[10/01, 2:50 PM] pankajarambhat: ಸ್ವಾತಂತ್ರ್ಯ (ನ್ಯಾನೊ ಕಥೆ) ಹೆಣ್ಣು ಮಕ್ಕಳಿಗೂ ಸ್ವಾತಂತ್ರ್ಯಬೇಕು . ಅವರಿಗೆ ಬೇಕಾದಂತೆ ಇರಲು ಅವರಿಗೂ ಹಕ್ಕಿದೆ. ಎಂದು ಉದ್ದುದ್ದ ಭಾಷಣ ಬಿಗಿಯುತ್ತಾ ಚಪ್ಪಾಳೆ ಗಿಟ್ಟಿಸುತ್ತಿದ್ದ ಆತ ಮನೆಯಲ್ಲಿ ತನ್ನ ಹೆಂಡತಿ ಮಗಳಿಗೆ ನೂರಾರು ಕಟ್ಟುಪಾಡುಗಳನ್ನು ಹಾಕಿದ್ದ ಪಂಕಜಾ .ಕೆ [10/01, 2:53 PM] pankajarambhat: ವಧು (ವರ) ಪರೀಕ್ಷೆ (ನ್ಯಾನೊ ಕಥೆ) ವಧು ಪರೀಕ್ಷೆ ಮಾಡಿ ನೋಡಿದ ಹುಡುಗಿಯರಲ್ಲೆಲ್ಲಾ ಏನಾದರೂ ಒಂದು ಕುಂದು ಕೊರತೆಯನ್ನು ಕಂಡು ಹುಡುಗಿಯರನ್ನು ನಿರಾಕರಿಸುತ್ತಿದ್ದ ಆತನನ್ನು ಅದೊಂದು ದಿನ ನೋಡಿದ ಹುಡುಗಿಯೇ ಬೇಡವೆಂದು ಹೇಳಿದಾಗ ಆತನಿಗೆ ತಾನು ನಿರಾಕರಿಸಿದ ಹುಡುಗಿಯರ ಪರಿಸ್ಥಿತಿಯ ಅರಿವಾಯಿತು [10/01, 2:57 PM] pankajarambhat: ನ್ಯಾನೊ ಕಥೆ (ಗಂಡು ಮಗು) ತಮಗೆ ಗಂಡು ಮಗುವೇ ಆಗಬೇಕು ಎನ್ನುವ ಹುಚ್ಚಿನಲ್ಲಿ ಆತ ಪ್ರತೀಬಾರಿ ಹೆಂಡತಿ ಗರ್ಭ ದರಿಸಿದಾಗಳೂ ಹೆಣ್ಣೆಂದು ತಿಳಿದ ತಕ್ಷಣ ನಿರ್ದಾಕ್ಷಿಣ್ಯವಾಗಿ ಅಭಾರ್ಷನ್ ಮಾಡಿಸುತ್ತಿದ್ದ ಕೊನೆಗೂ ಗಂಡು ಮಗುವನ್ನು ಪಡೆಯುವಲ್ಲಿ ಸಫಲನಾದ ಆತ ಈಗ ತನ್ನ ಮಗನಿಗೆ ಮದುವೆಗೆ ಹೆಣ್ಣು ಹುಡುಕುವ ಭರದಲ್ಲಿ ಇದ್ದಾನೆ ಪಂಕಜಾ. ಕೆ. [10/01, 3:02 PM] pankajarambhat: ತಾರತಮ್ಯ (ನ್ಯಾನೊ ಕಥೆ) ಹೆಣ್ಣು ಮಗುವಿಗೇಕೆ ವಿದ್ಯೆ ಎಂದು ಎಸ್ .ಎಸ್.ಎಲ್ ಸಿ. ಯಲ್ಲಿ ಉತ್ತಮ ಅಂಕ ಪಡೆದರೂ ಮ...