ಸುತ್ತಲೆಲ್ಲಾ  ಕತ್ತಲಾದರೂ ದೈರ್ಯಗುಂದದೆ ನಡೆಯಲು ಬಾಳ ದಾರಿಯ ಗುರಿಯ ಸೇರಲು ಬೆಳ್ಳಿ ಚುಕ್ಕೆಯು ಕಾಣುವುದು ಕಲ್ಲು ಮುಳ್ಳುಗಳು ಅಡ್ಡಬಂದರೂ ಹೆದರಬಾರದು ಎಂದಿಗೂ ನಡೆವದಾರಿಯ ಮುಳ್ಳ ಸರಿಸುತ ನಡೆದು  ಸಾಧಿಸು ಗುರಿಯನು ಗುರಿಯ ಸೇರಲು ಛಲದಲಿ ಎದ್ದು ನಡೆ ಮುಂದಕೆ ಸೋತೆನೆಂದು ಅಳುತ ಕುಳಿತರೆ ಗೆಲುವು ಸಿಗುವುದು ಸಾಧ್ಯವೇ ಬದುಕ ತುಂಬಾ ಭರವಸೆಯನು ತುಂಬಿ ಸಾಗಿಸು ಬಾಳನು ದ್ವೇಷ ಅಸೂಯೆಯ ಸುಟ್ಟು ಮನದಲಿ ಪ್ರೀತಿ ಕರುಣೆಯ ತುಂಬಿಸು ಪಂಕಜಾ.ಕೆ.ಮುಡಿಪು

ಕಾವ್ಯ ಮೈತ್ರಿ ಅಣ್ಣನ ರಕ್ಷೆ ತಂಗಿಯ ಬಯಕೆ ಚಿತ್ರಕ್ಕೊಂದು ಕವನ

ಕಾವ್ಯಮೈತ್ರಿ ಸ್ಪರ್ಧೆಗಾಗಿ ಚಿತ್ರಕ್ಕೊಂದು ಕವನ ಅಣ್ಣನ ರಕ್ಷೆ ತಂಗಿಯ ಬಯಕೆ ಅಣ್ಣನ ಕೈಗಳಿಗೆ ರಾಖಿಯ ಕಟ್ಟುತ ತಂಗಿಯು ಬಂದಿಹಳು ಕರಗಳ ಹಿಡಿದು ರಾಖಿಯ ಕಟ್ಟಿ ತಿಲಕವನಿಟ್ಟಿಹಳು ಅಣ್ಣನ ರಕ್ಷೆಯು ತಂಗಿಯ ಬಾಳಿಗೆ ಉಸಿರನು ತುಂಬುವುದು ಪ್ರೀತಿಯ ದ್ಯೋತಕ ರಾಖಿಯ ಹಬ್ಬವು ಸಡಗರ ತಂದಿಹುದು ಸಿಹಿಯನು ಹಂಚುತ ಉಡುಗೊರೆ ಪಡೆಯುತ ಸಹೋದರ ಪ್ರೀತಿಯ ತೋರುವಳು ಬಾತೃಪ್ರೇಮದ ಸಂಕೇತ ರಕ್ಷಾಬಂಧನದ ಈ ಸೂತ್ರ ಜನುಮ ಜನುಮದಾ ಅನುಬಂಧ ಪಂಕಜಾ.ಕೆ.ಮುಡಿಪು

ಟಂಕಾ ಗಳು ಖಿದ್ಮಾ

ಖಿದ್ಮಾ ಪೌಂಡೇಶನ್ ಸ್ಪರ್ಧೆಗಾಗಿ ಟಂಕಾಗಳು 1 ಸಾಹಿತ್ಯ ಸಾಹಿತ್ಯದಲಿ ತೊಡಗಿಕೊಳ್ಳುವುದು ಸೃಜನ ಶೀಲ ವ್ಯಕ್ತಪಡಿಸುವಲ್ಲಿ ಸಹಕಾರಿಯಾಗಿದೆ 2..ಸೇವೆ ಸೇವೆ ಮಾಡಲು ಮನಸ್ಸಿನಾಳದಲ್ಲಿ ಉತ್ಸ್ಸಾಹ ಬೇಕು ನಿಸ್ವಾರ್ಥ ಸೇವೆಯಲಿ ದೇವರನು ಕಾಣಿರಿ 3..ಸಂಘ ಸಂಘಜೀವಿಯ ಲಕ್ಷಣಗಳೆಲ್ಲವು ಮಾನವನಲಿ ತುಂಬಿಬಂದುದಾದರೆ ಜಗಮೆಚ್ಚಬಹುದು 4  ಸಾಧನೆ ಸಾಧನೆಯಲಿ  ಗುರುಹಿರಿಯರನು ಅನುಸರಿಸಿ ಯಶಸ್ಸು ನಿಮಗಾಗಿ ಕಟ್ಟಿಟ್ಟ ಬುತ್ತಿಯಲ್ಲ 5 ಸಮಾಜ ಸಮಾಜದಲ್ಲಿ ಬದುಕಬೇಕಿದ್ದರೆ ಹೊಂದಿಕೊಳ್ಳುವ ಗುಣವಿರದಿದ್ದರೆ ಬದುಕಲು ಸಾಧ್ಯವೇ ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ವನಸಿರಿ ಸ್ನೇಹ ಸಂಗಮ

ಸ್ಪರ್ಧೆಗಾಗಿ ದತ್ತ ಪದ  .. ....ಚಿಗುರು ವನಸಿರಿ ಮಾಮರದಲ್ಲಿ ತುಂಬಿದ ಚಿಗುರು  ಬದುಕಲಿ ಭರವಸೆ ತುಂಬಿಸಿದೆ ಮರದೆಡೆಯಲ್ಲಿ ಹಾಡುವ ಕೋಗಿಲೆ ಮನದಲಿ ಹೊಸ ಬಾವವ ಮೂಡಿಸಿದೆ ಎಲ್ಲೆಡೆ ಹರಡಿದ ಮಣ್ಣಿನ ಗಂಧವು ವರುಣನಾಗಮನವ ಸಾರುತಿದೆ ಪಡುವಣದಲಿ ಮುಳುಗುವ ರವಿ ಕಲಸಿದ ಬಾನಲಿ ಬಣ್ಣದ ಸವಿ ಬಾನಲಿ ಕಲಸಿದ ಚೆಲುವಿನ ಬಣ್ಣ ರಸಿಕರ ಮನವನು ಸೆಳೆಯುತಿದೆ ದೂರದ ಗಗನದಿ ಹಾರುವ ಹಕ್ಕಿಯು ಚುಕ್ಕಿಯ ತೆರದಲಿ ತೋರುತಿದೆ ಎಲ್ಲೆಡೆ ಹಬ್ಬಿದ ಹಸಿರಿನ ಸಿರಿಯಲಿ ಮೈಮನವೆಲ್ಲಾ ಅರಳುತಿದೆ ಕುಣಿಯುವ ನವಿಲಿನ ನರ್ತನ ಕಂಡು ಮನದಲಿ ಕವಿತೆಯ ಒರತೆಯ ಚಿಮ್ಮುತ್ತಿದೆ ಪಂಕಜಾ.ಕೆ. ಮುಡಿಪು

ಸಣ್ಣ ಕತೆ ವೀರಯೋಧ

 ವೀರಯೋಧ    ಸರಿತಾ ಹಾಗೂ  ಸಾಕೇತ್ ಕಾಲೇಜಿನ ದಿನಗಳಿಂದಲೂ ಒಬ್ಬರನ್ನೊಬ್ಬರು ತುಂಬಾ ಇಷ್ಟ ಪಟ್ಟಿದ್ದರು.ಇಬ್ವರೆ ಪರಿಚಯ ಸ್ನೇಹ ಕಾಲೇಜಿನ ಅಂತಿಮ ದಿನಗಳ ಹಂತಕ್ಕೆ ಬಂದಾಗ ಅದು ಬಿಟ್ಟಿರಲಾರದ ಬಂಧವಾಗಿ ಪರಿಣಮಿಸಿತ್ತು.                  ಕಾಲೇಜು ಮುಗಿದ ತಕ್ಷಣ ಸಾಕೇತ್ ತಾನು ಮೊದಲೇ  ನಿರ್ಣಯಿಸಿದಂತೆ ಸೇನೆಗೆ ಸೇರಿ ಯೋಧನಾಗುವ  ತನ್ನ ಕನಸನ್ನು ನನಸು ಮಾಡಲು ಹೊರಟು ಹೋಗಿದ್ದ.  ತಂದೆ ತಾಯಿ ಯಿಲ್ಲದ ಸರಿತಾ ಚಿಕ್ಕಪ್ಪನ ಆಶ್ರಯದಲ್ಲಿ ಕಲಿತು ಉದ್ಯೋಗ ಹಿಡಿದರೂ ಮದುವೆಯಾಗಲು ಒಪ್ಪದೆ   ಸಾಕೇತನ  ನೆನಪಿನಲ್ಲೇ ದಿನ ಕಳೆಯುತ್ತಿದ್ದಾಗ ಸಾಕೇತ್ ಬಂದು ಅವಳನ್ನು  ಅವಳ ಚಿಕ್ಕಪ್ಪನ ಒಪ್ಪಿಗೆ ಪಡೆದು ಮದುವೆಯಾಗುತ್ತಾನೆ .ಮದುವೆಯಾದ   ಕೆಲವೇ ದಿವಸಗಳಲ್ಲಿ ಕರ್ತವ್ಯಕ್ಕೆ ಹಿಂತಿರುಗಬೇಕಾಗಿದ್ದರಿಂದ ಆತ ಬಿಡಲಾರದೆ  ಸರಿತಾಳನ್ನು ಬಿಟ್ಟು ಹೋಗಿದ್ದ .ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ಶತ್ರುಗಳ ಕೈಯಲ್ಲಿ ಗುಂಡಿನೇಟು ತಿಂದು  ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸಾಕೇತ ನಿಗೆ ಸರಿತಾ  ಆತನ  ನೆನಪಿನ ಕಾಣಿಕೆಯು ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವುದನ್ನು ತಿಳಿಸಿದಾಗ  ,ಸಾಕೇತ್ ಅಚ್ಚರಿಯೆನ್ನುವಂತೆ ಚೇತರಿಸಿಕೊಂಡ .ಗುಂಡಿನೇಟಿನಲ್ಲಿ  ಕಾಲಿಗೆ ಊನವಾದ್ದರಿಂದ ಸಾಕೇತನನ್...

ನ್ಯಾನೊ ಕಥೆ ನಿಸ್ವಾರ್ಥ ಸ್ನೇಹ

ನಿಸ್ವಾರ್ಥ ಸ್ನೇಹ ಬಾಲ್ಯದಿಂದಲೂ ಒಬ್ಬರಿನ್ನೊಬ್ಬರ  ಕಷ್ಟ ಸುಖಗಳಿಗೆ ಜತೆಯಾಗಿದ್ದ ಸಾಗರ್ ಮತ್ತು ಸಂಕೇಶಿಯರ ನಿಸ್ವಾರ್ಥ ಸ್ನೇಹವನ್ನು ಕಂಡು ಸಮಾಜ ಅವರ ಬಗ್ಗೆ ಅಲ್ಲ ಸಲ್ಲದ ಮಾತುಗಳನ್ನು ಆಡಿ ನಾಲಿಗೆ ಹೊಲಸು ಮಾಡಿಕೊಳ್ಳುತ್ತಿತ್ತು  ಇದರಿಂದ ಹತಾಶಳಾದ ಸಂಕೇಶಿ ಅನಿವಾರ್ಯವಾಗಿ ಸಾಗರ ನ ಸ್ನೇಹವನ್ನು ಬಿಡಬೇಕಾಯಿತು. ಒಂದು ಗಂಡು ಹೆಣ್ಣು ಸ್ನೇಹಿತರಾಗಿದ್ದರೆ ಪ್ರಪಂಚ ಅವರನ್ನು ಯಾಕೆ ಈ ರೀತಿ ಕೆಟ್ಟ ಕಣ್ಣಿನಿಂದ ನೋಡುತ್ತದೆ ಎನ್ನುವುದು ತಿಳಿಯದೆ ನಿಸ್ವಾರ್ಥ ಸ್ನೇಹ ಜೀವಿಗಳಿಬ್ಬರೂ ಕಣ್ಣೀರಿಡುವಂತಾಯಿತು ಪಂಕಜಾ.ಕೆ. ಮುಡಿಪು

ಅಲ್ವಾ ಹನಿ ಕವನದ ಬಗ್ಗೆ ವಿಮರ್ಶೆ

[01/08, 7:55 AM] pankajarambhat: 🙏 ನನ್ನ ಹನಿಗವನದ ಮೇಲಿನ ಶ್ರೀ ಶ್ರೀಪಂಕಜಾ.ಕೆ ಮುಡಿಪು. ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ ಮೇಡಂ ರವರ "ಅಲ್ವಾ"ಹನಿಗವನವು ಮನೆಯಾಕೆ ಮಾಡಿದ ಹಲ್ವವನು ತಿಂದು ಇದ್ದ ಹಲ್ಲು ಸೆಟ್ಟು ಮುರಿದುಹೋಗಿ ವ್ಯಕ್ತಿಯು ಗುರುತು ಜನರಿಗೆ ತಿಳಿಯದಂತಾಗಿ ವ್ಯೆಕ್ತಿಯು ನೀನೆಯೊ ಅಥವಾ ನಾವು ತಿಳಿದದ್ದು ತಪ್ಪೊ  ಎನ್ನುವ  ದ್ವಂದ್ವಕ್ಕೊಳಗಾಗುವ ಸ್ವಾರಸ್ಯಕರ  ಸನ್ನಿವೇಶವನ್ನು ಸೊಗಸಾಗಿ ಪ್ರತಿಬಿಂಬಿಸುತ್ತದೆ. ತಮಗೆ ಶುಭವಾಗಲಿ ಮೇಡಂ💐💐 ಧನ್ಯವಾದಗಳು 💐💐 [01/08, 7:55 AM] pankajarambhat: ನಮಸ್ತೇ🙏 ಪಂಕಜಾ.ಕೆ.ಮುಡಿಪು.ಮೇಡಂ ರವರಿಗೆ,ಹಾಸ್ಯಗವನದ ಶೀರ್ಷಿಕೆ:-ಅಲ್ವಾ,ಸುಂದರ ಹಾಸ್ಯದಿಂದ ಕೂಡಿದ ಹನಿಗವನ ಮೇಡಂ,ನೀವು ಯಜಮಾನ್ರುಗೆ ಆ ರೀತಿಯ  ಹಲ್ವಾ  ಮಾಡಿ ಕೊಟ್ಟು,ಹಲ್ಲುಸೆಟ್ ಮುರಿಸಿ, ಯಾರೆಂದು ತಿಳಿಯದಾಗಿ ಮಾಡಿ,ನೀವಾಲ್ವ ಎನ್ನುವಂತೆ ಮಾಡಿರುವುದು ಸೂಪರ್ ಮೇಡಂ.👌👏👍🌺🙏 [01/08, 7:55 AM] pankajarambhat: ಪಂಕಜಾ ಕೆ ಮುಡಿಪು... ಮೇಡಂ ನಿಮ್ಮ *ಅಲ್ವಾ* ಸುಪ್ಪರ್ ಹನಿ... ನಗು ಉಕ್ಕಲೇ ಬೇಕು... ಅಲ್ಲಿ ಮತ್ತೂ *ಅಲ್ವಾಕ್ಕೆ* *ಹಲ್ವಾನ* ಪ್ರಾಸ ಕೊಟ್ಟಿದ್ದರೆ ಇನ್ನೂ ಅದ್ಭುತ ಪಂಚ್ ಹೊಡೀತಿತ್ತು ನೋಡಿ...👌💐👏👍ಅಭಿನಂದನೆಗಳು ನಿಮಗೆ [01/08, 7:55 AM] pankajarambhat: ಪಂಕಜ ಕೆ ರವರ *ಅಲ್ವಾ * ಬರೀ ಒಂದು ಹಲ್ವಾ ತಿಂದ ಪರಿಣಾಮ ಇಷ್ಟು ಬದಲಾವಣೆ ...

ಹಾಸ್ಯ ಹನಿ ಕವನ ಅಲ್ವಾ

ಹಾಸ್ಯ ಹನಿ ಕವನ  ಅಲ್ವಾ ನನ್ನಾಕೆ ಮಾಡಿದ  ಹಲ್ವಾ ತಿಂದು  ಮುರಿಯಿತು  ನನ್ನ  ಸೆಟ್ಟು ಹಲ್ಲು ಕಂಡವರೆಲ್ಲಾ  ಕೇಳುತ್ತಿದ್ದಾರೆ ಈಗ  ಇದು ಯಾರು ನೀನೇ ಅಲ್ವಾ ಪಂಕಜಾ.ಕೆ ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ನ್ಯಾನೊ ಕತೆ ವಂಚಕಿ. ಸ್ನೇಹ ಸಂಗಮ ಬಳಗದಲ್ಲಿ ಮೆಚ್ಚುಗೆ

ವಂಚಕಿ  (ನ್ಯಾನೊ ಕಥೆ) ಸ್ನೇಹ ಹಸ್ತ ಚಾಚಿದ್ದ ಸರಿತಾಳನ್ನು ಮುಕ್ತ ಮನಸ್ಸಿನಿಂದ ಸ್ನೇಹಿತೆಯೆಂದು ಒಪ್ಪಿಕೊಂಡ ರಾಧಿಕಾ, ತನ್ನೆಲ್ಲ ಮನದುಮ್ಮಳವನ್ನು  ಗೆಳತಿಯ ಜತೆ  ಹಂಚಿಕೊಂಡು ನಿರಾಳವಾಗುತ್ತಿದ್ದಳು. ಯಾವುದೋ ಸಣ್ಣ ಕಾರಣಕ್ಕೆ ಅವರಿಬ್ಬರಲ್ಲಿ ಮನಸ್ತಾಪವಾದಾಗ,  ತನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುವ ಸರಿತಾಳನ್ನು ಕಂಡು ಸ್ನೇಹವೆಂದರೆ ಇದೇನಾ ಎಂದು ತಿಳಿದು  ರಾಧಿಕಾಳ ಮನಸ್ಸು ಮುದುಡಿತು ಪಂಕಜಾ.ಕೆ. ಮುಡಿಪು